fbpx
ಸಮಾಚಾರ

18 ವರ್ಷ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ವೆಂಕಯ್ಯ ಈಗ ತೆಲುಗು ಪರ ಬ್ಯಾಟಿಂಗ್..

ಭೂತದ ಬಾಯಿಯಲ್ಲಿ ಭಗವದ್ಗೀತೆ..!

 

 

ಕಳೆದ 18 ವರ್ಷಗಳಿಂದ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಎಂ.ವೆಂಕಯ್ಯ ನಾಯ್ಡು ರಾಜ್ಯದಿಂದ ಮೂರು ಬಾರಿ ಆಯ್ಕೆಯಾಗಿದ್ದರೂ ಕನಿಷ್ಠ ಎರಡು ಕನ್ನಡ ಪದವನ್ನೂ ಅವರು ಕಲಿತಿಲ್ಲ. ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಅವರ ಕೊಡುಗೆ ಶೂನ್ಯ. ಯಾವಾಗಲೂ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಹೇಳಿಕೊಂಡು ಓಡಾಡುತ್ತಿದ್ದ ನಾಯ್ಡು ಈಗ ಅವರ ಆಂಧ್ರ ಪ್ರದೇಶದಲ್ಲಿ ಮಾತ್ರ ಪ್ರತ್ಯೇಕ ಕಾನೂನುನೊಂದನ್ನು ಜಾರಿಗೊಳಿಸಲು ಸಲಹೆ ನೀಡುವ ಮೂಲಕ ರಾಷ್ಟ್ರ ವಿಭಜನೆಯ ಕೆಲಸ ಮಾಡುತ್ತಿದ್ದಾರೆ.

 

 

ಇತ್ತೀಚಿಗೆ ಆಂಧ್ರಪ್ರದೇಶದ ಶಾಲೆಗಳಲ್ಲಿ ತೆಲುಗು ಭಾಷೆಯನ್ನು ಕಲಿಯುವುದು ಕಡ್ಡಾಯ ಮಾಡಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಕ್ರಮವನ್ನು ಶ್ಲಾಘಿಸಿದ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಆಂಧ್ರದಲ್ಲಿ ಉದ್ಯೋಗ ಪಡೆಯಲು ತೆಲುಗು ಭಾಷೆಯನ್ನು ಕಡ್ಡಾಯ ಮಾಡುವಂತೆ ಸಲಹೆ ನೀಡಿದ್ದಾರೆ.

 

 

ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಕೆಲ ರಾಷ್ಟ್ರೀಯ ಹೆದ್ದಾರಿಯ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ವೆಂಕಯ್ಯ ನಾಯ್ಡು ಆಂಧ್ರಪ್ರದೇಶದಲ್ಲಿ ಉದ್ಯೋಗ ಪಡೆಯಲು ಕಡ್ಡಾಯವಾಗಿ ತೆಲುಗು ಗೊತ್ತಿರಬೇಕು ಮತ್ತು ತೆಲುಗು ಭಾಷೆಯನ್ನು ಕಡ್ಡಾಯಗೊಳಿಸಬೇಕು ಎಂದು ಹೇಳಿದ್ದಾರೆ.

 

 

ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ನೌಕರರಿಗೆ ಕಡ್ಡಾಯಗೊಳಿಸಿದರೆ ಅದನ್ನು ವಿರೋಧಿಸುವ ವೆಂಕಯ್ಯ ನಾಯ್ಡು ತನ್ನ ರಾಜ್ಯವಾದ ಅಂದ್ರ ಪ್ರದೇಶದಲ್ಲಿ ಮಾತ್ರ ತೆಲುಗು ಭಾಷೆಯನ್ನು ಕಡ್ಡಾಯ ಮಾಡಬೇಕು ಎಂದು ಹೇಳೋದು ಎಷ್ಟು ಸರಿ.,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top