fbpx
ಆರೋಗ್ಯ

ಈರುಳ್ಳಿ ತಿಂದ್ರೆ ರಾತ್ರಿಯ ಕ್ರಿಯೆ ತುಂಬಾ ಸುಲಭ ಅಷ್ಟೇ ಅಲ್ದೆ ಇನ್ನು 12 ಲಾಭಗಳ ಬಗ್ಗೆ ತಿಳ್ಕೊಂಡ್ರೆ ಇವತ್ತಿನಿಂದ್ಲೇ ಚೆನ್ನಾಗಿ ಈರುಳ್ಳಿ ತಿನ್ನೋಕೆ ಶುರು ಹಚ್ಕೋತಿರಾ..

ನಿಮಗೆ ಗೊತ್ತೇ ಈರುಳ್ಳಿಯಲ್ಲಿ ನಮ್ಮ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಎಷ್ಟು ಗುಣಗಳಿವೆ ಅಂತ…? ಈರುಳ್ಳಿ ಕಣ್ಣಿಗೆ ತುಂಬಾ ಒಳ್ಳೆಯ ಔಷಧಿ. ಇದು ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ರಿಬೊಫ್ಲೇವಿನ್ (Riboflavin) ಅಂಶವನ್ನು ಹೊಂದಿದೆ.

ಇಲ್ಲಿದೆ ನೋಡಿ ಈರುಳ್ಳಿಯ ಆರೋಗ್ಯ ಲಾಭಗಳು :

ರಕ್ತ ಹೀನತೆ ತಡೆಗಟ್ಟುತ್ತದೆ

 

 

ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ದೇಹದಲ್ಲಿನ ರಕ್ತದ ಕೊರತೆ ಕಡಿಮೆಯಾಗುತ್ತದೆ ಈರುಳ್ಳಿಯಲ್ಲಿರುವ ಕಬ್ಬಿಣದ ಅಂಶವು ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ತೇಜಿಸುತ್ತದೆ .

 

ತೂಕ ಕಡಿಮೆ ಮಾಡಲು ಸಹಾಯಕ

 

 

ದೇಹದಲ್ಲಿ ಅನಗತ್ಯವಾಗಿರುವ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸಿ , ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ , ಕ್ಯಾಲೊರಿ ಅಂಶವು ಸಹ ಚೆನ್ನಾಗಿದ್ದು ಫೈಬರ್ ಹೆಚ್ಚಿದ್ದು ಮಲಬದ್ಧತೆ ಹಾಗು ಕರುಳಿನ ಚಲನವಲನಗಳನ್ನು ಹೆಚ್ಚಿಸಿ ಜೀರ್ಣವ್ಯವಸ್ಥೆಯನ್ನು ಕಾಪಾಡುತ್ತದೆ .

 

ರೋಗ ನಿರೋಧಕ ಶಕ್ತಿ

 

ಕಬ್ಬಿಣ , ಪೊಟ್ಯಾಸಿಯಂ , ವಿಟಮಿನ್ ಸಿ ಹೇರಳವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ , ಈರುಳ್ಳಿಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ರೋಗನಿರೋಧಕ , ನಂಜುನಿರೋಧಕ ಗುಣಗಳಿವೆ. ಇದು ದೇಹಕ್ಕೆ ಬರುವ ಸೂಕ್ಷ್ಮಾಣುಜೀವಿಗಳನ್ನು ತಡೆದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.

ಋತು ಸ್ರಾವದ ಹೊಟ್ಟೆ ನೋವು

 

 

ಈರುಳ್ಳಿಯಲ್ಲಿ ನೋವು ನಿರೋಧಕ ಅಂಶಗಳು ಹೆಚ್ಚಾಗಿದ್ದು ಋತು ಸ್ರಾವದ ಹೊಟ್ಟೆ ನೋವು ತಡೆಯಲು ಸಹಾಯ ಮಾಡುತ್ತದೆ .

ಪ್ರಣಯವನ್ನು ಹೆಚ್ಚಿಸುತ್ತದೆ

 

ಈರುಳ್ಳಿಯಲ್ಲಿ ಆಲಫಿನ್ ಎನ್ನುವ ರಾಸಾಯನಿಕವಿದ್ದು ಇದು ಪುರುಷರಲ್ಲಿ ರಕ್ತದ ಪರಿಚಲನೆಯನ್ನು ಪುರುಷರ ಖಾಸಗಿ ಅಂಗಗಳಿಗೆ ಹೆಚ್ಚಿಸಿ ಪ್ರಣಯದ ಮಜಾ ಅನುಭವಿಸಲು ಸಹಾಯ ಮಾಡುತ್ತದೆ ಹಿಂದಿನ ಕಾಲದ ಆಯುರ್ವೇದದ ಪದ್ದತಿಯಲ್ಲಿ ಇದಕ್ಕೆ ಶುಕ್ರ ಧಾತು ಇರುವ ಆಹಾರ ಎಂದೇ ಕರೆಯುತ್ತಿದ್ದರು ಕಾರಣ ಇದು ಸಂತಾನ ಹೀನರಲ್ಲಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುವ ಆಹಾರ ಎಂದು .

