fbpx
ಸಮಾಚಾರ

ಸೆಪ್ಟೆಂಬರ್ 30: ನಿತ್ಯ ಭವಿಷ್ಯ ಮತ್ತು ಪಂಚಾಂಗ.

ಶನಿವಾರ, ೩೦ ಸೆಪ್ಟೆಂಬರ್ ೨೦೧೭
ಸೂರ್ಯೋದಯ : ೦೬:೧೭
ಸೂರ್ಯಾಸ್ತ : ೧೮:೦೪
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಆಶ್ವಯುಜ
ಪಕ್ಷ : ಶುಕ್ಲ ಪಕ್ಷ
ತಿಥಿ : ದಶಮೀ
ನಕ್ಷತ್ರ : ಉತ್ತರ ಆಷಾಢ
ಯೋಗ : ಅತಿಗಂಡ
ಅಮೃತಕಾಲ : ೧೧:೧೨ – ೧೨:೫೮

ರಾಹು ಕಾಲ: ೦೯:೧೪ – ೧೦:೪೨
ಗುಳಿಕ ಕಾಲ: ೦೬:೧೭ – ೦೭:೪೫
ಯಮಗಂಡ: ೧೩:೩೯ – ೧೫:೦೭

ಮೇಷ (Mesha)

ನಿಮ್ಮನ್ನು ವಿಚಲಿತಗೊಳಿಸಲು ಸನ್ನದ್ಧರಾಗಿಯೇ ವಿರೋಧಿಗಳು ಆಟ ಆಡುತ್ತಾರೆ. ಆದಷ್ಟು ಎಚ್ಚರ ಜತೆಗೆ ಇರಲಿ.

ವೃಷಭ (Vrushabh)


ದೂರದ ಊರಿನ ಪ್ರವಾಸದ ಬಗೆಗೆ ಪೂರ್ತಿ ತಯಾರಿಯಿಂದಲೇ ಇರಿ. ಸರ್ರನೆ ನಿಶ್ಚಯ ಸಾಧ್ಯವಾಗಲಿದೆ.

ಮಿಥುನ (Mithuna)


ಎಲ್ಲವೂ ಕೇವಲ ಅರ್ಧರ್ಧ ಕೆಲಸಗಳು ಪೂರೈಸುತ್ತಿವೆ ಎಂಬ ಚಿಂತೆ ಬೇಡ. ಪರ್ಯಾಯ ಮಾರ್ಗಗಳು ಕೂಡ ಲಭ್ಯ.

ಕರ್ಕ (Karka)


ಕ್ರೀಡಾಪಟುಗಳಿಗೂ, ಬಂಗಾರದ ಒಡವೆ, ರತ್ನದ ಹರಳುಗಳ ವ್ಯಾಪಾರಿಗಳಿಗೂ ಹಿನ್ನಡೆಆಗಲಿದೆ. ಎಚ್ಚರ ಇರಲಿ.

ಸಿಂಹ (Simha)


ಆನೆ ನಡೆದಿದ್ದೇ ದಾರಿ ಎಂಬ ವಿಚಾರ ಮನಸ್ಸಿಗೆ ಬಾರದಿರಲಿ. ಸರಳತೆ, ವಿನಯಗಳಿಂದಲೇ ಎಲ್ಲರನ್ನೂ ಗೆದ್ದು ನೋಡಿ.

ಕನ್ಯಾರಾಶಿ (Kanya)


ನಿಮ್ಮದು ಮೃದು ಮನಸ್ಸು. ಆದರೆ ಅಯೋಗ್ಯರು ಶೋಷಿಸಬಹುದು. ಜಾಣತನವು ಮಾತ್ರ ನಿಮ್ಮ ಜತೆಗೆ ಇದ್ದೇ ಇರಲಿ.

ತುಲಾ (Tula)


ನಿಮಗೇ ತಿಳಿಯದಂತಹ ವಿಷಯವೊಂದನ್ನು ನಿಮ್ಮ ಮಕ್ಕಳು ಬಹಿರಂಗಪಡಿಸಿ ಹರ್ಷವನ್ನು ಉಂಟುಮಾಡುತ್ತಾರೆ.

ವೃಶ್ಚಿಕ (Vrushchika)


ಬಹು ನಿರೀಕ್ಷಿತ ವಿಷಯವೊಂದು ಘಟಿಸದೆ, ಅನಿರೀಕ್ಷಿತ ವಿಷಯದಿಂದಾಗಿ ಹೆಚ್ಚಿನದಾದ ಸಂತಸವನ್ನು ಪಡುವಿರಿ.

ಧನು ರಾಶಿ (Dhanu)


ಕೆಲವು ಕ್ಷುಲ್ಲಕ ವಿಚಾರಗಳನ್ನು ಮೇಲೆತ್ತಿ ಸಹೋದರರಿಂದ ಮನಸ್ಸಿಗೆ ಖೇದ ಒದಗಬಹುದು. ತಾಳ್ಮೆ ಇರಲಿ.

ಮಕರ (Makara)


ವಿರುದ್ಧ ಲಿಂಗಿಗಳೊಡನೆ ಕಟ್ಟೆಚ್ಚರದಿಂದಿರಿ. ಈಗ ಸಾಡೇಸಾತಿ ಸಂದರ್ಭವಾಗಿದೆ. ತೊಂದರೆಯನ್ನು ತಪ್ಪಿಸಿಕೊಳ್ಳಿ.

ಕುಂಭರಾಶಿ (Kumbha)


ಮೇಲಧಿಕಾರಿಗಳು ನಿಮ್ಮ ಬಳಿ ಬಹು ಮುಖ್ಯ ವಿಚಾರದಲ್ಲಿ ಸಲಹೆ ಕೇಳಬಹುದು. ಉತ್ತಮ ಸಂಗತಿಯನ್ನು ತಿಳಿಸಿ. ಒಳಿತಿದೆ.

ಮೀನರಾಶಿ (Meena)


ನಿಮ್ಮ ಸಲಹೆ ಸೂಚನೆಗಳಿಗಾಗಿ ಕಾದಿದ್ದೇವೆ ಎಂಬ ನಟನೆ ಮಾಡಿ ಹಣವನ್ನು ದೋಚಬಹುದು. ಆ ಕುರಿತು ಎಚ್ಚರವಾಗಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top