fbpx
ಆರೋಗ್ಯ

ರಕ್ತದ ಒತ್ತಡ ( ಬಿ.ಪಿ) ಜಾಸ್ತಿ ಮಾಡ್ಕೊಂಡು ಕೋಪ ಮಾಡ್ಕೊಳೋಬಹುದು ಈ ಮನೆ ಮದ್ದು ಮಾಡ್ಕೊಂಡು ಬಿ.ಪಿ ಗೆ ಟಾಟಾ ಬೈ ಬೈ ಹೇಳಿ..

ರಕ್ತದ ಒತ್ತಡ ( ಬಿ.ಪಿ) ಜಾಸ್ತಿ ಮಾಡ್ಕೊಂಡು ಕೋಪ ಮಾಡ್ಕೊಳೋಬಹುದು ಈ ಮನೆ ಮದ್ದು ಮಾಡ್ಕೊಂಡು ಬಿ.ಪಿ ಗೆ ಟಾಟಾ ಬೈ ಬೈ ಹೇಳಿ..

ರಕ್ತದೊತ್ತಡ ಎಂದರೆ ರಕ್ತದ ಪರಿಚಲನೆಯಾಗುವಾಗ ರಕ್ತನಾಳಗಳ ಗೋಡೆಗಳ ಮೇಲೆ ಆಗುವ ಒತ್ತಡ ಅಪಧಮನಿಗಳು ಮತ್ತು ಲೋಮನಾಳಗಳ ಮೂಲಕ ಹೃದಯದಿಂದ ದೇಹದ ಇತರ ಭಾಗಗಳಿಗೆ ಮತ್ತು ಅಭಿಧಮನಿಗಳ ಮೂಲಕ ಹೃದಯದ ಕಡೆಗೆ ರಕ್ತ ಹರಿಯುವಾಗ ರಕ್ತಪರಿಚಲನೆ ಒತ್ತಡ ಕಡಿಮೆಯಾಗುತ್ತಾ ಬರುತ್ತದೆ.ಅದು ಹೃದಯದಿಂದ ದೇಹದ ಇತರ ಭಾಗಗಳಿಗೆ ರಕ್ತವನ್ನು ಸಾಗಿಸುವ ಎಡ ತೋಳಿನ ಮೇಲ್ಭಾಗ ಅಥವಾ ಬಲ ಭಾಗದಲ್ಲಿರುವ ಪ್ರಮುಖ ರಕ್ತನಾಳ.

 

 

ಅಧಿಕ ಕೊಬ್ಬುವುಳ್ಳ ಪದಾರ್ಥ, ಸಿಹಿತಿಂಡಿಗಳು, ಕರಿದ ತಿಂಡಿ, ವನಸ್ಪತಿ, ತುಪ್ಪ, ಮೊಟ್ಟೆ, ಮಾಂಸಾಹಾರ ಮೊದಲಾದವುಗಳನ್ನು ವರ್ಜಿಸಲೇಬೇಕು. ಎಣ್ಣೆ ಹಾಗೂ ಉಪ್ಪಿನ ಬಳಕೆ ಹಿತಮಿತವಾಗಿರಬೇಕು. ಚಹಾ, ಕಾಫಿ ಸೇವನೆ, ಮದ್ಯಪಾನ, ಧೂಮಪಾನ, ತಂಬಾಕು ಸೇವನೆ ಅಥವಾ ಇನ್ನಿತರ ಮಾದಕ ವಸ್ತುಗಳ ಬಳಕೆಯನ್ನು ತ್ಯಜಿಸಬೇಕು.

