fbpx
ಮನೋರಂಜನೆ

‘ಬಿಗ್ ಬಾಸ್’ ಷೋ ಕಲರ್ಸ್ ಕನ್ನಡ ಚಾನೆಲ್ ನಿಂದ ಕಲರ್ಸ್ ಸೂಪರ್ ಚಾನೆಲ್ ಗೆ ಶಿಫ್ಟ್ ಆಗಲು ಇದೇ ನಿಜವಾದ ಕಾರಣ…!

‘ಬಿಗ್ ಬಾಸ್’ ಷೋ ಕಲರ್ಸ್ ಕನ್ನಡ ಚಾನೆಲ್ ನಿಂದ ಕಲರ್ಸ್ ಸೂಪರ್ ಚಾನೆಲ್ ಗೆ ಶಿಫ್ಟ್ ಆಗಲು ಇದೇ ನಿಜವಾದ ಕಾರಣ…!

 

 

 

 

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಆರಂಭಕ್ಕೆ ಸಿದ್ಧತೆಗಳು ನಡೆದಿವೆ. ಅಕ್ಟೋಬರ್ 15 ರಿಂದ ಶೋ ಆರಂಭವಾಗಲಿದ್ದು, 100 ದಿನಗಳ ಕಾಲ ನಡೆಯಲಿದೆ. ‘ಬಿಗ್ ಬಾಸ್’ ಮನೆಯೊಳಗೆ ಎಂದಿನಂತೆ ಸೆಲೆಬ್ರಿಟಿಗಳು ಎಂಟ್ರಿ ಪಡೆಯಲಿದ್ದಾರೆ. ವಿಶೇಷವಾಗಿ ಈ ಬಾರಿ ಜನ ಸಾಮಾನ್ಯರಿಗೂ ಅವಕಾಶ ನೀಡಲಾಗಿದೆ.

 

 

‘ಬಿಗ್ ಬಾಸ್’ ಹಿಂದಿನ 4 ಸೀಸನ್ ಯಶಸ್ವಿಯಾಗಿದ್ದು, 5 ನೇ ಸೀಸನ್ ಕುರಿತಾಗಿ ನಿರೀಕ್ಷೆ ಹೆಚ್ಚಾಗಿದೆ. ಹಿಂದಿನ ನಾಲ್ಕು ಸೀಸನ್ ಗಳಲ್ಲೂ ನಿರೂಪಕರಾಗಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಭಾರಿಯೂ ಎಂದಿನಂತೆ ಕಾರ್ಯಕ್ರಮದ ನಿರೂಪಣೆಯನ್ನ ಮಾಡಲಿದ್ದಾರೆ. ಆದರೆ ಕಳೆದ ಭಾರಿ ಪ್ರಸಾರವಾಗಿದ್ದ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಈ ಭಾರಿ ಪ್ರಸಾರವಾಗುತ್ತಿಲ್ಲ ಬದಲಾಗಿ ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.

 

 

ಅಷ್ಟಕ್ಕೂ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರಗೊಂಡು ಯಶಸ್ಸು ಗಳಿಸಿದ್ದ ಶೋವನ್ನು ಕಲರ್ಸ್ ಸೂಪರ್ ಚಾನೆಲ್ ಪ್ರಸಾರ ಮಾಡಲು ಕಾರಣವೇನು? ಈ ಪ್ರಶ್ನೆಗೆ ಬಿಗ್ ಬಾಸ್ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಏನ್ ಹೇಳ್ತಾರೆ ಗೊತ್ತಾ. ಗುಂಡ್ಕಲ್ ಅವರು ಬಿಗ್ ಬಾಸ್ ಶೋವನ್ನು ಕಲರ್ಸ್ ಕನ್ನಡ ಚಾನೆಲ್ ನಿಂದ ಕಲರ್ಸ್ ಸೂಪರ್ ಚಾನೆಲ್ ಗೆ ಬದಲಾಯಿಸಲು ಎರಡು ಪ್ರಮುಖ ಕಾರಣವನ್ನು ಕೊಡುತ್ತಾರೆ.

 

 

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರತಿದಿನ 8 ಗಂಟೆಗೆ ಈಗಾಗಲೇ ‘ಅಗ್ನಿಸಾಕ್ಷಿ’ ಮತ್ತು 9 ಗಂಟೆಗೆ ‘ರಾಧಾರಮಣ’ ಧಾರಾವಾಹಿಗಳು ಬರ್ತಿವೆ ಈ ಧಾರಾವಾಹಿಗಳು ಉತ್ತಮವಾಗಿ ಬರುತ್ತಿರುವುದರಿಂದ ಒಂದು ವೇಳೆ ಆ ಸಮಯಕ್ಕೆ ಬಿಗ್ ಬಾಸ್ ಪ್ರಸಾರ ಮಾಡಿದರೆ ಧಾರಾವಾಹಿಗಳಿಗೆ ತೊಂದರೆಯಾಗುತ್ತದೆ, ಹಾಗಂತ 10 ಗಂಟೆಗೆ ‘ಬಿಗ್ ಬಾಸ್’ ಕಾರ್ಯಕ್ರಮವನ್ನು ಪ್ರಸಾರ ಮಾಡಿದರೆ ತುಂಬಾ ಲೇಟ್ ಆಗುತ್ತದೆ ಅದಕ್ಕೆ ಕಾರ್ಯಕ್ರಮವನ್ನು 8 ಗಂಟೆಗೆ ಪ್ರಸಾರ ಮಾಡಲು ಸೂಪರ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಗುತ್ತದೆ.

 

 

ಕಲರ್ಸ್ ಕನ್ನಡ ಚಾನೆಲ್ ಗೆ ಹೋಲಿಕೆ ಮಾಡಿದರೆ ಅದರ ಅಂಗ ಭಾಗವಾದ ಕಲರ್ಸ್ ಸೂಪರ್ ಚಾನೆಲ್ ಅಷ್ಟೇನು ಜನಪ್ರಿಯವಾಗಿಲ್ಲ ದೊಡ್ಡ ವೀಕ್ಷಕರ ಬಳಗವನ್ನು ಹೊಂದಿರುವ ಬಿಗ್ಗ್ ಬಾಸ್ ಕಾರ್ಯಕ್ರಮವನ್ನು ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರ ಮಾಡುವುದರಿಂದ ಕಲರ್ಸ್ ಸೂಪರ್ ಚಾನೆಲ್ ಕೂಡ ತನ್ನ ಟಿಆರ್’ಪಿಯಲ್ಲಿ ಹೆಚ್ಚಳ ಕಂಡು ಜನಪ್ರಿಯವಾಗಬಹುದು ಎಂಬ ಕಾರಣಕ್ಕೆ ಕಲರ್ಸ್ ಸೂಪರ್ ಚಾನೆಲ್ ಬಿಗ್ ಬಾಸ್ ಪ್ರಸಾರವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top