fbpx
ದೇವರು

ಯಾವ ಗಣೇಶನನ್ನು ಪೂಜಿಸಿದರೆ ಯಾವ ಗ್ರಹ ದೋಷ ನಿವಾರಣೆಯಾಗುತ್ತದೆ ಎಂದು ನಿಮಗೆ ಗೊತ್ತೇ ?

ಯಾವ ಗಣೇಶನನ್ನು ಪೂಜಿಸಿದರೆ ಯಾವ ಗ್ರಹ ದೋಷ ನಿವಾರಣೆಯಾಗುತ್ತದೆ ಎಂದು ನಿಮಗೆ ಗೊತ್ತೇ ?

ಪ್ರತಿಯೊಬ್ಬರು ಯಾವುದೇ ಕೆಲಸ ಪ್ರಾರಂಭಿಸುವುದಕ್ಕೂ ಮುಂಚೆ ಪೂಜೆ ಪ್ರಾರ್ಥನೆ ಸಲ್ಲಿಸುವುದು ವಿಜ್ಞ ವಿನಾಶಕ ಗಣೇಶನಿಗೆ.ನಮ್ಮ ಹಿಂದೂ ಧರ್ಮದಲ್ಲಿ ನಾವು ಎಲ್ಲೇ ಹೋದರು ಕಾಣುವುದು ಪ್ರಥಮ ಪೂಜೆ ಗಣೇಶನಿಗೆ ಉಳಿದಂತೆ ಆಮೇಲೆ ಬೇರೆ ದೇವರಿಗೆ.ಯಾವುದೇ ಕೆಲಸ ಪ್ರಾರಂಭ ಮಾಡುವುದಕ್ಕೂ ಮುನ್ನವೂ ಸಹ ಪ್ರಥಮ ಪೂಜೆ ಗಣಪತಿಗೆ ಸಲ್ಲಬೇಕು.

 

ನಮಗೆ ಅನೇಕ ವಿಧಗಳು,ಬಂಗಿಯಲ್ಲಿ,ಬಣ್ಣಗಳಲ್ಲಿ ಗಣೇಶನ ವಿಗ್ರಹಗಳು,ಮೂರ್ತಿಗಳು ದೊರೆಯುತ್ತವೆ.ಆದರೆ ನಮಗೆ ಯಾವ ಗಣಪತಿಯನ್ನು ಯಾರು ಪೂಜೆ ಮಾಡಬೇಕು  ? ಎಂದು ಗೊತ್ತಿಲ್ಲ.ಸುಮ್ಮನೆ ಮನಸ್ಸಿಗೆ ಇಷ್ಟವಾದ ಒಂದು ಗಣಪತಿಯನ್ನು ತಂದು ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತೇವೆ.

ಇಂದು ನಾವು ಇಲ್ಲಿ ಯಾವ ದೋಷ ಇರುವವರು ಯಾವ ಗಣಪತಿಯನ್ನು ಪೂಜಿಸಿದರೆ ಆ ಗ್ರಹದ ದೋಷ ನಿವಾರಣೆಯಾಗುವುದು ಎಂಬುದನ್ನು ತಿಳಿಯೋಣ.

1.ಸೂರ್ಯ ದೋಷ ನಿವಾರಣೆಗೆ.

 

 

ಸೂರ್ಯ ದೋಷ ನಿವಾರಣೆಗೆ ಕೆಂಪು ಚಂದನದಿಂದ ಮಾಡಿದ ಗಣಪತಿಯ ಮೂರ್ತಿಯನ್ನು ಪೂಜಿಸಬೇಕು ಹೀಗೆ ಮಾಡಿದರೆ ಸೂರ್ಯ ದೋಷ ನಿವಾರಣೆಯಾಗುತ್ತದೆ ಹಾಗೂ ಅನಾರೋಗ್ಯದಿಂದ ಚೇತರಿಸಿಕೊಳ್ಳಬಹುದು.

2.ಕುಜ ದೋಷಕ್ಕೆ.

 

ಕುಜ ದೋಷದಿಂದ ತುಂಬಾ  ಜನರ ವಿವಾಹ ವಿಳಂಬವಾಗುತ್ತಿರುತ್ತದೆ ಅಂದುಕೊಂಡ ಕೆಲಸ ಆಗದೆ ಇರುತ್ತದೆ.ಅಂತವರು ರಾಗಿ ರೂಪದಿಂದ  ಮಾಡಿದ ಗಣಪತಿಯನ್ನು ಪೂಜಿಸಿದರೆ ಕುಜ ದೋಷ ನಿವಾರಣೆಯಾಗುತ್ತದೆ.

