fbpx
ಮನೋರಂಜನೆ

ದರ್ಶನ್ ತಮ್ಮ ಅಭಿಮಾನಿಗಳಿಗೆ ಬರೆದ ಅಭಿಮಾನದ ‘ಆ’ ಪತ್ರದಲ್ಲೇನಿದೆ..?

ದರ್ಶನ್ ತಮ್ಮ ಅಭಿಮಾನಿಗಳಿಗೆ ಬರೆದ ಅಭಿಮಾನದ ‘ಆ’ ಪತ್ರದಲ್ಲೇನಿದೆ..?

 

 

ಸದ್ಯ ತಾರಕ್ ಚಿತ್ರದ ಯಶಸ್ಸಿನಲ್ಲಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಒಂದು ಸಂದೇಶವನ್ನು ರವಾನಿಸಿದ್ದಾರೆ. ಹೌದು ತಮ್ಮ ಅಭಿಮಾನಿಬಳಗದಿಂದ ಡಿ ಬಾಸ್,ದಾಸ,ದಚ್ಚು ಎಂದು ಕರೆಸಿಕೊಳ್ಳುವ ದರ್ಶನ್ ತಮ್ಮ ಅಭಿಮಾನಿಗಳಿಗೆ ಒಂದು ಪತ್ರವನ್ನು ಬರೆದಿದ್ದಾರೆ.. ಇದು ಯಾವ ಪತ್ರ ಅಂತೀರಾ.. ಮುಂದೆ ಓದಿ.

 

 

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಟ್ವಿಟರ್ ಮತ್ತು ಫೇಸ್ ಬುಕ್ ಗಳಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದು ತಾರಕ್ ಚಿತ್ರವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ದನ್ಯವಾಧಗಳನ್ನ ತಿಳಿಸಿದ್ದಾರೆ. ಅಲ್ಲದೆ ತಮ್ಮ 51,52,53, ಚಿತ್ರಗಳ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ. ದರ್ಶನ್ ತಮ್ಮ ಅಭಿಮಾನಿಗಳಿಗೆ ಬರೆದ ಪತ್ರವನ್ನು ಕೆಳಗೆ ಓದಿ

 

 

” ತಾರಕ್ ಚಿತ್ರವನ್ನು ಇಷ್ಟು ಪ್ರೀತಿಯಿಂದ ದೊಡ್ಡ ಮಟ್ಟದ ಯಶಸ್ಸು ನೀಡಿ ಒಪ್ಪಿಕೊಂಡಿರುವುದಕ್ಕೆ ಎಲ್ಲರಿಗೂ ನಮ್ಮ ತಂಡದಿಂದ ಕೃತಘ್ನತೆಗಳು. ನಿಮ್ಮ ಪ್ರೀತಿ-ಪ್ರೋತ್ಸಾಹ ನಮ್ಮಂಥ ಚಿಕ್ಕ ಕಲಾವಿದರ ಮೇಲೆ ಸದಾ ಇರಲಿ. ತಾರಕ್ ಆದಮೇಲೆ ನನ್ನ ೫೦ನೇ ಚಿತ್ರ ಕುರುಕ್ಷೇತ್ರ. ಅದರ ವಿವರ ಕೆಲ ತಿಂಗಳ ನಂತರ ನಾನೇ ತಿಳಿಸುವೆ. ನಾನು ಕಂಡ ಹಾಗೆ ಮೀಡಿಯಾದಲ್ಲಿ, ಸಾಮಾಜಿಕ ತಾಣಗಳಲ್ಲಿ ನನ್ನ ೫೧,೫೨,೫೩ನೇ ಚಿತ್ರಗಳ ಬಗ್ಗೆ ಅನವಶ್ಯಕ ಚರ್ಚೆಗಳು ಮತ್ತು ಗಾಳಿಸುದ್ದಿಗಳು ಸದ್ಯಕ್ಕೆ ಬೇಡ. ಸಮಯ ಬಂದಾಗ ಅದರ ಸಂಪೂರ್ಣ ವಿವರಗಳನ್ನು ಎಲ್ಲರಿಗೂ ತಿಳಿಸುತ್ತೇನೆ.ಈಗ ತಾರಕ್ ಚಿತ್ರಕ್ಕೆ ಬೆನ್ನುತಟ್ಟಿ ನೀವು ತೋರುತ್ತಿರುವ ಪ್ರೀತಿಗೆ ನಾವು ಸದಾ ಚಿರಋಣಿ. ಎಲ್ಲರೂ ತಾರಕ್ ನೋಡಿ ಹರಸಿ 😊
– ನಿಮ್ಮ ದಾಸ ದರ್ಶನ್ ” ಎಂದು ಪೋಸ್ಟ್ ಮಾಡಿರುವ ದರ್ಶನ್ ತಾರಕ್ ಚಿತ್ರಕ್ಕೆ ನೀವು ತೋರಿದ ಪ್ರೀತಿಗೆ ನಾವು ಸದಾ ಚಿರಋಣಿ. ನನ್ನ ಮುಂದಿನ ಚಿತ್ರಗಳ ಬಗ್ಗೆ ಸಮಯ ಬಂದಾಗ ನಾನೇ ತಿಳಿಸುವೆ ಯಾರು ಗಾಳಿ ಸುದ್ದಿ ಹಬ್ಬಿಸಬೇಡಿ ಎಂದು ಹೇಳಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top