fbpx
ದೇವರು

ಶಿವನ ಮೂರನೇ ಕಣ್ಣು ಹೇಗೆ ಹುಟ್ಟಿತು ಅಂತ ಓದಿ ಆ ಸ್ಟೋರಿ ಓದಿದ್ಮೇಲೆ ಆಶ್ಚರ್ಯ ಆಗ್ದೇ ಇರಲ್ಲ !

ಶಿವನ ಮೂರನೇ ಕಣ್ಣಿನ ಹಿಂದಿರುವ ರೋಚಕ ಕಥೆ.

ಮೂರು ಕಣ್ಣಿನ ಮುಕ್ಕಣ್ಣ ಎಂಬುದಾಗಿ ಶಿವ ಪರಮಾತ್ಮನನ್ನು ಭಕ್ತರು ಸಂಭೋದಿಸುತ್ತಾರೆ.ತನ್ನ ಮೂರನೆಯ ಕಣ್ಣನ್ನು ಶಿವ ತೆರೆದಲ್ಲಿ ಇಡೀ ವಿಶ್ವವೇ ಭಸ್ಮವಾಗುತ್ತದೆ ಎಂಬ ಮಾತಿದೆ.ಶಿವನ ಮೂರನೆಯ ಕಣ್ಣು ಪ್ರಳಯಾಗ್ನಿ ಎಂದೂ ಸಹ  ಕರೆಯುತ್ತಾರೆ.

 

 

ಜಗದೊಡೆಯನಾದ ಶಿವನನ್ನು ವಿಶ್ವದ ಕಣ್ಣು,ಬೆಳಕು ಎಂದು ಕರೆಯುತ್ತಾರೆ. ವಿಶ್ವದ ಚರಾಚರ ವಸ್ತುಗಳ ಜೀವ ಕೂಡ ಪರ ಶಿವನಲ್ಲಿದೆ ಎಂಬ ಮಾತಿದೆ.ಶಿವನ ಹಣೆಯಲ್ಲಿ  ಈ ಮೂರನೇ  ಕಣ್ಣಿದ್ದು. ಈ ಮೂರನೆಯ ಕಣ್ಣಿಗೆ ಸ್ವಾರಸ್ಯಕರವಾದ ಸಂಗತಿಯೊಂದಿದೆ,ಮುಂದೆ ಓದಿ…

ಶಿವನ ಕಣ್ಣುಗಳನ್ನು ಪಾರ್ವತಿ ದೇವಿ ಮುಚ್ಚಿದಾಗ.

 

 

ಒಮ್ಮೆ ಶಿವನು ಧ್ಯಾನದಲ್ಲಿ ಕುಳಿತಿರುವಾಗ ಅವರ ಪತ್ನಿ ಪಾರ್ವತಿ ದೇವಿಯು ಸುಮ್ಮನೆ   ಆಟಕ್ಕಾಗಿ ತನ್ನ ಎರಡೂ ಕೈಗಳಿಂದ ಶಿವನ ಕಣ್ಣುಗಳನ್ನು ಮುಚ್ಚುತ್ತಾಳೆ.ಆ ಕೂಡಲೇ ಸಂಪೂರ್ಣ ವಿಶ್ವ ಕತ್ತಲೆಯಿಂದ ತುಂಬಿ ಹೋಯಿತು. ದೇವಾನು ದೇವತೆಗಳು ಕೂಡ ಅಧೈರ್ಯ ಗೊಳ್ಳುತ್ತಾರೆ.ಎಲ್ಲಾ ಕಡೆ ಕೋಲಾಹಲ ಉಂಟಾಗುತ್ತದೆ. ಈ ಸಮಯದಲ್ಲಿ ಶಿವನು ತನ್ನ ಶಕ್ತಿಯಿಂದ  ಹಣೆಯಲ್ಲಿ ಮೂರನೇ ಕಣ್ಣನ್ನು ಸೃಷ್ಟಿಸಿಕೊಳ್ಳುತ್ತಾನೆ. ಈ ಕಣ್ಣಿನಲ್ಲಿ ಬೆಂಕಿಯುಂಟಾಗಿ ವಿಶ್ವಕ್ಕೆ ಬೆಳಕು ಬರುತ್ತದೆ.

ಅಂಧಕ ಎಂಬ ಮಗುವಿನ ಜನನ.

ಈ ಶಿವನ ಮೂರನೆಯ ಕಣ್ಣಿನಿಂದ ಉಂಟಾದ ಬೆಂಕಿಯು ಪಾರ್ವತಿಯ ಕೈಗಳನ್ನು ಸುಡುತ್ತದೆ.ಏಕೆಂದರೆ ಆಕೆ ಶಿವನ ಬಲ ಮತ್ತು ಎಡಗಣನ್ನು ತನ್ನ ಕೈಯಿಂದ  ಮುಚ್ಚಿರುತ್ತಾಳೆ.ಈ ಸಮಯದಲ್ಲಿ ಶಿವ ಮತ್ತು ಪಾರ್ವತಿಯ ಶಕ್ತಿಯು ಸಮ್ಮಿಲನಗೊಂಡು ಅಂಧಕ ಎಂಬ ಮಗುವಿನ ಜನನವಾಗುತ್ತದೆ.

