fbpx
ಕನ್ನಡ

ಕನ್ನ್ನಡದಲ್ಲಿ ಮಾತನಾಡಿದ್ದಕ್ಕೆ ಟಿಕೆಟ್ ಕೊಡೋದಿಲ್ಲ ಎಂದು ಅವಮಾನಿಸಿದ ಬೆಂಗಳೂರಿನ ವಿಮಾನ ನಿಲ್ದಾಣದ ಸಿಬ್ಬಂದಿ.

ಕನ್ನ್ನಡದಲ್ಲಿ ಮಾತನಾಡಿದ್ದಕ್ಕೆ ಟಿಕೆಟ್ ಕೊಡೋದಿಲ್ಲ ಎಂದು ಅವಮಾನಿಸಿದ ಬೆಂಗಳೂರಿನ ವಿಮಾನ ನಿಲ್ದಾಣದ ಸಿಬ್ಬಂದಿ.

 

 

ಕನ್ನಡ ಮಾತನಾಡಿದ ಕಾರಣಕ್ಕೆ ಅಧಿಕಾರಿಯೊಬ್ಬನು ಪ್ರಯಾಣಿಕರೊಬ್ಬರಿಗೆ ಟಿಕೆಟ್ ನೀಡದೆ ಅವಮಾನಿಸಿದ ಘಟನೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ಬಗ್ಗೆ ಬಾಲಾಜಿ ನಾರಾಯಣ ಮೂರ್ತಿ ಎಂಬುವರು ಫೇಸ್ಬುಕ್ ನಲ್ಲಿ ಪೋಸ್ಟ್ ವೊಂದನ್ನ ಹಾಕಿದ್ದಾರೆ.

 

 

“ಆಫೀಸ್ ಕೆಲಸದ ಮೇಲೆ ಮುಂಬೈಗೆ ಹೋಗಬೇಕೆಂದು ವಿಮಾನ ನಿಲ್ದಾಣಕ್ಕೆ ಹೋದೆ 15 ನಿಮಿಷ ತಡವಾಗಿ ಹೋಗಿದ್ದರಿಂದ 9 ಗಂಟೆಗೆ ಹೊರಡುವ ವಿಮಾನಕ್ಕೆ ನನಗೆ ಟಿಕೆಟ್ ಕೊಡಲು ನಿರಾಕರಿಸದರು. ಹಾಗಾಗಿ 9.45 ಕ್ಕೆ ಹೊರಡುವ ವಿಮಾನಕ್ಕೆ ಟಿಕೆಟ್ ಕೊಡಿ ಎಂದು ಕೇಳಿದೆ ಆಗ ಗೋ ಏರ್ ನ ಸಿಬ್ಬಂದಿ ಸಂದೀಪ್ ಎಂಬುವವನು ಟಿಕೀಟ್ ಕೊಡೋದಿಲ್ಲ ಎಂದು ಏರು ಧ್ವನಿಯಲ್ಲಿ ನನಗೆ ಬೈದಿದ್ದಾನೆ. ನಾನು ಯಾಕೆ ಟಿಕೆಟ್ ಕೊಡೋದಿಲ್ಲ ಎಂದು ಕೇಳಿದಕ್ಕೆ ನೀವು ವಿಮಾನ ನಿಲ್ದಾಣದ ಆವರಣದಲ್ಲಿ ಕನ್ನಡದಲ್ಲಿ ಮಾತನಾಡಿದ್ದೀರಿ ಇಲ್ಲಿ ಹಿಂದಿ ಅಥವಾ ಇಂಗ್ಲಿಷ್ ಭಾಷೆಯನ್ನೇ ಮಾತನಾಡಬೇಕು ಎಂದು ನನಗೆ ಅವಮಾನ ಮಾಡಿದ, ನಾನು ಕನ್ನಡ ಸ್ಥಳೀಯ ಭಾಷೆಯಲ್ಲವೇ ಎಂದು ಕೇಳಿದಕ್ಕೆ ಟಿಕೆಟ್ ಕೊಡೋದಿಲ್ಲ ಎಂದು ಅವಮಾನಿಸಿದ್ದಾರೆ. ” ಎಂದು ಬಾಲಾಜಿ ನಾರಾಯಣ ಮೂರ್ತಿ ಎಂಬುವರು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

 

 

ಗೋ ಏರ್ ನಲ್ಲಿ ಪ್ರಯಾಣ ಮಾಡಲು ಟಿಕೆಟ್ ಕೊಡಲು ನಿರಾಕರಿಸಿದ ಕಾರಣ ನಾನು ಅನಿವಾರ್ಯವಾಗಿ ಏರ್ ಜೆಟ್ ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಮುಂಬೈಗೆ ತೆರಳಬೇಕಾಯಿತು ಎಂದು ನಾರಾಯಣಮೂರ್ತಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top