fbpx
ಆರೋಗ್ಯ

ಮಳೆಗಾಲ ಅಂದ್ರೇನೆ ಹಲ್ಲಿ ಕಾಟ ಜಾಸ್ತಿ , ಊಟದಲ್ಲೇನಾದರೂ ಬಿದ್ರೆ ವಿಷ ಆಗೋ ಚಾನ್ಸಸ್ ಜಾಸ್ತಿ , ಚಿಂತೆ ಮಾಡ್ಬೇಡಿ ಮನೇಲೆ ಸಿಗೋ ವಸ್ತು ಬಳ್ಸ್ಕೊಂಡು ಓಡಿಸ್ಬಹುದು..

ಮಳೆಗಾಲ ಅಂದ್ರೇನೆ ಹಲ್ಲಿ ಕಾಟ ಜಾಸ್ತಿ , ಇನ್ಮೇಲೆ ಚಿಂತೆ ಮಾಡ್ಬೇಡಿ ಮನೇಲೆ ಸಿಗೋ ಕೆಲವು ವಸ್ತು ಬಳ್ಸ್ಕೊಂಡು ಹಲ್ಲಿ ಮತ್ತೆ ಬರ್ದೇ ಇರೋ ತರ ಮಾಡ್ಕೊಬೋದು..

 

 

ಮನೆಯಲ್ಲಿ ಕರೆಯದೆ ಬರುವ ಅತಿಥಿಗಳು ಜಿರಳೆಗಳು ನೊಣಗಳು ಸೊಳ್ಳೆಗಳು ಜಿಗಣೆಗಳು ಹಾಗೂ ಹಲ್ಲಿಗಳು ಇದಕ್ಕೆ ಮುಖ್ಯ ಕಾರಣ ಎಂದರೆ ಮನೆಯಲ್ಲಿ ಆಹಾರ ಪದಾರ್ಥಗಳನ್ನು ನೆಲದ ಮೇಲೆ ಹರಡಿರುವುದು ಅಥವಾ ಬಹಳ ಸಮಯದವರೆಗೆ ಬಾಗಿಲುಗಳು ಹಾಗೂ ಕಿಟಕಿಗಳನ್ನು ತೆರೆದು ಇರಿಸುವುದು , ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡದೇ ಇರುವುದು ಹಾಗೂ ನೀರನ್ನು ಬಹಳ ಕಾಲ ಶೇಖರಣೆ ಮಾಡಿ ಹಾಗೇ ಇಡುವುದು , ಮನೆಯಲ್ಲಿ ನೇತು ಹಾಕಿರುವ ಫೋಟೋ ಫ್ರೇಮ್ಗಳು ಅಥವಾ ಬಳಸದೇ ಹಾಗೇ ಇಟ್ಟಿರುವ ಕ್ಯಾನ್ ಗಳು ಇವೆಲ್ಲವೂ ಹಲ್ಲಿಗಳನ್ನು ಮನೆಯೊಳಗೆ ಪ್ರವೇಶ ಮಾಡುವಂತೆ ಮಾಡುತ್ತದೆ .

ಈ ಸಮಸ್ಯೆಗೆ ಕೆಲವು ಪರಿಹಾರಗಳನ್ನು ನಾವು ಈಗ ಪರಿಹಾರಗಳನ್ನು ತಿಳಿಸಿಕೊಡುತ್ತೇವೆ

ಮೊಟ್ಟೆಯ ಹೊರಭಾಗ

ಮೊಟ್ಟೆಯ ಹೊರಭಾಗವನ್ನು ಮನೆಯ ಬಾಗಿಲುಗಳು ಹಾಗೂ ಕಿಟಕಿಗಳ ಬಳಿ ಇರಿಸಿ ಇದಕ್ಕೆ ಎಲ್ಲಿ ಹಲ್ಲಿಗಳನ್ನು ಹೆಚ್ಚಾಗಿ ಕಾಣುತ್ತೀರೋ ಆ ಭಾಗಗಳಲ್ಲಿ ಇರಿಸಿ ಇದರಿಂದ ಹಲ್ಲಿಗೆ ಭಯ ಉಂಟಾಗಿ ತನಗಿಂತ ಮೊದಲೇ ಯಾವುದೇ ಬಲಿಷ್ಠ ಜೀವಿ ಮನೆಯಲ್ಲಿರುವುದರಿಂದ ಭಾವಿಸಿ ಮನೆಯೊಳಗೆ ಬರಲು ಭಯಪಡುತ್ತದೆ .