 

 

ಅಂಧಕನನ್ನು ಶಿವನ ಅಸುರ ಭಕ್ತನೊಬ್ಬ ಪೋಷಿಸುತ್ತಾನೆ.ತನ್ನ ಮೂಲ ಹುಟ್ಟನ್ನು ಅರಿತು ಕೊಳ್ಳದಯೇ ಅಂಧಕನು ಬೆಳೆಯುತ್ತಾನೆ.ತನ್ನ ಯುವ ವಯಸ್ಸಿನಲ್ಲಿ ಕಠಿಣವಾದ ತೇಜಸ್ಸನ್ನು ಆಚರಿಸಿ ಅಂಧಕನು.ತನ್ನ ತಂದೆಯಿಲ್ಲದೆ ಮತ್ತಾರೂ ತನ್ನನ್ನು ವಧಿಸಬಾರದು ಎಂಬ ವರವನ್ನು ಪಡೆದುಕೊಳ್ಳುತ್ತಾನೆ.  ತನ್ನ ವರದ ಬಲದಿಂದ ಅಂಧಕನು ಮೂರು ಲೋಕಗಳ ಮೇಲೆ ವಿಜಯವನ್ನು ಗಳಿಸುತ್ತಾನೆ.

ಪಾರ್ವತಿ ದೇವಿಯ ಮೇಲೆಯೇ ಮೋಹಿತನಾಗುತ್ತಾನೆ.

 

 

ಒಮ್ಮೆ ಪಾರ್ವತಿ ದೇವಿಯನ್ನು ಕಂಡ ಅಂಧಕನು ಆಕೆಯಲ್ಲಿ ಮೋಹಿತನಾಗುತ್ತಾನೆ . ಆಕೆಯನ್ನು ತನ್ನ ಪತ್ನಿಯನ್ನಾಗಿಸಿ ಕೊಳ್ಳಬೇಕೆಂದು ಅವರನ್ನು ಹಿಂಬಾಲಿಸುತ್ತಾನೆ.ಈ ಸಮಯದಲ್ಲಿ ಪಾರ್ವತಿಯು ಶಿವನಲ್ಲಿ ತನ್ನನ್ನು ರಕ್ಷಿಸಿಕೊಳ್ಳುವಂತೆ ಬೇಡಿಕೊಳ್ಳುತ್ತಾಳೆ.

ಕ್ಷಮೆಯಾಚಿಸಿದ ಅಂಧಕ.

 

 

ಪಾರ್ವತಿಯನ್ನು  ರಕ್ಷಿಸುವುದಕ್ಕಾಗಿ ಶಿವನು ಅಂಧಕನನ್ನು ವಧಿಸುತ್ತಾನೆ. ಹೀಗೆ  ಅಂಧಕನು ತಾನು ಬೇಡಿದ ವರದಿಂದಲೇ ತನ್ನ ಅಂತ್ಯವನ್ನು ಕಂಡುಕೊಳ್ಳುತ್ತಾನೆ.ತನ್ನ ಹುಟ್ಟಿನ ಸತ್ಯವನ್ನು ಅರಿತು ಅಂಧಕನು ತನ್ನ ಕುಕೃತ್ಯಗಳಿಗಾಗಿ ಶಿವನಲ್ಲಿ ಕ್ಷಮೆಯನ್ನು ಯಾಚಿಸುತ್ತಾನೆ.

ಬ್ರಹ್ಮ,ವಿಷ್ಣು,ಮಹೇಶ್ವರರು.

 

 

ತ್ರಿಮೂರ್ತಿ ಎಂಬ ಬಿರುದನ್ನು ಪಡೆದುಕೊಂಡಿರುವ ಬ್ರಹ್ಮ ,ವಿಷ್ಣು, ಮಹೇಶ್ವರರು ತಮ್ಮ ವಿಶ್ವ ಕಲ್ಯಾಣ ಅಂಶಗಳಿಂದ ಈ ಬಿರುದಿಗೆ ಭಾಜನರಾಗಿದ್ದಾರೆ. ಸೃಷ್ಟಿಕರ್ತ ಬ್ರಹ್ಮನಾದರೆ,ಸಂರಕ್ಷಣೆಯ ಹೊಣೆಗಾರಿಕೆಯನ್ನು ವಿಷ್ಣು ಮಾಡುತ್ತಾರೆ.ಅಂತೆಯೇ ಶಿವನು ವಿನಾಶಕ್ಕೆ ಜವಾಬ್ದಾರರಾಗಿದ್ದರೆ ಹೇಗೆ ಶಿವನು ಮೂರನೆಯ ಕಣ್ಣು ವಿನಾಶದ ಸಂಕೇತವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Ram says:

nice thiliyada vicharavannu manadattu madisiddakkagi hrutpooraka namanagalu

To Top