fbpx
ದೇವರು

ಕಾರ್ತಿಕ ಮಾಸದಲ್ಲಿ ಆ ಒಂದು ದೀಪ ಬೆಳಗಿಸಿದರೆ ಕಷ್ಟಗಳು ಪರಿಹಾರವಾಗುತ್ತವೆ ಅಷ್ಟೇ ಅಲ್ಲ , ಈ ಪವಿತ್ರ ಮಾಸದಲ್ಲಿ ಮಾಡಬೇಕಾದ ವ್ರತ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ

ಕಾರ್ತಿಕ ಮಾಸದಲ್ಲಿ ಆ ಒಂದು ದೀಪ ಬೆಳಗಿಸಿದರೆ ಕಷ್ಟಗಳು ಪರಿಹಾರವಾಗುತ್ತವೆ ಅಷ್ಟೇ ಅಲ್ಲ , ಈ ಪವಿತ್ರ ಮಾಸದಲ್ಲಿ ಮಾಡಬೇಕಾದ ವ್ರತ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ

 

 

ಶರದ್ ಪೌರ್ಣಮಿಯ ದಿನದಂದು ಪ್ರಾರಂಭವಾಗುವ ಕಾರ್ತಿಕ ಮಾಸದಲ್ಲಿ ಸ್ವಯಂ  ಲಕ್ಷ್ಮೀ ಮತ್ತು ವಿಷ್ಣು ಧರೆಗೆ ಇಳಿದು ಬಂದು  ಜೊತೆಯಾಗಿ ವಿಹರಿಸುವರು.ಯಾರು ಪೂಜೆ ಮತ್ತು ಪ್ರಾರ್ಥನೆ ಮಾಡುತ್ತಿರುವರೋ ,ಸದಾ ಲಕ್ಷ್ಮೀ ಮತ್ತು ವಿಷ್ಣು ಭಕ್ತಿಯಲ್ಲಿ ಮುಳುಗಿರುವರೋ ಎಂದು ನೋಡುತ್ತಾರೆ.

ಕಾರ್ತಿಕ ಮಾಸದಲ್ಲಿ ಕಾರ್ತಿಕ ಮಾಸ ಪ್ರಾರಂಭವಾದ ದಿನದಂದೇ ನದಿಯಲ್ಲಿ ಮುಳುಗಿ ಕಾರ್ತಿಕ ಸ್ನಾನ ಮಾಡಬೇಕು.ಸ್ನಾನದ ನಂತರ ಧಾನ,ಸ್ನಾನ,ತುಳಸಿ ವಿವಾಹ,ಪೂಜೆ,ವ್ರತವನ್ನು ಮಾಡುತ್ತಾರೋ ಅವರ ಪಾಪಗಳು ಕಳೆದು ಪುಣ್ಯ ದೊರೆಯುವುದು.

 

 

ಕಾರ್ತಿಕ ಮಾಸವು ಅತ್ಯಂತ ಪವಿತ್ರವಾದುದು ಮತ್ತು ಅಷ್ಟೇ  ಶ್ರೇಷ್ಠವಾದದ್ದು.ಸ್ಕಂದ ಪುರಾಣ,ನಾರದ ಪುರಾಣ, ಪದ್ಮ ಪುರಾಣ ಹೀಗೆ ಎಲ್ಲಾ ಪ್ರಾಚೀನ ಗ್ರಂಥಗಳಲ್ಲಿಯೂ ಸಹ ಉಲ್ಲೇಖವಾಗಿದೆ.

ಕಾರ್ತಿಕ ಮಾಸದಲ್ಲಿ ಮಾಡಿದ ಒಂದು  ಬಾರಿಯ ಸ್ನಾನವು  1000 ಬಾರಿ ಗಂಗಾ ಸ್ನಾನವನ್ನು ಮಾಡಿದಷ್ಟೇ  ಪುಣ್ಯ ಲಭಿಸುವುದು.ಕಾರ್ತಿಕ ಸ್ನಾನ ಮಾಡಿದ ನಂತರ ಗಾಯಿತ್ರಿ ಮಂತ್ರವನ್ನು ಜಪಿಸಬೇಕು.

ವಿಷ್ಣುವಿನ ಪೂಜೆ,ಪ್ರಾರ್ಥನೆಯನ್ನು  ಮಾಡಿ ಭಗವಂತನಾದ ಶ್ರೀ ವಿಷ್ಣುವಿಗೆ  ಹೂವುಗಳನ್ನು ಅರ್ಪಿಸುವುದರಿಂದ ಅಶ್ವಮೇಧ ಯಾಗ ಮಾಡಿದಷ್ಟೇ ಪುಣ್ಯವು ಲಭಿಸುವುದು.

