fbpx
ಭವಿಷ್ಯ

ವಾರದಲ್ಲಿ ಯಾವ ದಿನ ಏನು ಮಾಡಿದರೆ ಶುಭ ಫಲಿತಾಂಶ ಸಿಗುತ್ತೆ ಅಂತ ಶಾಸ್ತ್ರದಲ್ಲಿ ಹೇಳ್ತಾರೆ ಗೊತ್ತೇ ?

ಯಾವ ದಿನ ಏನು ಮಾಡಿದರೆ ಶುಭ ಫಲಿತಾಂಶಗಳನ್ನು ಪಡೆಯಬಹುದು.

ಭಾನುವಾರ.

 

 

ಭಾನುವಾರ ಮನೆಯಿಂದ ಹೊರಗಡೆ ಹೋಗುವ ಮುನ್ನ ವೀಳ್ಯದೆಲೆಯನ್ನು ಜೇಬಿನಲ್ಲಿ ಇಟ್ಟುಕೊಂಡು ಮನೆಯಿಂದ  ಹೊರಗೆ ಹೋದರೆ ಸಕಾಲದಲ್ಲಿ ಆ ಕಾರ್ಯವು ಆಗಿ ಯಶಸ್ಸನ್ನು ಕಾಣಬಹುದು.

ಸೋಮವಾರ.

 

 

ಮನೆಯಿಂದ ಹೊರಗಡೆ ಹೋಗುವ ಮುನ್ನ ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಿಕೊಂಡು ಹೋದರೆ ಒಳ್ಳೆಯದು.ಸಾಧ್ಯವಾದರೆ ಅಂದವಾದ ಒಂದು  ಕನ್ನಡಿಯನ್ನೇ ಮನೆಯ ಪ್ರವೇಶ ದ್ವಾರದ ಹತ್ತಿರ ಇಟ್ಟುಕೊಂಡರೆ ಒಳ್ಳೆಯದು.

ಮಂಗಳವಾರ.

 

 

ಹನುಮಂತನಿಗೆ ತುಂಬಾ ಇಷ್ಟವಾದ ವಾರ ಮಂಗಳವಾರ ಆದ್ದರಿಂದ ಮಂಗಳವಾರ ಬೆಳಗಿನ ಜಾವ ಸ್ನಾನ ಮಾಡಿದ ನಂತರ ಹನುಮಾನ್ ಚಾಲೀಸವನ್ನು ಪಠಿಸಬೇಕು.ಆ  ದಿನ ಮನೆಯಿಂದ ಹೊರಗೆ ಹೋಗುವ ಮುನ್ನ ಸಿಹಿ ಪದಾರ್ಥವನ್ನು ತಿಂದು ಹೊರಗೆ ಹೋದರೆ ಒಳ್ಳೆಯದು.ಬೆಲ್ಲ ತಿಂದರೆ ಇನ್ನೂ ಒಳ್ಳೆಯದು.

ಬುಧವಾರ.

 

 

ಬುಧುವಾರದ ದಿನ ಮನೆಯಿಂದ ಹೊರಗೆ ಹೋಗುವ ಮುನ್ನ ಪುದೀನಾ ಅಥವಾ ಕರಿಬೇವನ್ನು ತಿಂದು ಹೋದರೆ ಒಳ್ಳೆಯದು. ಪ್ರತಿ ಬುಧುವಾರ ಹೀಗೆ ಮಾಡಿದರೆ ಆರೋಗ್ಯ ವೃದ್ಧಿಯಾಗುವುದು ಅಷ್ಟೇ ಅಲ್ಲದೆ ತುಂಬಾ ಪ್ರಯೋಜನವನ್ನು ಕಾಣಬಹುದು.

ಗುರುವಾರ.

 

ಗುರುವಾರದ ದಿನ ಮನೆಯಿಂದ ಹೊರಗಡೆ ಹೋಗುವ ಮುನ್ನ ಸ್ವಲ್ಪ ಜೀರಿಗೆ ಅಥವಾ ಸಾಸಿವೆಯನ್ನು ಬಾಯಿಯಲ್ಲಿ ಇಟ್ಟುಕೊಳ್ಳಬೇಕು.

ಶುಕ್ರವಾರ.

 

 

ಶುಕ್ರವಾರದ ದಿನ ಮನೆಯಿಂದ ಹೊರಗಡೆ ಹೋಗುವ ಮುನ್ನ ಒಂದು ಚಮಚ ಮೊಸರನ್ನ ತಿಂದು ಹೋದರೆ ತುಂಬಾ ಒಳ್ಳೆಯದು ಎಂದು ಹಿಂದೂ ಧರ್ಮಶಾಸ್ತ್ರ ಹೇಳುತ್ತದೆ.

ಶನಿವಾರ.

 

 

ಪ್ರತಿ ಶನಿವಾರದಂದು ಮನೆಯಿಂದ ಹೊರಗಡೆ ಹೋಗುವ ಮುನ್ನ ಸ್ವಲ್ಪ ಶುಂಠಿಯ ರಸದಲ್ಲಿ ತುಪ್ಪವನ್ನು ಬೆರೆಸಿ ತಿಂದು ಹೋದರೆ ಸಿರಿ ಸಂಪತ್ತು ನಿಮ್ಮದಾಗಿಸಿಕೊಳ್ಳಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top