fbpx
ಸಮಾಚಾರ

ಚಿಕಿತ್ಸಾ ವೆಚ್ಚ ಭರಿಸಿದ್ದೇವೆ ಎಂದು ಉಮಾಶ್ರೀ ಸುಳ್ಳು ಹೇಳಿಕೆ ನೀಡಿದ್ದಾರೆ: ಸಾಲುಮರದ ತಿಮ್ಮಕ್ಕ.

ಚಿಕಿತ್ಸಾ ವೆಚ್ಚ ಭರಿಸಿದ್ದೇವೆ ಎಂದು ಉಮಾಶ್ರೀ ಸುಳ್ಳು ಹೇಳಿಕೆ ನೀಡಿದ್ದಾರೆ: ಸಾಲುಮರದ ತಿಮ್ಮಕ್ಕ.

 

 

 

ಸಾಲುಮರದ ತಿಮ್ಮಕ್ಕನವರ ಚಿಕಿತ್ಸೆಗಾಗಿ ಆಸ್ಪತ್ರೆ ಖರ್ಚು ವೆಚ್ಚಗಳನ್ನು ಭರಿಸಿದ್ದೇವೆ ಎಂದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಮಾಶ್ರೀ ಸುಳ್ಳು ಹೇಳಿಕೆ ನೀಡಿದ್ದಾರೆ ಉಮಾಶ್ರೀ ಹೇಳಿಕೆಯನ್ನು ಸಾಲು ಮರದ ತಿಮ್ಮಕ್ಕ ಖಂಡಿಸಿದ್ದಾರೆ.

 

 

“ನನ್ನ ಚಿಕಿತ್ಸೆಗಾಗಿ ಆಸ್ಪತ್ರೆ ಖರ್ಚು ವೆಚ್ಚಗಳನ್ನು ಭರಿಸುವಂತೆ ಸರ್ಕಾರಕ್ಕೆ ಕೇಳಿರಲಿಲ್ಲ ಮತ್ತು ಸರ್ಕಾರ ಕೂಡ ಚಿಕಿತ್ಸಾ ವೆಚ್ಚ ಭರಿಸಿಲ್ಲ. ನನ್ನ ಮಗ, ಸಂಬಂಧಿಕರು, ಸ್ನೇಹಿತರು ಸಾಲ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಸರ್ಕಾರದಿಂದ ತಿಂಗಳಿಗೆ 500 ರೂಪಾಯಿ ದುಡ್ಡು ಬರುತ್ತದೆ ಅದನ್ನು ಬಿಟ್ಟರೆ ಸರ್ಕಾರ ಈವರೆಗೂ ಒಂದು ರೂಪಾಯಿಯನ್ನೂ ಚಿಕಿತ್ಸೆಗಾಗಿ ಕೊಟ್ಟಿಲ್ಲ. ಹೀಗೆ ಸುಳ್ಳು ಹೇಳುವ ಮೂಲಕ ಅವರ ಗೌರವವನ್ನು ಅವರೇ ಕಳೆದುಕೊಂಡಿದ್ದಾರೆ. ಅವರು ಪ್ರಚಾರ ಪಡ್ಕೋಳೋಕೆ ಈ ರೀತಿ ತಪ್ಪು ಹೇಳಿಕೆ ನೀಡಬಾರದು,’ ಎಂದು ಪತ್ರಿಕಾಗೋಷ್ಠಿಯಲ್ಲಿ ಉಮಾಶ್ರೀಯ ವಿರುದ್ಧ ಕಿಡಿಕಾರಿದ್ದಾರೆ.

 

 

ಮೋದಿಯಿಂದ ಆಹ್ವಾನ:

ಗಾಂಧಿ ಜಯಂತಿ ಪ್ರಯುಕ್ತ ಅಕ್ಟೊಬರ್ 2ರಂದು ನವದೆಹಲಿಯಲ್ಲಿ ನಡೆಯಲಿರುವ ‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಮ್ಮಕ್ಕ ನವರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದು ಕೋರಿದ್ದು, ತಾವು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದಾಗಿ ಸಾಲುಮರದ ತಿಮ್ಮಕ್ಕ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top