fbpx
ದೇವರು

ದಿನಾ ಪೂಜೆ ಮಾಡ್ಬೇಕಿದ್ರೆ ಈ ಐದು ಸರಳ  ಮತ್ತು ಸುಲಭ ಉಪಾಯಗಳನ್ನ ಪಾಲಿಸಿದ್ರೆ ಮನೆಗೆ ಮನ್ನಸ್ಸಿಗೆ ತುಂಬಾ ಒಳ್ಳೇದು , ಹಾಗೇನೇ ಶೋಡೋಶೋಪಚಾರ ಮತ್ತೆ ಪಂಚೋಪಚಾರ ಅಂದ್ರೆ ಏನು ಅಂತ ತಿಳ್ಕೊಳ್ಳಿ

ನಾವು ಪ್ರತಿದಿನ ಪೂಜೆ ಮಾಡಬೇಕಾದರೆ ಈ ಐದು ಸರಳ  ಮತ್ತು ಸುಲಭ ಉಪಾಯಗಳನ್ನು ಪಾಲಿಸಿದರೆ ಉತ್ತಮ.

ನಾವು ಮನೆಗೆ ಬಂದ ಅತಿಥಿಗಳನ್ನು ಆದರದಿಂದ ಹೇಗೆ ಸ್ವಾಗತಿಸುತ್ತೇವೆಯೋ ಅದಕ್ಕಿಂತ ಉತ್ತಮವಾಗಿ ದೇವರನ್ನು ಆದರಿಸಿದರೆ ನಮ್ಮ ಮೇಲೆ ದೇವರು ಪ್ರಸನ್ನನಾಗಿ ಆಶೀರ್ವಾದವನ್ನು ಕರುಣಿಸುತ್ತಾನೆ.

 

 

ತ್ರಿಕಾಲ ದರ್ಶಿಗಳಾದ ನಮ್ಮ ಋಷಿಮುನಿಗಳು ಧರ್ಮ ಶಾಸ್ತ್ರದಲ್ಲಿ ಹೇಳಿದಂತೆ ದೇವರ ಪೂಜೆಯನ್ನು ಮಾಡಿದರೆ ಮಾತ್ರ ನಮಗೆ ಅವರ ಸಂಕಲ್ಪ ಶಕ್ತಿಯ  ಲಾಭವು ಸಿಗುತ್ತದೆ.

ದೇವರ ಪೂಜೆಯನ್ನು ಧರ್ಮ ಶಾಸ್ತ್ರದ ಅನುಸಾರ ಮಾಡುವಾಗ ಭಕ್ತಿ,ಶ್ರದ್ಧೆಯಿಂದ ಮಾಡುವುದು ಅಷ್ಟೇ ಮಹತ್ವವಾಗಿದೆ.

ಶೋಡೋಶೋಪಚಾರ ಎಂದರೇನು ?

 

 

ಹಿಂದೂ ಶಾಸ್ತ್ರದಲ್ಲಿ ದೇವರುಗಳನ್ನು ಆವಾಹನೆ ಮಾಡುವಾಗ ಅವರಿಗೆ ಕುಳಿತುಕೊಳ್ಳಲು ಅಸನವನ್ನು ಕೊಡುವುದು ಹೀಗೆ ಇನ್ನೂ 16  ವಿಧವಾಗಿ ಆಚರಿಸುವ ಉಪಚಾರವನ್ನೇ ಶೋಡೋಶೋಪಚಾರ ಎಂದು ಕರೆಯುತ್ತಾರೆ.

ಆದರೆ ಈ 16 ಉಪಚಾರಗಳನ್ನು ಮಾಡಲು ಎಲ್ಲರಿಗೂ ಸಾಧ್ಯವಾಗದೇ ಇರಬಹುದು.ಅಂತವರು ಈ ಪಂಚೋಪಚಾರವನ್ನು ಮಾಡಬಹುದು.

ಪಂಚೋಪಚಾರ ಎಂದರೇನು ?

 

 

ಪೂಜೆ ಮಾಡುವ ವಿಧಾನವನ್ನು ಉಪಚಾರವೆಂದು ಕರೆಯುತ್ತಾರೆ.ಮನೆಯಲ್ಲಿ ದೇವರಿಗೆ ಪೂಜೆ ಮಾಡುವ ವಿವಿಧ  ವಿಧಗಳನ್ನು  ಒಟ್ಟಾಗಿ ಸೇರಿಸಿ ಪಂಚೋಪಚಾರಗಳು ಎನ್ನುತ್ತಾರೆ.ಅಂದರೆ ವಿವಿಧ  ಐದು ವಿಧಾನಗಳಿಂದ ದೈವಾನುಗ್ರಹವನ್ನು ಪಡೆಯಬಹುದು.

1.ದೇವರ ಪ್ರತಿಮೆಗಳಿಗೆ ಅರಿಶಿನ,ಕುಂಕುಮ,ಚಂದನ ಇವುಗಳನ್ನು ಲೇಪಿಸುವುದು.

 

 

2.ದೇವರ ಹೆಸರಿನಿಂದ ಹೂವುಗಳನ್ನು ಬಳಸಿ  ಅರ್ಚನೆ ಮಾಡುವುದು.

3.ಮನೆಯನ್ನು ಸ್ವಚ್ಛ ಮಾಡಿ ಸಾಂಬ್ರಾಣಿ ,ಅಥವಾ ಊದು ಬತ್ತಿಯನ್ನು ಹಚ್ಚುವುದು.

 

4.ತುಪ್ಪದಿಂದ ದೀಪವನ್ನು ಹಚ್ಚುವುದು ದೀಪಾರಾಧನೆ ಮಾಡುವುದು.

5.ಹಾಗೆ ದೇವರಿಗೆ ನೈವೇದ್ಯವನ್ನು ಸಮರ್ಪಿಸುವುದು.

 

 

ಹೀಗೆ ಪ್ರತಿದಿನ ಪೂಜೆ ಮಾಡುವಾಗ  ಪಂಚೋಪಚಾರದಿಂದ ಪೂಜೆ ಮಾಡುವುದರಿಂದ ಆ ದೈವಾನುಗ್ರಹವನ್ನು ತ್ವರಿತವಾಗಿ ಪಡೆಯಬಹುದು ಎಂದು ನಮ್ಮ ಧರ್ಮಶಾಸ್ತ್ರ ಹೇಳುತ್ತಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top