fbpx
ಸಣ್ಣ ಕಥೆ

ಮೈಸೂರು ಮತ್ತೆ ದಸರಾಕ್ಕೂ ಏನು ಸಂಬಂಧ ಇದರ ಬಗ್ಗೆ ಇತಿಹಾಸ ಏನ್ ಹೇಳುತ್ತೆ ತಿಳ್ಕೊಳ್ಳಿ ..

ಮೈಸೂರು ದಸರಾ ಎಷ್ಟೊಂದು ಸುಂದರ ಮೈಸೂರು ದಸರಾ ಮಹತ್ವ.

ಕೇಳಿದರೆ ಮಹಾಭಾರತವನ್ನೇ ಕೇಳಬೇಕು, ನೋಡಿದರೆ ಮೈಸೂರು ದಸರಾವನ್ನೇ ನೋಡಬೇಕು ಎನ್ನುತ್ತಾರೆ ಮಹಾಕವಿಗಳು ಅದು ಸತ್ಯ.

ಮೈಸೂರು ದಸರಾ ನೋಡಲೆಂದೇ ಭಾರತದ ಮೂಲೆ ಮೂಲೆಯಿಂದ ಮತ್ತು  ದೇಶ ವಿದೇಶಗಳಿಂದ ಜನರು  ಆಗಮಿಸುತ್ತಾರೆ.ಮೈಸೂರು ದಸರಾ ವಿಶ್ವವಿಖ್ಯಾತಿಯನ್ನು ಪಡೆದಿದೆ.

 

 

ಕಳೆದ 400 ವರ್ಷಗಳಿಂದ ಮೈಸೂರಿನಲ್ಲಿ ದಸರಾ ಉತ್ಸವವನ್ನು ವಿಜೃಂಭಣೆಯಿಂದ ನೆಡೆಯುತ್ತಿದೆ.ದೇಶ ವಿದೇಶಗಳಿಂದ ಈ ಉತ್ಸವವನ್ನು ನೋಡಲು ಪ್ರವಾಸಿಗರು ಅಪಾರ  ಸಂಖ್ಯೆಯಲ್ಲಿ ಬರುತ್ತಾರೆ.

ಮೈಸೂರಿನಲ್ಲಿ 1610 ವರ್ಷಗಳಿಂದ ದಸರಾ ಉತ್ಸವವನ್ನು ಆಚರಿಸಲಾಗುತ್ತಿದೆ ಎಂದು ಇತಿಹಾಸ ಹೇಳುತ್ತದೆ.1610 ರಲ್ಲಿ ಶ್ರೀ ರಂಗಪಟ್ಟಣವನ್ನು  ರಾಜಧಾನಿಯಾಗಿ ಆಳಿದ ಒಡೆಯರ್ ರಾಜವಂಶಸ್ಥರು ತಮ್ಮ ರಾಜಧಾನಿಯನ್ನು ,ನಂತರ ಮೈಸೂರಿಗೆ ಬದಲಾಯಿಸಿಕೊಂಡರು.ಆಗ ಕರ್ನಾಟಕಕ್ಕೆ ಮೈಸೂರು ನಗರವೇ ರಾಜಧಾನಿಯಾಗಿತ್ತು.

 

ನಂತರದಲ್ಲಿ ಮೈಸೂರು ಸಂಸ್ಥಾನದ ಒಡೆಯರ್ ಕಾಲದಲ್ಲಿ ಈ ದಸರಾ ಉತ್ಸವ ಮನೆ ಮನೆಗಳಲ್ಲೂ ಹೆಸರು ವಾಸಿಯಾಯಿತು.

ಮೈಸೂರು ದಸರಾ ಉತ್ಸವದ  ಸಂಭ್ರಮ ಒಂದು ತಿಂಗಳು ಹಿಂದಿನಿಂದಲೇ ಪ್ರಾರಂಭವಾಗುತ್ತದೆ.ನವರಾತ್ರಿಯಲ್ಲಿ ಶಕ್ತಿದೇವಿಗೆ ಪೂಜೆ ನೆಡೆಯುತ್ತದೆ.ದುರ್ಗಾ ದೇವಿ ,ಲಕ್ಷ್ಮೀ ದೇವಿ,ಸರಸ್ವತಿ ದೇವಿ ,ಕಾಳಿ ದೇವಿ ಮತ್ತು ಚಾಮುಂಡೇಶ್ವರಿ ದೇವಿಯ ರೂಪದಲ್ಲಿ ಪೂಜಿಸುತ್ತಾರೆ.ದಸರಾ ಸಮಯದಲ್ಲಿ ಅರಮನೆಯಲ್ಲಿ ದೊಡ್ಡ ದೊಡ್ಡ ಗೊಂಬೆಗಳನ್ನು ಅರಸರು ಸಂಗ್ರಹಿಸುತ್ತಿದ್ದರು.

ವಿವಿಧ ರೀತಿಯ ಗೊಂಬೆಗಳನ್ನು ತಂದು ಒಂದು ದೊಡ್ಡ ತೊಟ್ಟಿಯಲ್ಲಿ ಇರಿಸುತ್ತಿದ್ದರು.ಹಳೆಯ ಮೈಸೂರು ಪ್ರಾಂತ್ಯದ ಮನೆಗಳಲ್ಲಿ ಗೊಂಬೆ ಕೂರಿಸುವರು.

 

ಹಂತ,ಹಂತವಾಗಿ ಮೆಟ್ಟಿಲುಗಳನ್ನು ನಿರ್ಮಿಸಿ,ಪಟ್ಟದ ಗೊಂಬೆ ಮತ್ತು ಇತರೆ ಗೊಂಬೆಗಳನ್ನು ಕೂರಿಸುವರು ಹೀಗೆ ಇದೆ ಒಂದು ಸಂಸ್ಕೃತಿಯಾಗಿ ಬೆಳೆಯಿತು.

ವಿಜಯ ದಶಮಿ ದಿನದಂದು ಲಲಿತಾದೇವಿಗೆ ಸಹಸ್ರನಾಮವನ್ನು ಪಠಿಸುತ್ತಾ ಕುಂಕುಮದಿಂದ  ಕುಂಕುಮಾರ್ಚನೆಯನ್ನು ಮಾಡುತ್ತಾರೆ.ಜೊತೆಗೆ ಶಮೀ ಅಥವಾ ಬನ್ನಿ ಪತ್ರೆಯನ್ನು ಹಿರಿಯರಿಗೆ ಕೊಟ್ಟು ಕಾಲು ಮುಟ್ಟಿ ನಮಸ್ಕರಿಸುವುದು ಪದ್ದತಿಯಾಗಿ ನೆಡೆದುಬಂದಿದೆ.

 

 

ಒಂದು ಮಾತಿನಲ್ಲಿ ಹೇಳಬೇಕೆಂದರೆ ಮೈಸೂರು ದಸರಾ ಉತ್ಸವ ಮಾತಿನಿಂದ ವರ್ಣಿಸಲು ಸಾಧ್ಯವಿಲ್ಲ ಅಂತಹ ಮಹಾ ಅದ್ಬುತ ಸಂದರ್ಭವನ್ನು ಪ್ರತ್ಯಕ್ಷವಾಗಿ ನೋಡಿ ಅದನ್ನು ಆನಂದಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top