 

 

ಕಾರ್ತಿಕ ಸ್ನಾನ ಮಾಡಿದ ನಂತರ ಮೊದಲು ಮಾಡಬೇಕಾಗಿರುವುದು  ರಾಧ ಕೃಷ್ಣ ಪೂಜೆ,ನಂತರ ತುಳಸಿ ಮಾತೆಯ  ಪೂಜೆ,ಅರಳಿ ಮರಕ್ಕೆ ಶುದ್ಧ  ಜಲವನ್ನು ಸಮರ್ಪಿಸುವುದು ,ಹಾಗೆ ಮಾವಿನ ಮರದ ಪೂಜೆ ಮತ್ತು ಎಲ್ಲ ದೇವರಿಗೂ ಸಹ ಪ್ರದಕ್ಷಿಣೆಯನ್ನು ಹಾಕುವುದು. ಸಂಜೆಯ ಸಮಯದಲ್ಲಿ   ಭಗವಂತನಾದ ಶ್ರೀ ವಿಷ್ಣುವಿಗೆ ಪೂಜೆ ಸಲ್ಲಿಸಬೇಕು,ತುಳಸೀ ಮಾತೆಯ ಪೂಜೆ ಒಂದು ತಿಂಗಳ ಕಾಲ ಮಾಡಬೇಕು.ಇದು ಅತ್ಯಂತ  ಮಹತ್ವಪೂರ್ಣವಾದ ಸಮಯವಾಗಿದೆ.

ಪುಷ್ಕರ್ಮಿಯಲ್ಲಿ ಮತ್ತು ವಾರಣಾಸಿ ಯಂತಹ ಅಷ್ಟೇ ಪವಿತ್ರವಾದ ಇನ್ನೂ ಅನೇಕ ತೀರ್ಥ ಕ್ಷೇತ್ರಗಳಲ್ಲಿ ದಾನ ಧರ್ಮವನ್ನು ಕಾರ್ತಿಕ ಮಾಸದಲ್ಲಿ ಮಾಡಿದರೆ ಬಹಳ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ.

 

 

ಪೂರ್ವದಿಕ್ಕಿಗೆ ಮುಖಮಾಡಿ ಒಂದು ತುಪ್ಪದ ದೀಪವನ್ನು ಹಚ್ಚಿ ಅಥವಾ ಎಣ್ಣೆಯಿಂದಲೇ  ದೀಪವನ್ನು   ಹಚ್ಚಬೇಕು. ಈಶಾನ್ಯ ದಿಕ್ಕಿನಲ್ಲಿ  ಅಂದರೆ ಪೂರ್ವ ಉತ್ತರ ದಿಕ್ಕಿನಲ್ಲಿ ದೀಪವನ್ನು ಹಚ್ಚಿ ಕಾರ್ತಿಕ ಮಾಸದಲ್ಲಿ ಬೆಳಗಿಸಬೇಕು.ಕಾರ್ತಿಕ ಮಾಸದಲ್ಲಿ ತುಳಸಿಯ ಪೂಜೆಗೆ ವಿಶೇಷ ಮಹತ್ವ ಇದೆ.ತುಳಸಿ ಗಿಡದ  ಬಳಿಯಲ್ಲಿ ಈ ದಿಕ್ಕಿನಲ್ಲಿ ದೀಪ ಹಚ್ಚಿದರೆ ಇನ್ನೂ ಶ್ರೇಷ್ಠ.

 

 

ಕಾರ್ತಿಕ ಮಾಸದಲ್ಲಿ ತಾರಾ ಭೋಜನ ಅಥವಾ  ನಕ್ಷತ್ರ  ಭೋಜನ.

ತಾರಾ ಭೋಜನ ಅಂದರೆ ಏನು ?

ಕಾರ್ತಿಕ ಮಾಸದಲ್ಲಿ ಉಪವಾಸ ವ್ರತವನ್ನು ಆಚರಿಸಿ ಪಾಲಿಸಬೇಕು. ಬೆಳಗ್ಗೆಯಿಂದ ಉಪವಾಸವಿದ್ದು ರಾತ್ರಿಯ ಸಮಯದಲ್ಲಿ ನಕ್ಷತ್ರಗಳು ಆಕಾಶದಲ್ಲಿ ಗೋಚರಿಸಿದಾಗ ನಕ್ಷತ್ರಗಳಿಗೆ ಆರ್ಘ್ಯವನ್ನು ಸಮರ್ಪಿಸಿ ನಂತರ ನೀವು ಭೋಜನ ಮಾಡಬೇಕು.ಇದಕ್ಕೆ ತಾರಾ ಭೋಜನ ಎಂದು ಹೆಸರು.

