fbpx
ಸಮಾಚಾರ

ದೀಪಾವಳಿಗೆ ಮುನ್ನವೇ ದೇಶದ ಜನರಿಗೆ ದೀಪಾವಳಿ ಗಿಫ್ಟ್ ನೀಡಿದ ಪ್ರಧಾನಿ: ಕೆಲವು ವಸ್ತುಗಳ ಮೇಲಿನ GST ದರ ಇಳಿಕೆ..

ದೀಪಾವಳಿಗೆ ಮುನ್ನವೇ ದೇಶದ ಜನರಿಗೆ ದೀಪಾವಳಿ ಗಿಫ್ಟ್ ನೀಡಿದ ಪ್ರಧಾನಿ: ಕೆಲವು ವಸ್ತುಗಳ ಮೇಲಿನ GST ದರ ಇಳಿಕೆ..

 

 

ಜಿಎಸ್‌ಟಿ ತೆರಿಗೆ ನೀತಿಯಿಂದ ಬೇಸತ್ತು ಹೋಗಿರುವ ದೇಶದ ಜನರಿಗೆ ಈ ಭಾರಿ ದೀಪಾವಳಿಗೆ ಮುನ್ನವೇ ಸಂಭ್ರಮಪಡುವಂತಾಗಿದೆ. ಹೌದು,, ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಸರಕು ಮತ್ತು ಸೇವಾ ತೆರಿಗೆಗಳಲ್ಲಿ (ಜಿಎಸ್‌ಟಿ) ಮಹತ್ವದ ಬದಲಾವಣೆ ಹಾಗೂ 27 ವಸ್ತುಗಳ ಮೇಲಿನ ತೆರಿಗೆಯ ದರವನ್ನು ಇಳಿಸಲಾಗಿದೆ. ಮುಂದೆ ಓದಿ…

 

 

ಜಿಎಸ್‌ಟಿ ಮಂಡಳಿ ಸಭೆಯು ಕೆಲವು ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ದರ ಇಳಿಸಲು ನಿರ್ಧಾರ ತೆಗೆದುಕೊಂಡಿರುವುದರಿಂದ ಈ ಬಾರಿ ದೇಶದ ಜನರಿಗೆ ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿಯೇ ದೀಪಾವಳಿ ಸಂಭ್ರಮ ಬಂದಿದೆ’ ಎಂದು ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

 

 

ನೆಲಕ್ಕೆ ಹಾಸಲು ಬಳಸುವ ಕಲ್ಲುಗಳು, ಲೇಖನ ಸಾಮಗ್ರಿ, ಚಪಾತಿ ಮತ್ತು ಕಕ್ರಾ, ಡೀಸೆಲ್‌ ಎಂಜಿನ್‌ ಬಿಡಿಭಾಗಗಳು ಮತ್ತು ಪಂಪ್‌ಗಳು, ಬ್ರಾಂಡ್‌ರಹಿತ ಕುರುಕಲು ತಿಂಡಿ,ಬ್ರಾಂಡ್‌ ರಹಿತ ಉಪ್ಪು, ಬ್ರಾಂಡ್‌ ರಹಿತ ಆಯುರ್ವೇದಿಕ್‌ ಔಷಧಗಳು, ಕೈಮಗ್ಗದ ಬಟ್ಟೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಉತ್ಪಾದನೆಯಾಗುವ ಆಹಾರದ ಪೊಟ್ಟಣಗಳು, ರಬ್ಬರ್‌ ವಸ್ತುಗಳು, ಕಾಗದ ಮತ್ತು ಪ್ಲಾಸ್ಟಿಕ್‌ ತ್ಯಾಜ್ಯ ವಸ್ತುಗಳ ತೆರಿಗೆ ದರವನ್ನು ಶೇಕಡಾ 12 ರಿಂದ ಶೇ 5ಕ್ಕೆ ಇಳಿಸಲಾಗಿದೆ.

 

 

ರತ್ನಗಳು ಮತ್ತು ಆಭರಣಗಳ ಮೇಲಿನ ಜಿಎಸ್‌ಟಿ ಅಧಿಸೂಚನೆಯನ್ನು ಸರ್ಕಾರ ತೆಗೆದುಹಾಕಿದೆ. ವ್ಯಾಪಾರಿಗಳು, ತಯಾರಕರು ಮತ್ತು ರೆಸ್ಟೋರೆಂಟ್ ತೆರಿಗೆಯನ್ನು ಶೇ 18ರಿಂದ ಶೇ 12ಕ್ಕೆ ಇಳಿಕೆ ಮಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top