fbpx
ಆರೋಗ್ಯ

ಚಳಿಗಾಲದಲ್ಲಿ ಹಂದಿಜ್ವರದ ಹಾವಳಿ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ ಈ ಮನೆಮದ್ದುಗಳನ್ನು ಮಾಡ್ಕೊಂಡು ನೆಮ್ಮದಿಯಿಂದ ಬದುಕಿ..

ಚಳಿಗಾಲದಲ್ಲಿ ಹಂದಿಜ್ವರದ ಹಾವಳಿ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ ಈ ಮನೆಮದ್ದುಗಳನ್ನು ಮಾಡ್ಕೊಂಡು ನೆಮ್ಮದಿಯಿಂದ ಬದುಕಿ..

 

 

ಹಂದಿಜ್ವರಕ್ಕೆ ಆಯುರ್ವೇದದ ಮನೆ ಮದ್ದುಗಳು ಸಾಮಾನ್ಯವಾಗಿ ಹಂದಿಗಳ ಶ್ವಾಸಕೋಶದ ನಾಳಗಳಲ್ಲಿ ಬೆಳೆಯುವ ಈ ವೈರಸ್ ಮನುಷ್ಯನ ಜೀವನಕ್ಕೆ ಹಾನಿಕಾರಕ ವೈರಸ್ ,ನೀರು ಆಹಾರ ಹಾಗೂ ಗಾಳಿಯಲ್ಲಿ ಹರಡಬಲ್ಲದು .

 

 

ಈ ರೋಗದ ಲಕ್ಷಣಗಳು

ಜ್ವರ ಕೆಮ್ಮು ನೆಗಡಿ ಮೈಕೈ ಕಾಲುನೋವು ಸುಸ್ತು ತಲೆಸುತ್ತು ವಾಂತಿ ಬೇದಿ.

ಬನ್ನಿ ಈ ವೈರಸ್ನ ಅಪಾಯವನ್ನು ಹೇಗೆ ತಪ್ಪಿಸಿಕೊಳ್ಳುವುದು ಎಂದು ಈಗ ತಿಳಿದುಕೊಳ್ಳೋಣ

ತುಳಸಿ ಎಲೆ

 

 

ಐದರಿಂದ ಆರು ತುಳಸಿ ಎಲೆಗಳನ್ನು ಚೆನ್ನಾಗಿ ಹೆಚ್ಚಿ ಅದಕ್ಕೆ ಸ್ವಲ್ಪ ಮೆಣಸನ್ನು ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಿ ಇದು ಶ್ವಾಸಕೋಶದ ನಳಿಕೆಯಲ್ಲಿರುವ ವೈರಸ್ ಸೋಂಕನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತದೆ .

ಅಮೃತ ಬಳ್ಳಿ

 

 

ಎರಡರಿಂದ ಮೂರು ಅಮೃತ ಬಳ್ಳಿ ಎಲೆಗಳು ಹಾಗೂ ಸ್ವಲ್ಪ ಕಾಳುಮೆಣಸಿನ ಪುಡಿ ರುಚಿಗೆ ಬೇಕಾದಷ್ಟು ಸೈಂಧವ ಲವಣ ಹಾಗೂ ಕಲ್ಲು ಸಕ್ಕರೆಯನ್ನು ಸೇರಿಸಿ ಕುಟ್ಟಿ ಪುಡಿ ಮಾಡಿ ಒಂದು ಲೋಟ ನೀರಿನಲ್ಲಿ ಕದಡಿ ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಿ

ಪಚ್ಚ ಕರ್ಪೂರ

 

 

ಒಂದು ಸಣ್ಣ ತುಂಡು ಪಚ್ಚ ಕರ್ಪೂರವನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಬೆರೆಸಿ ವಾರಕ್ಕೆ ಒಂದು ಬಾರಿಯಂತೆ ಎರಡು ತಿಂಗಳು ಸೇವಿಸಿ

ಬೆಳ್ಳುಳ್ಳಿ

ಎರಡರಿಂದ ಮೂರು ಎಸಳು ಬೆಳ್ಳುಳ್ಳಿಯನ್ನು ಒಂದು ಲೋಟ ಬಿಸಿ ಹಾಲಿನಲ್ಲಿ ಚೆನ್ನಾಗಿ ಜಜ್ಜಿ ಬೆರೆಸಿ ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ .

ಬೇವು

 

 

ದಿನಕ್ಕೆ ಎರಡರಿಂದ ಮೂರು ಎಲೆ ಬೇವಿನ ಸೊಪ್ಪು ಹಾಗೂ ಸ್ವಲ್ಪ ಬೆಲ್ಲವನ್ನು ಸೇರಿಸಿ ತಿನ್ನುತ್ತಾ ಬನ್ನಿ .

ಲೋಳೆಸರ

 

 

ಲೋಳೆಸರದ ಸಣ್ಣ ತುಂಡನ್ನು ನೀರಿನಲ್ಲಿ ಅಥವಾ ಹಾಗೆ ಸೇವಿಸಿ ಇದು ಕೂಡ ವೈರಸ್ ಸೋಂಕುಗಳನ್ನು ತಡೆಯುತ್ತವೆ .

ನಿಂಬೆರಸ

 

 

ನಿಂಬೆ ರಸದಲ್ಲಿರುವ ವಿಟಮಿನ್ ಸಿ ಅಂಶವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಆದ್ದರಿಂದ ಕಿತ್ತಳೆ ನಿಂಬೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top