ಬಾಳೆಹಣ್ಣು:

 

ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ, ವಿಟಮಿನ್ ಬಿ6, ವಿಟಮಿನ್ ಸಿ, ಮೆಗ್ನಿಷಿಯಂ ಹೆಚ್ಚಾಗಿ ಬಾಳೆಹಣ್ಣಿನಲ್ಲಿ ಇದ್ದು ಬಿಪಿ ನಿಯಂತ್ರಣದಲ್ಲಿರುತ್ತದೆ ಅಷ್ಟೇ ಅಲ್ಲದೆ ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾಗಿದ್ದರೆ ಪೊಟ್ಯಾಷಿಯಂ ಅದನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ .

ಅಷ್ಟೇ ಅಲ್ಲದೆ ಮೂತ್ರ ವಿಸರ್ಜನೆಯನ್ನು ಉತ್ತೇಜಿಸುತ್ತದೆ ಹಾಗು ರಕ್ತ ನಾಳಗಳಲ್ಲಿನ ಅಧಿಕವಾಗಿರುವ ಕೊಬ್ಬನ್ನು ಕರಗಿಸುವ ಮೂಲಕ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ,.

ರಕ್ತ ನಾಳಗಳ ಗೋಡೆಗಳನ್ನು ಹಿಗ್ಗಿಸಿ ರಕ್ತದ ಸುಗಮ ಸಂಚಾರಕ್ಕೆ ಸಹಾಯ ಮಾಡುತ್ತದೆ ನಿಮಗೆ ಬಿ. ಪಿ ಸಮಸ್ಯೆ ಇದ್ದರೆ ದಿನಕ್ಕೆ ಒಂದು ಬಾಳೆ ಹಣ್ಣನ್ನು ಮರಿದೇ ತಿನ್ನಿ .

ಜೀರಿಗೆ ಪುಡಿ :

 

 

ಒಂದು ಟೀ ಚಮಚ ಜೀರಿಗೆ ಪುಡಿ , ಒಂದು ಟೀ ಚಮಚ ಶುಂಠಿ ಪುಡಿ ಹಾಗು ಅರ್ಧ ಚಮಚ ಜೇನು ತುಪ್ಪವನ್ನು ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಸೇವನೆ ಮಾಡಿ .

ತುಳಸಿ ಎಲೆ :

 

 

ದಿನಕ್ಕೆ ಎರಡರಿಂದ ಮೂರು ತುಳಸಿ ಎಲೆಯನ್ನು ತಿನ್ನಿ ಇದು ಕೂಡ ಬಿಪಿಯನ್ನು ಕಡಿಮೆ ಮಾಡುತ್ತವೆ.

ಮೆಂತ್ಯ:

 

 

ಒಂದು ಚಮಚ ಮೆಂತ್ಯ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿ ಇಡೀ ನೆನೆಹಾಕಿ ಮಾರನೇ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಒಳ್ಳೆಯದು.

ಬೆಳ್ಳುಳ್ಳಿ:

ನಿತ್ಯ ಎರಡು ಬೆಳ್ಳುಳ್ಳಿ ಎಸಳನ್ನು ತಿನ್ನಬೇಕು ಇದು ರಕ್ತನಾಳಗಳಲ್ಲಿ ಶೇಖರವಾಗಿರುವ ಕೊಬ್ಬನ್ನು ತೊಲಗಿಸಿ ರಕ್ತ ಸಂಚಾರವನ್ನು ಸರಾಗವಾಗಿಸುವ ಗುಣ ಬೆಳ್ಳುಳ್ಳಿಯಲ್ಲಿದೆ.

ಕೊತ್ತಂಬರಿ:

 

ಆಂಟಿ ಮೈಕ್ರೋಬಿಯಲ್, ಆಂಟಿ ಡಿಪ್ರೆಸೆಂಟ್, ಆಂಟಿ ಇನ್‌ಫ್ಲಾಮೇಟರಿ ಆಗಿದ್ದು ಇವು ಬ್ಲಡ್ ಶುಗರ್, ಕೊಲೆಸ್ಟ್ರಾಲ್, ಬಿಪಿಯನ್ನು ಕಡಿಮೆ ಮಾಡುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top