fbpx
ಜಾಗೃತಿ

ಇನ್ಮುಂದೆ ಫೇಸ್ಬುಕ್ ವಾಟ್ಸ್ಯಾಪ್ ನಲ್ಲಿ ಈ ಕೆಲಸ ಮಾಡುದ್ರೆ ನೀವು ಜೈಲಿಗೆ ಹೋಗೋದು ಗ್ಯಾರಂಟಿ..

ಇನ್ಮುಂದೆ ಫೇಸ್ಬುಕ್ ವಾಟ್ಸ್ಯಾಪ್ ನಲ್ಲಿ ಈ ಕೆಲಸ ಮಾಡುದ್ರೆ ನೀವು ಜೈಲಿಗೆ ಹೋಗೋದು ಗ್ಯಾರಂಟಿ..

 

 

ಪ್ರಸ್ತುತ ಕಾಲದಲ್ಲಿ ಜನ ಬೆಳಿಗ್ಗೆ ಟೈಮ್ ಹಲ್ಲುಜ್ಜಿ ತಿಂಡಿ ತಿನ್ನುವುದನ್ನು ಮರೆಯುತ್ತಾರೋ ಏನೋ ಆದರೆ ಬೆಳಿಗ್ಗೆ ಎದ್ದ ತಕ್ಷಣ ಕೈನಲ್ಲಿ ಫೋನ್ ಇಟ್ಕೊಂಡು ಫೇಸ್ ಬುಕ್ಕು ವಾಟ್ಸಾಪ್ಪು ಅಂತ ಸೋಷಿಯಲ್ ಮೀಡಿಯಾಗಳ ತರ್ಲೆ ಮಾಡೋದನ್ನ ಮಾತ್ರ ಬಿಡಲ್ಲ. ಮೊದಲೆಲ್ಲಾ ಮೈದಾನದಲ್ಲಿ ಹೋಗಿ ಆಡುತಿದ್ದವರು ಈಗ ಮೊಬೈಲ್ ನಲ್ಲೆ ಆಡಲು ಶುರುವಾಗಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿಗಳು, ಕೆಲವರನ್ನು ಅವಮಾನಿಸುವ ಪೋಸ್ಟ್ ಗಳು ಹೆಚ್ಚಾಗಿ ಕಾಣುತ್ತಿವೆ ಆದರೆ ಇನ್ಮುಂದೆ ಅದು ನಡಿಯೋದಿಲ್ಲ ಏಕೆಂದರೆ ಫೇಸ್ಬುಕ್, ವಾಟ್ಸಾಪ್ ನಿಯಮಗಳ ಪ್ರಕಾರ ಫೇಸ್ ಬುಕ್ ವಾಟ್ಸಾಪ್ ಗಳಲ್ಲಿ ಈ ಕೆಲಸಗಳನ್ನು ಮಾಡಿದರೆ ಜೈಲಿಗೆ ಹೋಗಬೇಕುತ್ತದೆ.

 

 

ಹಾಗಾದ್ರೆ ಫೇಸ್ಬುಕ್, ವಾಟ್ಸಾಪ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಯಾವ ಯಾವ ತಪ್ಪುಗಳನ್ನು ಮಾಡಿದರೆ ಎಷ್ಟು ಪ್ರಮಾಣದ ಶಿಕ್ಷೆ ನೀಡಲಾಗುತ್ತದೆ ಗೊತ್ತಾ? ಮುಂದೆ ಓದಿ.

