fbpx
ಭವಿಷ್ಯ

ಮೀನ ರಾಶಿಯವರ ವ್ಯಕ್ತಿತ್ವ ಹೇಗಿದೆ ಅಂತ ಗೊತ್ತಾ ? ಈ ರಾಶಿಯವರ ವ್ಯಕ್ತಿತ್ವಕ್ಕೂ ರಾಶಿ ನಕ್ಷತ್ರಕ್ಕೂ ಇರುವ ಸಂಬಂಧವೇನು ತಿಳ್ಕೊಳ್ಳಿ..

ರೇಡಿಯೋ,ಟೆಲಿಫೋನ್,ವಿಮಾನ,ರೈಲು  ಕಂಡುಹಿಡಿದವರು ಈ ರಾಶಿಯವರು.

ಮೀನ ರಾಶಿ.

ಮೀನಿನಲ್ಲಿ ದೊಡ್ಡ ಗಾತ್ರದ ಮೀನುಗಳು ,ಸಣ್ಣ ಗಾತ್ರದ  ಮೀನುಗಳು ಇರುತ್ತವೆ.ಹಾಗೆಯೇ ಮೀನ ರಾಶಿಯಲ್ಲಿ ಹುಟ್ಟಿದವರು ಕೆಲವರು ಸಣ್ಣ ದೇಹ ಹೊಂದಿರುತ್ತಾರೆ ಇನ್ನೂ ಕೆಲವರು ದೊಡ್ಡ ದೇಹ ಹೊಂದಿರುತ್ತಾರೆ.ಹಾಗೆ ದೊಡ್ಡ ಕುಟುಂಬ ಸಣ್ಣ ಕುಟುಂಬ  ಕೂಡ ಇರುತ್ತದೆ.ಈ ರಾಶಿಯವರನ್ನು ಜನರು ತಮ್ಮ ಉದ್ದೇಶಗಳು (ಅಂದರೆ ಕೆಲಸ,ಆಸೆ,ಸ್ವಾರ್ಥ ಸಾಧನೆ )ಈಡೇರುವವರೆಗೆ  ಬಳಸಿಕೊಂಡು ಉಪಯೋಗಿಸಿಕೊಳ್ಳುತ್ತಾರೆ ನಂತರ ಇವರನ್ನು ಕೈ ಬಿಡುತ್ತಾರೆ ಮತ್ತು ಅನೇಕ ರೀತಿಯಲ್ಲಿ ಹಿಂಸೆ ಕೊಡುತ್ತಾರೆ ಆದ್ದರಿಂದ ಇವರು ಯಾರನ್ನೇ ಆಗಲಿ  ವಿಶ್ವಾಸ ಇಟ್ಟು ನಂಬುವುದಕ್ಕಿಂತ ಮುಂಚೆ ಆಲೋಚನೆ ಮಾಡುವುದು ಒಳ್ಳೆಯದು ನಂತರವೇ ಸ್ನೇಹವನ್ನು ಮುಂದುವರಿಸಿದರೆ ಉತ್ತಮ.

ತಮ್ಮದೇ ಆದ ನಿಯಮಗಳನ್ನು ಪಾಲಿಸುತ್ತಾರೆ.

ಈ ರಾಶಿಯವರು ತಮ್ಮ ಜೀವನದಲ್ಲಿ  ತಮ್ಮದೇ ಆದ ಕೆಲವು ನಿಯಮಗಳನ್ನು ಹಾಕಿ ಕೊಂಡಿರುತ್ತಾರೆ.ಊಟ,ಉಪಚಾರ,ಇನ್ನೂ ಮುಂತಾದವುಗಳಲ್ಲಿ  ನಿಯಮಗಳನ್ನು  ಹಾಕಿಕೊಂಡು ಪಾಲಿಸುತ್ತಾರೆ. ತಾವು ಸೇವಿಸುವ  ಆಹಾರ ಪದ್ಧತಿ ಮತ್ತು ನಿದ್ರೆಗೂ ಸಹ ನಿಯಮಗಳನ್ನು ಹಾಕಿಕೊಂಡು ಪಾಲಿಸುತ್ತಾರೆ.

ಇವರು ತಮ್ಮ ಕುಟುಂಬದ ಪಾಲನೆ ಪೋಷಣೆಯನ್ನು  ಕ್ರಮ ತುಂಬಾ ವಿಶಾಲವಾದದ್ದು ಅಂದರೆ ತುಂಬಾ ದೊಡ್ಡದು.ತ್ಯಾಗವೇ ಇವರ ದೊಡ್ಡ ಧರ್ಮವೆಂದು ಪಾಲಿಸುವವರು ಈ ಮೀನ ರಾಶಿಯವರು ಇದು  ಇನ್ನೂ ಬಹಳ ವಿಶೇಷವಾಗಿದೆ.

 

 

ಜೀವನದಲ್ಲಿ ದೊಡ್ಡ  ನೆಲೆ.

ಇವರು ತಮ್ಮ ಜೀವನದಲ್ಲಿ ದೊಡ್ಡ ನೆಲೆಯನ್ನು ಹೊಂದಿರುತ್ತಾರೆ.ಇವರು ಯಾರ ಆಶ್ರಯದಲ್ಲಿ ಇರುತ್ತಾರೂ ಅವರಿಂದಲೇ ಮೀನ ರಾಶಿಯವರಿಗೆ ಹಾನಿಯುಂಟಾಗುವುದು.

