fbpx
ಸಮಾಚಾರ

10 ಕೋಟಿ ವೆಚ್ಚದಲ್ಲಿ 5 ಎಕರೆ ಪ್ರದೇಶದಲ್ಲಿ ನರೇಂದ್ರ ಮೋದಿ ದೇವಾಲಯ ನಿರ್ಮಾಣ..!

10 ಕೋಟಿ ವೆಚ್ಚದಲ್ಲಿ 5 ಎಕರೆ ಪ್ರದೇಶದಲ್ಲಿ ನರೇಂದ್ರ ಮೋದಿ ದೇವಾಲಯ ನಿರ್ಮಾಣ..!

 

 

ದೇಶದ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳು ಮೋದಿಯವರ 100 ಅಡಿ ಎತ್ತರದ ಪ್ರತಿಮೆಯಿರುವ ದೇವಾಲಯವನ್ನು ಕಟ್ಟಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಮೀರತ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳು ಮೋದಿ ದೇವಸ್ಥಾನವನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದು ಮೀರತ್ ನ ಸಾರ್ಧಾನಾ ಪ್ರದೇಶದಲ್ಲಿ ಈ ಮೋದಿ ದೇವಾಲಯ ನಿರ್ಮಾಣವಾಗಲಿದೆ.

 

 

ಕಳೆದ ವರ್ಷ ನಿವೃತ್ತಿಗೊಂಡಿದ್ದ ಉತ್ತರ ಪ್ರದೇಶದ ಜಲ ಇಲಾಖೆಯ ಸಹಾಯಕ ಎಂಜಿನಿಯರ್ ಜೆಪಿ ಸಿಂಗ್ ಅವರು ಮೋದಿ ದೇವಾಲಯವನ್ನು ನಿರ್ಮಿಸುವುದಾಗಿ ಹೇಳಿದ್ದು ಇದಕ್ಕೆ ಸುಮಾರು 10 ಕೋಟಿ ವೆಚ್ಚವಾಗಲಿದೆ. ಮೋದಿ ದೇವಸ್ಥಾನದ ನಿರ್ಮಾಣಕ್ಕಾಗಿ ಮೀರತ್-ಕರ್ನಲ್ ಹೆದ್ದಾರಿಯಲ್ಲಿ ಸುಮಾರು 5 ಎಕರೆ ಜಮೀನನ್ನು ಖರೀದಿಸಲಾಗಿದೆ.

 

 

ಮೋದಿಯವರ ದೇವಾಲಯದ ಆವರಣದೊಳಗೆ ಸುಮಾರು 100 ಅಡಿ ಎತ್ತರದ ಮೋದಿ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ, ಇನ್ನು ಎರಡು ವರ್ಷಗಳಲ್ಲಿ ಮೋದಿ ಪ್ರತಿಮೆ ಮತ್ತು ದೇವಾಲಯ ನಿರ್ಮಾಣವಾಗಲಿದೆ ಮತ್ತು ಮೋದಿ ದೇವಸ್ಥಾನ ನಿರ್ಮಾಣಕ್ಕೆ ಅಕ್ಟೋಬರ್ 23ರಂದು ಭೂಮಿ ಪೂಜೆ ನೆರವೇರಲಿದ್ದು ನಂತರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಜೆಪಿ ಸಿಂಗ್ ಹೇಳಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top