fbpx
ದೇವರು

ದೇವರ  ಪ್ರತಿಮೆ ಇರೋ ಉಂಗುರ ಸುಮ್ನೆ ಹಾಕೊಂಡ್ರೆ ಸಾಕಾಗಲ್ಲ ಅದಕ್ಕೆ ಕೆಲವು ನಿಯಮಗಳು ತಪ್ಪದೆ ಪಾಲಿಸಲೇಬೇಕು

ದೇವರ  ಪ್ರತಿಮೆಯ ಉಂಗುರವನ್ನು ಧರಿಸಿದರೆ ಸಾಕಾಗುವುದಿಲ್ಲ ಅದಕ್ಕೆ ಕೆಲವು ನಿಯಮಗಳನ್ನು ಸಹ ಅನುಸರಿಸಬೇಕು.

 

 

ನಮ್ಮಲ್ಲಿ ತುಂಬಾ ಜನರು ದೇವರ ವಿಗ್ರಹ ಅಥವಾ ಪ್ರತಿಮೆ ಇರುವ ಗಣೇಶ,ಲಕ್ಷ್ಮೀ ದೇವಿಯ ಲಾಕೆಟಗಳನ್ನು ಸರದಲ್ಲಿ ಹಾಕಿ ಕತ್ತಿನಲ್ಲಿ ಧರಿಸುತ್ತಾರೆ  ಮತ್ತು ಉಂಗುರಗಳನ್ನು  ಕೈ ಬೆರಳುಗಳಿಗೆ  ಧರಿಸುತ್ತಾರೆ.ಬೆಳಗಿನ ಜಾವ ಎದ್ದ ತಕ್ಷಣ ಅದನ್ನು ಮೊದಲಿಗೆ ನಮಸ್ಕರಿಸಿಕೊಳ್ಳುತ್ತಾರೆ.

 

 

ದೇವರ ಪ್ರತಿಮೆ ಇರುವ ಉಂಗುರವನ್ನು ಧರಿಸಿದರೆ ಮಾತ್ರ ಸಾಕಾಗಲ್ಲ.ಇದಕ್ಕೆ ಕೆಲವು ನಿಯಮಗಳು ಸಹ ಇವೆ.ಅವುಗಳನ್ನು ಪಾಲಿಸಿದರೆ ಮಾತ್ರ ಅವುಗಳ ಪೂರ್ಣ ಫಲ ದೊರೆಯುವುದು.ದೇವರ ಪ್ರತಿಮೆ ಇರುವ ಉಂಗುರವನ್ನು ಧರಿಸುವ ಮುನ್ನ ಪೂಜೆಯನ್ನು ಮಾಡಿಸಬೇಕಾಗುತ್ತದೆ.

ಹೀಗೆ ಮಾಡಿದರೇನೆ ಆ ಉಂಗುರದ ಪ್ರತಿಮೆಗೆ ಶಕ್ತಿ ಬರುತ್ತದೆ.ಹೀಗೆ ಮಾಡುವುದರಿಂದ ಸಾಕ್ಷಾತ್ ದೇವರು ನಮ್ಮ ಜೊತೆಯಲ್ಲಿ ಸದಾಕಾಲ ಇರುತ್ತಾರೆ ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ.

ಆದರೆ ಉಂಗುರವನ್ನು ಧರಿಸಿದ ನಂತರ ಪಾಲಿಸಬೇಕಾದ ನಿಯಮಗಳು ತುಂಬಾ ಇವೆ.

ನಾವು ಧರಿಸುವ ದೇವರ ಉಂಗುರವು ಯಾವಾಗಲೂ ದೇವರ ಶಿರಸ್ಸು ಮತ್ತು ಮಣಿಕಟ್ಟಿನ ಕಡೆ ಇರಬೇಕು.ಕಾಲು ಬೆರಳಿನ ಉಗುರುಗಳನ್ನು ನೋಡುತ್ತಾ ಇರುವ ಹಾಗೆ ನೋಡುತ್ತಿರಬೇಕು.

 

 

ಏಕೆಂದರೆ ನಮ್ಮ ದೇಹದಲ್ಲಿರುವ ಕೈ ಬೆರಳುಗಳು ಭೂಮಿಯ ಕಡೆ ನೋಡುತ್ತಾ ಇರುತ್ತವೆ.ಏನಾದರೂ ಮುಖ್ಯವಾದ ಕೆಲಸ ಮಾಡುವಾಗ ನಾವು ಮೊದಲಿಗೆ ಕೈಯನ್ನು ಮುಂದೆ ಮಾಡಿ ಜೋಡಿಸಿ ನಮಸ್ಕಾರ ಮಾಡಬೇಕು.

ಹೀಗೆ ಮಾಡುವುದರಿಂದ ಆಗ ಭಗವಂತನ ಕಾಲಿಗೆ ನಮಸ್ಕರಿಸಿದವರಾಗುತ್ತೇವೆ.ದೇವರ ಅನುಗ್ರಹ ವೇಗವಾಗಿ ಸಿಗುತ್ತದೆ ಎಂಬ ವಿಶ್ವಾಸ ನಮ್ಮಲ್ಲಿ ಮೂಡುತ್ತದೆ.

 

 

ಸ್ತ್ರೀಯರು ಋತು ಕ್ರಮ ಬರುವ ಮುಂಚೆಯೇ ದೇವರ ಪ್ರತಿಮೆ ಇರುವ ಉಂಗುರವನ್ನು ಬಿಚ್ಚಿಡಬೇಕು.ಆ ಸಮಯದಲ್ಲಿ

ಊಟ ಮಾಡುವಾಗ ನಮ್ಮ ಎಂಜಲು ಆ ಉಂಗುರಕ್ಕೆ ತಗಲದಂತೆ ಎಚ್ಚರ ವಹಿಸಬೇಕು.

 

 

ಉಂಗುರವನ್ನು ಧರಿಸಿ ಮಾಂಸಹಾರವನ್ನು ಸೇವಿಸಬಾರದು.ಮದ್ಯಪಾನ ಮತ್ತು ಧೂಮಪಾನವನ್ನು ಉಂಗುರವನ್ನು ಧರಿಸಿ ಸೇವಿಸಬಾರದು.

ಹೀಗೆ ಈ ನಿಯಮಗಳನ್ನು ಪಾಲಿಸಲು ಸಾಧ್ಯವಾದರೆ ಮಾತ್ರ ಇದನ್ನು ಧರಿಸಬೇಕು.ಇಲ್ಲವೆಂದರೆ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚಾಗಿ ಆಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top