ಕಾಫಿ ಪುಡಿ

 

ಕಾಫಿ ಪುಡಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಉಂಡೆಗಳನ್ನಾಗಿ ಮಾಡಿ ಹಲ್ಲಿಗಳು ಹೆಚ್ಚಾಗಿ ಕಾಣಸಿಗುವ ಜಾಗದಲ್ಲಿ ಇರಿಸಿ ಇದರಿಂದ ಹಲ್ಲಿಗಳು ಭಯ ಪಟ್ಟು ಓಡಿ ಹೋಗುತ್ತವೆ ಅಥವಾ ಸತ್ತು ಹೋಗುವ ಸಾಧ್ಯತೆಗಳು ಇವೆ

ಬೆಳ್ಳುಳ್ಳಿ

ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಎಲ್ಲಿ ಹಲ್ಲಿಗಳು ಹೆಚ್ಚಾಗಿ ಕಂಡು ಬರುತ್ತವೋ ಆ ಜಾಗಗಳಲ್ಲಿ ಇರಿಸಿ ಬೆಳ್ಳುಳ್ಳಿಯ ವಾಸನೆಯನ್ನು ಹಲ್ಲಿಗಳಿಗೆ ತಡೆಯಲು ಸಾಧ್ಯವಿಲ್ಲ ಬೇಕಾದರೆ ಒಂದು ಎರಡು ಲವಂಗಗಳನ್ನು ಸಹ ಇರಿಸಬಹುದು .

ಮೆಣಸು

 

ಮೆಣಸನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ನಂತರ ಒಂದು ಲೋಟದಷ್ಟು ನೀರಿನಲ್ಲಿ ಮಿಶ್ರಣ ಮಾಡಿ ಹಲ್ಲಿಗಳು ಹೆಚ್ಚಾಗಿ ಇರುವ ಜಾಗದಲ್ಲಿ ಸ್ಪ್ರೇ ಮಾಡಿ .

ಈರುಳ್ಳಿ

 

 

ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ಮನೆಯಲ್ಲಿ ಹಲ್ಲಿಗಳು ಹೆಚ್ಚಾಗಿ ಕಂಡು ಬರುವ ಜಾಗದಲ್ಲಿ ಇರಿಸಿ ಈರುಳ್ಳಿಯ ಘಾಟು ವಾಸನೆಗೆ ಹಲ್ಲಿಗಳು ಹೆದರಿ ಓಡಿ ಹೋಗುತ್ತದೆ .

ನ್ಯಾಪ್ತಲಿನ್ ಬಾಲ್ಸ್

 

 

ಮನೆಯಲ್ಲಿ ಹಲ್ಲಿಗಳು ಹೆಚ್ಚಾಗಿ ಕಂಡು ಬರುವ ಜಾಗದಲ್ಲಿ ಇರಿಸಿ ಇದರ ಘಾಟು ವಾಸನೆಗೆ ಹಲ್ಲಿಗಳು ಹೆದರಿ ಓಡಿ ಹೋಗುತ್ತದೆ .

ಫ್ಲೈ ಪೇಪರ್

 

 

ಫ್ಲೈ ಪೇಪರ್ ಅನ್ನು ಗೋಡೆಗಳಿಗೆ ಅಂಟಿಸಿ ಇದು ಹಲ್ಲಿಗಳು ಓಡಾಡುವಾಗ ಜಾಗದಲ್ಲಿ ಇರಿಸಿದಾಗ ಹಲ್ಲಿಗಳನ್ನು ಈ ಪೇಪರ್ ಮೇಲೆ ಅಂಟಿಕೊಳ್ಳುವ ಹಾಗೆ ಮಾಡುತ್ತದೆ .

ನವಿಲು ಗರಿ

 

 

ನವಿಲುಗಳು ಹಲ್ಲಿಗಳನ್ನು ತಿನ್ನುತ್ತವೆ ಆದ ಕಾರಣದಿಂದ ನವಿಲುಗರಿಯನ್ನು ಮನೆಯಲ್ಲಿ ಇರಿಸಿದರೆ ಹಲ್ಲಿಗಳು ನವಿಲೆ ಮನೆಯಲ್ಲಿ ಇದೆ ಎಂದುಕೊಂಡು ಹೆದರಿಕೊಂಡು ಓಡಿ ಹೋಗುತ್ತವೆ .

ಫಿನೈಲ್ ಮಾತ್ರೆಗಳು

 

 

ಫಿನೈಲ್ ಮಾತ್ರೆಗಳ ಘಾಟು ವಾಸನೆ ಹಲ್ಲಿಗಳಿಗೆ ಮನೆಯಲ್ಲಿ ಇರಲು ಸಾಧ್ಯವಾಗದಂತೆ ಮಾಡುತ್ತದೆ

ಕಾರ್ಡ್ ಬೋರ್ಡ್ ಬಾಕ್ಸ್

 

ಕಾರ್ಡ್ಬೋರ್ಡ್ ಅನ್ನು ತೆಗೆದುಕೊಂಡು ಬಾಕ್ಸ್ ಮಾದರಿಯಲ್ಲಿ ಮಾಡಿ ಮನೆಯಲ್ಲಿ ಎಲ್ಲೆಲ್ಲಿ ಹಲ್ಲಿಗಳಿವೆಯೋ ಆ ಜಾಗದಲ್ಲಿ ಇರಿಸಿ ಈ ಬಾಕ್ಸ್ನ ಒಳಗೆ ಹಳ್ಳಿಗಳು ಬೀಳುವ ಸಾಧ್ಯತೆ ಹೆಚ್ಚು ಆನಂತರ ಹೊರಗೆ ಬಿಸಾಕಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top