ಕೂದಲು ಉದುರುವುದನ್ನು ತಡೆಗಟ್ಟುತ್ತದೆ

 

 

ಈರುಳ್ಳಿಯನ್ನು ಚೆನ್ನಾಗಿ ರುಬ್ಬಿ ತಲೆಗೆ ಹಚ್ಚಿಕೊಂಡರೆ ಕೂದಲು ಸೊಂಪಾಗಿ ಬೆಳೆಯುತ್ತದೆ ಅಷ್ಟೇ ಅಲ್ಲದೆ ತಲೆಹೊಟ್ಟು ಸಮಸ್ಯೆ ಸಹ ಮಾಯವಾಗುತ್ತದೆ .

ಚರ್ಮದ ಕಾಂತಿ ಹೆಚ್ಚಿಸುತ್ತದೆ

 

 

ಈರುಳ್ಳಿಯನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಮುಖವು ಕಾಂತಿಯುಕ್ತವಾಗುತ್ತದೆ ಅಷ್ಟೇ ಅಲ್ಲದೆ ಮುಖದ ಮೇಲಿನ ಗುಳ್ಳೆ ಹಾಗು ಮೊಡವೆಗಳಿಂದಲೂ ಮುಕ್ತಿ ಹೊಂದಬಹುದು .

ಕ್ಯಾನ್ಸರ್ ತಡೆಯುತ್ತದೆ

 

 

ಈರುಳ್ಳಿಯಲ್ಲಿ ಆಂಟಿ ಆಕ್ಸಿಡಾಂಟ್ ಅಂಶಗಳು ಕ್ಯಾನ್ಸರ್ ಕೋಶಗಳು ಉಂಟಾಗದಂತೆ ತಡೆಯುತ್ತವೆ ಅಷ್ಟೇ ಅಲ್ಲದೆ ದೇಹವನ್ನು ವಿಷ ಅಣುಗಳಿಂದ ಸಂರಕ್ಷಿಸುತ್ತದೆ .

 

ಗಂಟಲು ನೋವು ತಡೆಯುತ್ತದೆ

 

 

ಈರುಳ್ಳಿ ರಸಕ್ಕೆ ಸ್ವಲ್ಪ ಬೆಲ್ಲ ಅಥವಾ ಜೇನುತುಪ್ಪ ಬೆರೆಸಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.ಇದಲ್ಲದೆ, ಈರುಳ್ಳಿಯನ್ನು ಹಾಗೆಯೇ ತಿನ್ನುವುರಿಂದ ಗಂಟಲು ನೋವು ಕಡಿಮೆಯಾಗುತ್ತದೆ.

 

ಮಧುಮೇಹ ತಡೆಯುತ್ತದೆ

 

ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ದೇಹದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ, ಮತ್ತು ಇದು ಮಧುಮೇಹ ಬರುವುದನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ದೇಹದಲ್ಲಿರುವ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುವ ಕೆಲಸವನ್ನೂ ಈರುಳ್ಳಿ ಮಾಡುತ್ತದೆ.

ಕಿವಿನೋವು ತಡೆಯುತ್ತದೆ

 

 

ಈರುಳ್ಳಿ ರಸವನ್ನು ಸ್ವಲ್ಪ ಬಿಸಿ ಮಾಡಿ ಕಿವಿಯ ಒಳಗಡೆ ಹಾಕಿದರೆ ಕಿವಿನೋವು ಅಥವಾ ಕಿವಿ ಸೋರುವಿಕೆ ಕಡಿಮೆಯಾಗುತ್ತದೆ.

 

ಅಸ್ತಮಾ ತಡೆಯುತ್ತದೆ

 

 

ನಿಮಗೆ ಅಸ್ತಮಾ ಇದ್ದರೆ, ಒಂದು ಲೋಟ ನೀರಿಗೆ ಸ್ವಲ್ಪ ಈರುಳ್ಳಿ ರಸ, ಇಂಗು ಮತ್ತು ಕಪ್ಪು ಉಪ್ಪು ಸೇರಿಸಿ ಕುಡಿದರೆ ತುಂಬಾ ಆರಾಮ ಸಿಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top