4.ಬುಧ ಗ್ರಹದ ದೋಷಕ್ಕೆ.

 

ಬುಧ ಗ್ರಹದ ದೋಷ ಇರುವವರು ಪಚ್ಚೆ ಗಣಪತಿಯನ್ನು ಪೂಜೆ ಮಾಡಿದರೆ ದೋಷಗಳು ದೂರವಾಗಿ ವೃತ್ತಿ ಜೀವನ ಚೆನ್ನಾಗಿ ಸಾಗುತ್ತದೆ.

5.ಗುರು ಗ್ರಹದ ದೋಷಕ್ಕೆ.

 

ಗುರು ಗ್ರಹದ ದೋಷ ಇರುವವರು ಅರಿಶಿನ ಅಥವಾ ಚಂದನದಿಂದ ಮಾಡಿದ ಗಣಪತಿಯನ್ನು ಅಥವಾ ಬಂಗಾರದ ಅಥವಾ ಬಂಗಾರದ ಬಣ್ಣವನ್ನು ಹೊಂದಿರುವ ವಿನಾಯಕನನ್ನು  ಪೂಜಿಸಿದರೆ ಒಳ್ಳೆಯ ಅವಕಾಶಗಳು ಸಿಗುತ್ತವೆ.

6.ಶುಕ್ರ ಗ್ರಹ ದೋಷ.

 

ಶುಕ್ರ ಗ್ರಹ ದೋಷ ಇರುವವರು ಸ್ಪಟಿಕದಿಂದ ಮಾಡಿದ ವಿನಾಯಕನನ್ನು ಪೂಜಿಸಿದರೆ ಧನವಂತರಾಗುತ್ತಾರೆ ಹಾಗೆಯೇ ಸುಖ ಶಾಂತಿ ದೊರೆಯುತ್ತದೆ.

7.ಶನಿ ಗ್ರಹದ ದೋಷಕ್ಕೆ.

 

ಶನಿ ಗ್ರಹದ ದೋಷದಿಂದ ಬಳಲುತ್ತಿರುವವವರಿಗೆ ಕಪ್ಪು ಕಲ್ಲಿನಿಂದ ಮಾಡಿದ ಗಣೇಶನನ್ನು ಪೂಜಿಸಿದರೆ ಶನಿ ಗ್ರಹ ದೋಷ ದೂರವಾಗುತ್ತದೆ.

8. ರಾಹು ಗ್ರಹ.

ರಾಹು ಗ್ರಹದ ದೋಷದಿಂದ ಬಳಲುತ್ತಿರುವವರು ಜೇಡಿ ಮಣ್ಣಿನಿಂದ ಮಾಡಿದ  ಮಣ್ಣಿನ ಗಣೇಶನನ್ನು ಪೂಜಿಸಿದರೆ ಒಳ್ಳೆಯದು.

9.ಕೇತು ದೋಷ.

ಕೇತು ದೋಷವಿರುವವರು ಎಕ್ಕದ ಗಿಡದಿಂದ ಮಾಡಿದ ವಿನಾಯಕನನ್ನು ಪೂಜಿಸಿದರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

10 ಕೆಂಪು ಚಂದನ.

ಕೆಂಪು ಚಂದನದಿಂದ ಮಾಡಿದ ಗಣಪತಿಯನ್ನು ಪೂಜಿಸಿದರೆ ಅನಾರೋಗ್ಯದಿಂದ  ಬಳುತ್ತಿರುವವರು  ಬಹಳ ಬೇಗನೆ ಗುಣಮುಖರಾಗಿ ಆರೋಗ್ಯವಂತರಾಗಿ ಇರಬಹುದು.

ದೋಷಗಳು ಇರುವವರು ಅಥವಾ ದೋಷ ಇಲ್ಲದವರು ಸಹ ವಿನಾಯಕನನ್ನು ಪೂಜಿಸಿದರೆ ಅಷ್ಟ-ಐಶ್ವರ್ಯಗಳು ಸುಖ,ಶಾಂತಿ,ನೆಮ್ಮದಿ ಜೀವನದಲ್ಲಿ ನೆಲೆಸುತ್ತದೆ ಎಂದು ಪುರಾಣಗಳು ಹೇಳುತ್ತವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top