 

 

ಧನ ಸಮೃದ್ಧಿಯು ಯಥೇಚ್ಛವಾಗಿ ನಿಮಗೆ ಬೇಕು ಎಂದರೆ ಈ ಕೆಳಗೆ ಹೇಳಿರುವ ಕೆಲಸಗಳನ್ನು ಮಾಡಿ.

  1. ನದಿಯ ಸಮೀಪದಲ್ಲಿ ಕಾರ್ತಿಕ ಸ್ನಾನ ಮಾಡಿದ ನಂತರ ದೀಪ ದಾನ ಮಾಡಬೇಕು.
  2. ತುಳಸಿ ಪೂಜೆಯನ್ನು ಪ್ರತಿದಿನವೂ ತಪ್ಪದೇ ಬೆಳಗ್ಗೆ ಮತ್ತು ಸಂಜೆ ಮಾಡಬೇಕು.
  3. ಕಾರ್ತಿಕ ಮಾಸದ ವ್ರತ ಮಾಡುವವರು ನೆಲದ ಮೇಲೆಯೇ ಒಂದು ತಿಂಗಳು ಪೂರ್ತಿ ಮಲಗಬೇಕು.
  4. ಕಾರ್ತಿಕ ಮಾಸದಲ್ಲಿ ಒಂದು ಹೊತ್ತಿನ ಊಟ ಮಾಡಬೇಕು.ಅದು ರಾತ್ರಿಯ ಸಮಯದಲ್ಲಿ ಮಾತ್ರ ಅದಕ್ಕೆ ತಾರ  ಭೋಜನ ಎಂದು ಹೆಸರು.
  5. ಕಾರ್ತಿಕ ಮಾಸದಲ್ಲಿ ಮನಸ್ಸನ್ನು ಶುದ್ದವಾಗಿ ಇಟ್ಟುಕೊಳ್ಳಬೇಕು ಯಾರಿಗೂ ಕೆಟ್ಟದ್ದನ್ನು ಮಾಡುವ ಉದ್ದೇಶವಾಗಲಿ ಯೋಚನೆಯಾಗಲಿ ಇರಬಾರದು ಒಳ್ಳೆಯದನ್ನೇ ಯೋಚಿಸಬೇಕು.
  6. ಶ್ರೀ ಹರಿ ವಿಷ್ಣುವಿಗೆ ಮತ್ತು ಮಾತೇ ಮಹಾ ಲಕ್ಷ್ಮೀ ದೇವಿಗೆ ತಪ್ಪದೇ ಬೆಳಗ್ಗೆ ಮತ್ತು ಸಂಜೆ ಪೂಜೆ ಮಾಡಬೇಕು.
  7. ಕಾರ್ತಿಕ ಮಾಸದಲ್ಲಿ ಭಗವಾನ್ ಧನ್ವಂತರಿಯನ್ನು ಅರಾಧಿಸಿ ಪೂಜಿಸಬೇಕು.
  8. ನರಕ ಚತುರ್ದಶಿಯ ದಿನ ಮಾತ್ರವೇ ಇಡೀ ಶರೀರಕ್ಕೆ ಎಣ್ಣೆ ಲೇಪಿಸಿಕೊಂಡು ಸ್ನಾನ ಮಾಡಬೇಕು.
  9. ಕಾರ್ತಿಕ ಮಾಸದಲ್ಲಿ ಚಂದ್ರ ಕೃತಿಕಾ ನಕ್ಷತ್ರದಲ್ಲಿ ಸೂರ್ಯ ವಿಶಾಖ ನಕ್ಷತ್ರದಲ್ಲಿ ಇರುವ ಸಮಯದಲ್ಲಿ ಪದ್ಮ ಯೋಗವು ಉಂಟಾಗುವುದು.ಆ ದಿನ   ನದಿಯಲ್ಲಿ ಸ್ನಾನ ಮಾಡಿದರೆ  ಒಳ್ಳೆಯದು, ಪುಣ್ಯ ಲಭಿಸುವುದು.
  10. ಕಾರ್ತಿಕ ಮಾಸದಲ್ಲಿ ಮಾಡುವ ದಾನ ಮತ್ತು ಧರ್ಮಕ್ಕೆ ಬಹಳ ಮಹತ್ವ ಇದೆ.

ಎಲ್ಲರೂ ಈ ನಿಯಮಗಳನ್ನು ಪಾಲಿಸಿ ಕಾರ್ತಿಕ ಮಾಸದ ಲಾಭಗಳನ್ನು ಪಡೆಯಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top