fbpx
ಜೀವನ ಕ್ರಮ

ಚಾಣಕ್ಯನ ಈ 17 ಸಿಂಪಲ್ ಸೂತ್ರ ಫಾಲೋ ಮಾಡಿದ್ರೆ ಜೀವನದಲ್ಲಿ ಮಕ್ಳು , ಜನರನ್ನ ಹೇಗೆ ಹ್ಯಾಂಡಲ್ ಮಾಡೋದು ಅಂತಾ ಕಲ್ತ್ಕೋತೀರಾ

ನಿಮ್ಮ ನಿಜವಾದ ಶತ್ರು ಅಥವಾ ಸ್ನೇಹಿತ ಯಾರು ಎಂದು ಚಾಣಕ್ಯನ  ನೀತಿಗಳಲ್ಲಿ ಹೀಗೆ ಹೇಳಲಾಗಿದೆ.

 

 

ಕೆಲವು ಜನರಿಗೆ ಸಹಾಯ ಮಾಡಿದ್ರೆ ನಿಮ್ಮ ಮರ್ಯಾದೆ ನೀವೇ ಕಳೆದು ಕೊಳ್ಳುತ್ತೀರಾ ? ಅನ್ನತೆ ಚಾಣಕ್ಯನ ನೀತಿ.

ನೀವು ಹುಟ್ಟುವಾಗ ಏನು  ಇರಲಿಲ್ಲ,ಆದ್ರೆ ಸಾಯುವಾಗ ನಿಮ್ಮ ಹೆಸರಿನೊಂದಿಗೆ ಸಾಯುತ್ತೀರಿ. ನಿಮ್ಮ ಹೆಸರು ಕೇವಲ ಅಕ್ಷರಗಳಿಂದ ಮಾತ್ರ ಆಗಿದ್ದರೆ ಸಾಲದು ಅದರಲ್ಲಿ ಒಂದು ಇತಿಹಾಸ ಇರಬೇಕು.

 

 

ಬೇರೆಯವರ ತಪ್ಪಸ್ಸಿನಿಂದ ಕಲಿತುಕೊಳ್ಳಿ,ಎಲ್ಲ ತಪ್ಪುಗಳನ್ನು ನೀವೇ ಮಾಡುವಷ್ಟು ಜೀವನದ ಆಯಸ್ಸು ನಿಮಗಿಲ್ಲ.

ಸತ್ಯವಿದ್ದರೂ ನಂಬಲಾರದುದನ್ನು ಹೇಳಲೇಬಾರದು.

ಮಕ್ಕಳನ್ನು 5 ವರ್ಷದವರೆಗೆ ಮುದ್ದಿಸಬೇಕು,ಮುಂದಿನ ಹತ್ತು ವರ್ಷಗಳವರೆಗೆ ದಂಡಿಸಬೇಕು,ಹದಿನಾರನೇ ವಯಸ್ಸಿಗೆ ಬಂದ ನಂತರ ಮಿತ್ರರಂತೆ ಕಾಣಬೇಕು.

ಆತ್ಮವಿಶ್ವಾಸ ಒಂದು ಇದ್ದರೆ ಎಂತಹ ಪರಿಸ್ಥಿತಿಯಲ್ಲೂ ತಲೆ ಎತ್ತಿ ನಿಲ್ಲಬಹುದು.ಜೀವನಕ್ಕೆ ಆತ್ಮವಿಶ್ವಾಸ ಮುಖ್ಯ.

ಹಾವಿಗೆ ಹಾಲು ಕುಡಿಸುವುದು ವಿಷವನ್ನು ಬೆಳೆಸುವುದೇ ಹೊರತು ಅಮೃತವಾಗುವುದಿಲ್ಲ.

 

 

ಒಂದೆಡೆ ಸಂಧಾನ ನೆಡೆಸುತ್ತಲಾದರೂ ಶತ್ರುಗಳು ಪ್ರಯತ್ನವನ್ನು ನಿರೀಕ್ಷಿಸುತ್ತೀರಬೇಕು.

ದುಡ್ಡಿದವನು ಕುರೂಪಿಯಾಗಿದ್ದರೂ ಸುರೂಪನೆನಿಸುವನು.

ಮೊದಲು  ಕೊಟ್ಟು ತೀರಿಸಬೇಕಾದುದನ್ನು ಅತೀ ಕಷ್ಟದಿಂದ ಕೊಡುವರು.

ಶತ್ರುವನ್ನು ಸಭೆಯಲ್ಲಿ ನಿಂದಿಸಬಾರದು.

ಒಂದು ದೋಷವು ಅನೇಕ ಗುಣಗಳನ್ನು ನುಂಗುವುದು.

 

 

ಅತಿ ಪ್ರಾಮಾಣಿಕರಾಗದಿರಿ. ನೇರವಾದ ಮರಗಳು ಮೊದಲು ನೆಲಕ್ಕುರುಳ್ಳತ್ತವೆ.ಆ ಬಳಿಕ ಡೊಂಕು ಮರದ ಸರದಿ.

ಒಂದು ಹಾವು ವಿಷಯುಕ್ತ ಇಲ್ಲದಿದ್ದರೂ ವಿಷಯುಕ್ತದಂತೆ ಬುಸುಗುಡಬೇಕು.

ಅತ್ಯಂತ ದೊಡ್ಡ ಗುರುಮಂತ್ರ ನಿಮ್ಮ ರಹಸ್ಯಗಳನ್ನು ಯಾರಿಗೂ ಹೇಳಬೇಡಿ,ಅವೇ ನಿಮಗೆ ಮುಳುವಾಗುತ್ತವೆ.

ಪ್ರೀತಿ ಸ್ನೇಹದ ಹಿಂದೆ ಒಂದು ಸ್ವಾರ್ಥ ಇದ್ದೇ ಇರುತ್ತದೆ.ಸ್ವಾರ್ಥರಹಿತ ಸ್ನೇಹವೇ ಇಲ್ಲ ಇದೊಂದು ಕಹಿ ಸತ್ಯ.

 

 

ನಿಮ್ಮ ಅಂತಸ್ತಿಗೆ ಮೇಲಿರುವ ಅಥವಾ ಕೆಳಗಿರುವ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಬೇಡಿ. ಆ ಸ್ನೇಹ ಎಂದಿಗೂ ಸಂತೋಷ ನೀಡುವುದಿಲ್ಲ.

ದೇವರು ವಿಗ್ರಹದೊಳಗಿಲ್ಲ, ನಿಮ್ಮ ಭಾವನೆಗಳೇ ನಿಮ್ಮ ದೇವರು,ನಿಮ್ಮ ಆತ್ಮವೇ ದೇವಸ್ಥಾನ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top