ಇವರು ಎಲ್ಲೇ ಯಾವ ಸ್ಥಳದಲ್ಲಿ ಹೋಗಿ  ನೆಲೆಸಿದರೂ ಸಹ  ಅಧಿಕವಾದ ಸಂಪತ್ತು ಇವರು ಕಡೆ ಹರಿದು ಬರುವುದು.ಇವರು ರಾಜ,ರಾಣಿಯ  ರೀತಿಯಲ್ಲಿ  ಜೀವನ ನಡೆಸುವರು,ಅಷ್ಟೊಂದು ಸಂಪತ್ತು ಅಲ್ಲಿ ನೆಲೆಸಿರುವ ಕಾರಣ ಇಂತಹ ರಾಜ ಯೋಗ ಇವರದ್ದು.

ಜೀವನದಲ್ಲಿ ಎಷ್ಟೇ ಹೆಚ್ಚು ಸಂಪತ್ತು ಒದಗಿ ಬಂದರು ,ಸಂಪಾದಿಸಿದರೂ ಕೊನೆ ಗಾಲದಲ್ಲಿ ಆ ಸಂಪತ್ತು ಇವರ ಉಪಯೋಗಕ್ಕೆ ಬರುವುದಿಲ್ಲ. ಬಂಧು ಮಿತ್ರರು ಇವರಿಂದ ಹೆಚ್ಚಿನ ಲಾಭವನ್ನು  ಪಡೆದುಕೊಳ್ಳುತ್ತಾರೆ.

 

 

ಅನ್ವೇಷಣೆ (research) .

ಈ ರಾಶಿಯವರು ಅಧಿಕವಾಗಿ ಅನ್ವೇಷಣೆಯ ಗುಣವನ್ನು ಹೊಂದಿರುತ್ತಾರೆ.ಒಂದರ ನಂತರ ಇನ್ನೊಂದನ್ನು ಏನಾದರೂ  ಹುಡುಕುತ್ತಲೇ ಇರುತ್ತಾರೆ.ಅಂತಹ ಅದ್ಭುತವಾದ ಕಲೆ ಈ ಮೀನ ರಾಶಿಯವರಲ್ಲಿ ಅಡಗಿದೆ.ಈ ಜಗತ್ತಿನಲ್ಲಿ ಎಲ್ಲರೂ ಉಪಯೋಗಿಸುವ ರೇಡಿಯೋ,ವಿಮಾನ,ರೈಲು,ಮೋಟಾರ್ ವಾಹನಗಳು,ದೂರವಾಣಿ ಸಂಭಾಷಣೆಗೆ ಕರೆ ಮಾಡಲು ಮಾತನಾಡಲು ಬಳಸುವ ಫೋನ್ (ಟೆಲಿಫೋನ್ ) ಇವೆಲ್ಲವನ್ನು ಕಂಡು ಹಿಡಿದವರು ಈ ಮೀನ ರಾಶಿಯವರು.ಆದ್ದರಿಂದ ಈ ಜಗತ್ತಿಗೆ ಅವರ ಕೊಡುಗೆ ಅಪಾರ.

ಅಣು ಶಕ್ತಿ ಹೊಂದಿರುವ ಅಣು ಬಾಂಬ್ ,ತೋಪು,ಫಿರಂಗಿ,ಇನ್ನೂ ಮೊದಲಾದವುಗಳನ್ನು ಕಂಡು ಹಿಡಿದಿದ್ದಾರೆ.ಈ ರಾಶಿಯವರು ತಮ್ಮ ಹಿರಿಯರು ಮಾಡಿಕೊಂಡಿರುವ ಅಥವಾ ಮಾಡಿಕೊಂಡು ಬಂದಿರುವ ಕುಲ ಕಸುಬನ್ನು ಬಿಟ್ಟು ಬೇರೆ ಕೆಲಸವನ್ನು ಅಥವಾ ವ್ಯವಹಾರವನ್ನು  ಮಾಡುತ್ತಾರೆ.

ಈ ಮೀನ ರಾಶಿಯವರಿಗೆ ಕುಟುಂಬದಲ್ಲಿ  ಅಷ್ಟಾಗಿ ಸುಖ ಇರುವುದಿಲ್ಲ ಅಂದರೆ ಸುಖ ಕಡಿಮೆ.ದಾಂಪತ್ಯ ಸುಖವೂ ಕಡಿಮೆಯೇ.

 

 

ವಿಶ್ವಾಸಕ್ಕೆ ಅರ್ಹರು.

ಮೀನ ರಾಶಿಯವರ ಸ್ವಭಾವ ಸಾಗರದಂತೆ ತುಂಬಾ ವಿಶಾಲವಾದದ್ದು.ಇವರಲ್ಲಿ ಯಾರು ಬೇಕಾದರೂ ನಿಸ್ಸಂಕೋಚವಾಗಿ  ವಿಶ್ವಾಸ ಇಡಬಹುದು. ಹಾಗೆ ದೇವರ ಮೇಲಿನ ಭಕ್ತಿ ಕೂಡ ಅಪಾರ.

ಈ ರಾಶಿಯವರು ಕೆಲವರು  ತಮ್ಮ ಜೀವನ ಪೂರ್ತಿ ಮದುವೆಯಾಗದೆ ಅವಿವಾಹಿತರಾಗಿಯೇ ಉಳಿದುಬಿಡುತ್ತಾರೆ.ಇನ್ನೂ ಕೆಲವರು ಮಹಾನ ಯೋಗಿಗಳು ಕೂಡ ಆಗುತ್ತಾರೆ.

ಹೀಗೆ ಮೀನ ರಾಶಿಯವರು ಇಷ್ಟೆಲ್ಲಾ ವಿಶೇಷತೆಗಳನ್ನು ಒಳಗೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
To Top