fbpx
ರಾಜಕೀಯ

ಬಿಜೆಪಿ ಪಾಳಯಕ್ಕೆ ಬಹುಬೇಡಿಕೆ ಕ್ಷೇತ್ರವಾಗಿ ಬದಲಾಗುತ್ತಿರುವ ಜಮಖಂಡಿ.

ಬಿಜೆಪಿ ಪಾಳಯಕ್ಕೆ ಬಹುಬೇಡಿಕೆ ಕ್ಷೇತ್ರವಾಗಿ ಬದಲಾಗುತ್ತಿರುವ ಜಮಖಂಡಿ.

 

 

2018ರ ವಿಧಾನಸಭೆ ಚುನಾವಣೆಗೆ ಸಮಯ ಹತ್ತಿರಬರುತ್ತಿದ್ದಂತೆಯೇ ಬಾಗಲಕೋಟೆ ಜಿಲ್ಲಾ ಬಿಜೆಪಿ ಪಾಳೆಯದಲ್ಲಿ ಸುಂಟರಗಾಳಿ ಎದ್ದಿದೆ. ಜಿಲ್ಲೆಯ ಜಮಖಾನದಿ ವಿಧಾನಸಭಾ ಕ್ಷೇತ್ರವು ಡೈನ್ ಡೈನ್ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾತು ಜೋರಾಗಿರುವಾಗಲೇ ಪಕ್ಷದ ಜಮಖಂಡಿ ಕ್ಷೇತ್ರದಲ್ಲಿ ಸ್ಪರ್ಧೆಗೂ ಘಟಾನುಘಟಿಗಳು ಮನಸ್ಸು ಮಾಡಿದ್ದಾರೆ.

 

 

ಮೇಲ್ಮನೆ ಸದಸ್ಯ ಹಾಗೂ ಕೇಂದ್ರ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಜಮಖಂಡಿ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿಗು ಕೂಡ ಜಮಖಂಡಿ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎನ್ನುವ ಬಯಕೆಯಿದೆ. ಅಲ್ಲದೆ ಮಾಜಿ ಸಚಿವ ನಿರಾಣಿ ಸಹೋದರರಿಗೆ ಜಮಖಂಡಿ ಕ್ಷೇತ್ರ ಉದ್ಯೋಗದ ತವರು ಕ್ಷೇತ್ರವಾಗಿರೋದ್ರಿಂದ ಈ ಕ್ಷೇತ್ರದಲ್ಲಿ ಸ್ಪರ್ದಿಸಬೇಕೆನ್ನುವ ಬಯಕೆಯಿದೆ.

 

ಶ್ರೀಕಾಂತ ಕುಲಕರ್ಣಿ, ಬಸನಗೌಡ ಪಾಟೀಲ ಯತ್ನಾಳ ಮತ್ತು ನಿರಾಣಿ ಸಹೋದರರ ಜತೆಗೆ ಇನ್ನೂ ಕೆಲವರು ಜಮಖಂಡಿ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಮುಂಬರುವ 2018 ವಿಧಾನಸಭೆ ಚುನಾವಣೆಗೆ ಈಗಲೇ ಜಮಖಂಡಿ ಕ್ಷೇತ್ರದ ಬಿಜೆಪಿ ಟಿಕೆಟ್‍ಗಾಗಿ ನಡೆದಿರುವ ಪೈಪೋಟಿ ಕುತೂಹಲ ಕೆರಳಿಸಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top