fbpx
ತಿಂಡಿ ತೀರ್ಥ

ಸಂಜೆ ಟೀ ಜೋತೆ ಸವಿಯಲು ಬಿಸಿಬಿಸಿ ಚೀಸ್ ಮಶ್ರೂಮ್ ಆಮ್ಲೇಟ್ ಮಾಡುವ ವಿಧಾನ

ಚೀಸ್ ಮಶ್ರೂಮ್ ಆಮ್ಲೇಟ್ ಮಾಡಲು ಬೇಕಾಗುವ ಸಾಮಾಗ್ರಿಗಳು :

ಮೊಟ್ಟೆ 4

ಅಣಬೆ 1 ಪ್ಯಾಕೆಟ್

ಚಿಟಿಕೆಯಷ್ಟು ಗರಂ ಮಸಾಲ

ರುಚಿಗೆ ತಕ್ಕ ಉಪ್ಪು

ಈರುಳ್ಳಿ 1

ಕಾಳು ಮೆಣಸಿನ ಪುಡಿ 1 ಚಮಚ

ಚೀಸ್ 1 ತುಂಡು

ಬೆಣ್ಣೆ 2 ಚಮಚ

ಚೀಸ್ ಮಶ್ರೂಮ್ ಆಮ್ಲೇಟ್  ತಯಾರಿಸುವ ವಿಧಾನ :

* ಪಾತ್ರೆಗೆ 1 ಚಮಚ ಬೆಣ್ಣೆ ಹಾಕಿ ಉರಿಯಲ್ಲಿಡಿ. ಬೆಣ್ಣೆ ಬಿಸಿಯಾದಾಗ ಅದಕ್ಕೆ ಶುಚಿ ಮಾಡಿದ ಅಣಬೆಯನ್ನು ಹಾಕಿ, ರುಚಿಗೆ ತಕ್ಕ ಉಪ್ಪು ಮತ್ತು ಗರಂ ಮಸಾಲ ಹಾಕಿ ಚೆನ್ನಾಗಿ ಬೇಯಿಸಬೇಕು.

* ಮೊಟ್ಟೆಗೆ ಸ್ವಲ್ಪ ಉಪ್ಪು ಮತ್ತು ಕರಿ ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಕದಡಬೇಕು.

* ನಂತರ ತವಾವನ್ನು ಗ್ಯಾಸ್ ಮೇಲೆಟ್ಟು ಸ್ವಲ್ಪ 2 ಚಮಚ ಎಣ್ಣೆ ಹಾಕಿ ಕದಡಿದ ಮೊಟ್ಟೆ ಹಾಕಿ , ಮೊಟ್ಟೆ ಸ್ವಲ್ಪ ಬೇಯುವಾಗ ಫ್ರೈ ಮಾಡಿದ ಅಣಬೆಯನ್ನು ಹಾಕಿ, ಅದರ ಮೇಲೆ ಚೀಸ್ ಹಾಕಿ ನಂತರ ತೆಗೆದರೆ ರುಚಿ-ರುಚಿಯಾದ ಮಶ್ರೂಮ್ ಆಮ್ಲೇಟ್ ರೆಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top