1.ಸೋಷಿಯಲ್ ಮೀಡಿಯಾಗಳಲ್ಲಿ ಅಸಭ್ಯ ಫೋಟೋ ಶೇರ್ ಮಾಡಿದರೆ:

 

 

ಸೋಷಿಯಲ್ ಮೀಡಿಯಾಗಳಲ್ಲಿ ಅಸಭ್ಯಕರವಾದ ಅಂಶವನ್ನು ವೀಡಿಯೊ ರೂಪದಲ್ಲಾಗಲಿ, ಟೆಕ್ಸ್ಟ್, ಫೋಟೋ, ಆಡಿಯೋ ರೂಪದಲ್ಲಾಗಲಿ ಪೋಸ್ಟ್ ಮಾಡಿದರೆ ಅಥವಾ ಶೇರ್ ಮಾಡಿದಂತವರು ಐಪಿಸಿ ಸೆಕ್ಷನ್ 292ರ ಒಳಗೆ ಕ್ಷೆಗೆ ಒಳಗಾಗುತ್ತಾರೆ. ಈ ಸೆಕ್ಷನ್ ಪ್ರಕಾರ ಅಂತವರಿಗೆ ಎರಡು ವರ್ಷ ಜೈಲು ಶಿಕ್ಷೆ ನೀಡಲಾಗುತ್ತದೆ..

2.ಒಬ್ಬ ವ್ಯಕ್ತಿಯ ಅಪ್ಪಣೆ ಇಲ್ಲದೆ ಅವರ ಫೋಟೋ, ವಿಡಿಯೋ ಬಳಸಿಕೊಂಡರೆ.

 


ಒಬ್ಬ ವ್ಯಕ್ತಿಯ ಅಪ್ಪಣೆ ಇಲ್ಲದೆ ಅವರ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾ ಗಳಲ್ಲಿ ಪೋಸ್ಟ್ ಮಾಡಿದರೆ ಅಂತವರ ವಿರುದ್ಧ ಸೆಕ್ಷನ್ 499 ಕೆಳಗೆ ಚೀಟಿಂಗ್ ಕೇಸ್ ಹಾಕಬಹುದು..,

3. ಫೇಕ್ ಪ್ರೊಫೈಲ್ ಗಳನ್ನು ಸೃಷ್ಟಿಸಿದರೆ..,


ಸೋಷಿಯಲ್ ಮೀಡಿಯಾಗಳಲ್ಲಿ ಫೇಕ್ ಅಕೌಂಟ್ ಗಳನ್ನು ಓಪನ್ ಮಾಡೋದು ಇದು ತುಂಬಾ ಅಪರಾಧ: ಹೀಗೆ ಮಾಡಿದರೆ ಸೆಕ್ಷನ್ 499 ರ ಅಡಿ ಕೇಸ್ ಹಾಕಬಹುದು.

4.ಇತರರ ವೈಫೈಯನ್ನು ದುರ್ಬಳಕೆ ಮಾಡಿಕೊಂಡರೆ:


ಇತರರ ವೈ-ಫೈಯನ್ನು ಬಳಸಿ ಸೋಷಿಯಲ್ ಮೀಡಿಯಾಗಳಲ್ಲಿ ಕಾನೂನುಬಾಹಿರ ಕೆಲಸಗಳನ್ನ ಮಾಡಿದರೆ ಅಂತವರಿಗೆ ಐಟಿ ಕಾನೂನಿನ ಸೆಕ್ಷನ್ 66ರ ಕೆಳಗೆ ಶಿಕ್ಷೆಯಾಗುತ್ತದೆ.

 

 

ಆನ್ಲೈನ್ ನಲ್ಲಿ ಎಲ್ಲಿ ಏನು ತಪ್ಪು ಮಾಡಿದರೂ ಆದ್ದರಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಫೋನ್ ನೆಟ್ ಉಪಯೋಗಿಸಿದ್ದರೇ, ಫೋನ್ ನಂಬರ್ ಮೂಲಕ ಮತ್ತು
ಕಂಪ್ಯೂಟರ್ ಉಪಯೋಗಿಸಿದ್ದರೇ, ಐಪಿ ಅಡ್ರೆಸ್ ಮೂಲಕ ಕೆಲವು ಗಂಟೆಗಳಲ್ಲೇ ಕಂಡುಹಿಡಿಯಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top