fbpx
ಆರೋಗ್ಯ

ಋತು ಅವಧಿ ನಿಂತ ಮೇಲೆ ಹೆಚ್ಚು ಕಾಣಿಸ್ಕೊಳ್ಳೋ ಬಂಗು ಸಮಸ್ಯೆಗೆ ಮನೇಲೆ ಪಟ್ ಅಂತ ಪರಿಹಾರ ಕಂಡ್ಕೊಂಡು ಚರ್ಮ ಸರಿ ಮಾಡ್ಕೊಳ್ಳಿ

ಋತು ಅವಧಿ ನಿಂತ ಮೇಲೆ ಹೆಚ್ಚು ಕಾಣಿಸ್ಕೊಳ್ಳೋ ಬಂಗು ಸಮಸ್ಯೆಗೆ ಮನೇಲೆ ಪಟ್ ಅಂತ ಪರಿಹಾರ ಕಂಡ್ಕೊಂಡು ಚರ್ಮ ಸರಿ ಮಾಡ್ಕೊಳ್ಳಿ

ಮೆಲಾಸ್ಮಾ(ಬಂಗು) ಸಮಸ್ಯೆಗೆ ಮುಖ್ಯ ಕಾರಣ ವಿಪರೀತ ಸೂರ್ಯನ ಕಿರಣಗಳಿಗೆ ದೇಹ ಒಡ್ಡುವುದು ಇದರಿಂದ ಚರ್ಮದ ಕೋಶಗಳಲ್ಲಿ ಹೆಚ್ಚು ಮೆಲನಿನ್ ಉತ್ಪಾದನೆಯಾಗುತ್ತದೆ ,

 

 

ಅಷ್ಟೇ ಅಲ್ಲದೆ ದೇಹದ ಹಾರ್ಮೋನುಗಳ ಬದಲಾವಣೆ, ವಿಪರೀತ ಒತ್ತಡ, ಥೈರಾಯ್ಡ್ ಸಮಸ್ಯೆಗಳು ಮತ್ತು ಜನನ ನಿಯಂತ್ರಣ ಮಾತ್ರೆಗಳ ಬಳಕೆ ಮಾಡುವುದರಿಂದಲು ಸಹ ಮೆಲನಿನ್ ಹೆಚ್ಚಾಗುತ್ತದೆ.

ಬನ್ನಿ ಈಗ ಆಯುರ್ವೇದದಲ್ಲಿ ಹೇಗೆ ಇದಕ್ಕೆ ಪರಿಹಾರ ಕಂಡ್ಕೋಬಹುದು ಅಂತ ತಿಳಿಯೋಣ

ವಿಧಾನ -1

ಬೇಕಾಗಿರುವ ಪದಾರ್ಥಗಳು

ಪರಂಗಿ ಹಣ್ಣು ಅರ್ಧ ಹಿಡಿಯಷ್ಟು ರುಬ್ಬಿಕೊಂಡಿದ್ದು
ಅರಿಶಿನದ ಪುಡಿ -ಒಂದು ಚಮಚ
ಮುಲ್ತಾನಿ ಮಿಟ್ಟಿ – ಒಂದು ಚಮಚ

 


ತಯಾರಿಸುವ ವಿಧಾನ :

ಮೇಲೆ ಹೇಳಿರುವ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ರುಬ್ಬಿ ಮುಖದ ಮೇಲೆ ಲೇಪನ ಮಾಡಿ , ಅರ್ಧ ಗಂಟೆ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ .
ನಂತ್ರ ಎರಡು ಗಂಟೆವರೆಗೂ ಯಾವುದೇ ಕ್ರೀಮ್ ಅಥವಾ ಸೋಪ್ ಬಳಸಬೇಡಿ ದಿನವೂ ಹೀಗೆ ತಿಂಗಳುಗಟ್ಟಲೆ ಈ ಕ್ರಮ ಅನುಸರಿಸಿದರೆ ಬಂಗು ಸಮಸ್ಯೆ ಮಾಯವಾಗುತ್ತದೆ ಅಷ್ಟೇ ಅಲ್ಲದೆ ಮುಖದ ಇತರ ಕಪ್ಪು ಕಲೆಗಳು , ಗುಳ್ಳೆಗಳು ,ಮೊಡವೆಯ ಸಮಸ್ಯೆ ಕೂಡ ದೂರವಾಗುತ್ತದೆ .

ವಿಧಾನ -2

ಬೇಕಾಗಿರುವ ಪದಾರ್ಥಗಳು

ಮುಲ್ತಾನಿ ಮಿಟ್ಟಿ – ಒಂದುವರೆ ಚಮಚ
ಕರ್ಪೂರ ಪುಡಿ -ಅರ್ಧ ಚಮಚ
ನಿಂಬೆ ರಸ -ಅರ್ಧ ಚಮಚ

 

ತಯಾರಿಸುವ ವಿಧಾನ :

ಮೇಲೆ ಹೇಳಿರುವ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಕಲಸಿ ಮುಖದ ಮೇಲೆ ಲೇಪನ ಮಾಡಿ , ಅರ್ಧ ಗಂಟೆ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ .
ನಂತ್ರ ಎರಡು ಗಂಟೆವರೆಗೂ ಯಾವುದೇ ಕ್ರೀಮ್ ಅಥವಾ ಸೋಪ್ ಬಳಸಬೇಡಿ ,ದಿನವೂ ಹೀಗೆ ತಿಂಗಳುಗಟ್ಟಲೆ ಈ ಕ್ರಮ ಅನುಸರಿಸಿದರೆ ಬಂಗು ಸಮಸ್ಯೆ ಮಾಯವಾಗುತ್ತದೆ ಅಷ್ಟೇ ಅಲ್ಲದೆ ಮುಖದ ಇತರ ಕಪ್ಪು ಕಲೆಗಳು , ಗುಳ್ಳೆಗಳು ,ಮೊಡವೆಯ ಸಮಸ್ಯೆ ಕೂಡ ದೂರವಾಗುತ್ತದೆ .

ವಿಧಾನ -3

ಬೇಕಾಗಿರುವ ಪದಾರ್ಥಗಳು

ಕೊಬ್ಬರಿ ಎಣ್ಣೆ -ಎರಡು ಚಮಚ
ಕರ್ಪೂರ ಪುಡಿ -ಅರ್ಧ ಚಮಚ

 


ತಯಾರಿಸುವ ವಿಧಾನ :

ಕೊಬ್ಬರಿ ಎಣ್ಣೆ ಮತ್ತು ಕರ್ಪೂರ ಪುಡಿಯನ್ನು ಚೆನ್ನಾಗಿ ಕಲಸಿ , ಹತ್ತಿಯನ್ನು ತೆಗೆದುಕೊಂಡು ಈ ಮಿಶ್ರಣವನ್ನು ಅದ್ದಿ ಮುಖದ ಮೇಲೆ ಹಚ್ಚಿಕೊಳ್ಳಿ ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಬಂಗು ಸಮಸ್ಯೆಯಿಂದ ಮುಕ್ತಿಹೊಂದಬಹುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top