fbpx
ಸಮಾಚಾರ

ಮೋದಿ ವಿರುದ್ಧ ಹೇಳಿಕೆ: ನಟ ಪ್ರಕಾಶ್ ರೈ ವಿರುದ್ಧ ಕೇಸ್ ದಾಖಲು..ಅಸಲಿಗೆ ಕೇಸ್ ದಾಖಲಿಸಿದ್ದು ಯಾರು ಗೊತ್ತಾ?

ಮೋದಿ ವಿರುದ್ಧ ಹೇಳಿಕೆ: ನಟ ಪ್ರಕಾಶ್ ರೈ ವಿರುದ್ಧ ಕೇಸ್ ದಾಖಲು..ಅಸಲಿಗೆ ಕೇಸ್ ದಾಖಲಿಸಿದ್ದು ಯಾರು ಗೊತ್ತಾ?

 

 

ಹಿರಿಯ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ಕೊಟ್ಟಿದ್ದ ಬಹುಭಾಷಾ ನಟ ಪ್ರಕಾಶ್ ರೈ ರವರ ವಿರುದ್ಧ ಕೋರ್ಟ್ ನಲ್ಲಿ ಕೇಸ್ ದಾಖಲಿಸಲಾಗಿದೆ. ಗೌರಿ ಲಂಕೇಶ್ ಹತ್ಯೆಯನ್ನು ಸಾಮಾಜಿಕ ತಾಣದಲ್ಲಿ ನೀಚವಾಗಿ ಸಂಭ್ರಮಿಸುತ್ತಿರುವವರನ್ನು ಪ್ರಧಾನಿ ಮೋದಿ ಫಾಲೋ ಮಾಡುತ್ತಿದ್ದಾರೆ ಎಂದು ಅಸಮಾಧಾನ ಪ್ರಕಾಶ್ ರೈ ವ್ಯಕ್ತಪಡಿಸಿದ್ದರು.. ಮುಂದೆ ಓದಿ.

 

 

 

ಇದರಿಂದ ಕೋಪಗೊಂಡಿರುವ ಮೋದಿ ಹಾಗೂ ಬಿಜೆಪಿ ಬೆಂಬಲಿಗ ವಕೀಲರೊಬ್ಬರು ಲಖನೌ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದಾರೆ. ಅಕ್ಟೋಬರ್ 7ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ.ಎಂದು ಮೂಲಗಳಿಂದ ತಿಳಿದುಬಂದಿದೆ.

 

 

ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ಐ) ನ 11 ನೇ ಸಭೆಯಲ್ಲಿ ಮಾತನಾಡಿದ ಪ್ರಕಾಶ್ ರೈಯವರು ಗೌರಿ ಹತ್ಯೆಯನ್ನು ಸಂಭ್ರಮಿಸಿದ ವಿಕೃತ ಮನಸಿನವರನ್ನು ಪ್ರಧಾನಿಯವರು ಫಾಲೋ ಮಾಡಿಯಿದ್ದಾರೆ ‘ ನಾನು ರಾಷ್ಟ್ರಪ್ರಶಸ್ತ್ರಿ ವಿಜೇತ ನಟ, ಮೋದಿ ನನಗಿಂತ ದೊಡ್ಡ ನಟ,, ನನ್ನ ರಾಷ್ಟ್ರ ಪ್ರಶಸ್ತಿಗಳನ್ನು ಅವರಿಗೆ ನೀಡಬೇಕು ‘ ಎಂದು ಹೇಳಿದ್ದರು..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top