fbpx
ಮನೋರಂಜನೆ

ಇದೆ ತಿಂಗಳು 27ನೇ ತಾರೀಕಿಗೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಡಬಲ್ ಧಮಾಕ..!

ಇದೆ ತಿಂಗಳು 27ನೇ ತಾರೀಕಿಗೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಡಬಲ್ ಧಮಾಕ..!

 

 

ಯಾವುದೇ ಚಿತ್ರರಂಗವಾಗಲಿ ಸ್ಪರ್ಧೆ ಎನ್ನುವುದು ಇರುತ್ತದೆ. ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುವುದು ಕಡಿಮೆಯೇ ಆದರೂ ಅಪರೂಪಕ್ಕೆ ಒಮ್ಮೆ ಬೇರೆ ಬೇರೆ ಸ್ಟಾರ್ ನಟರ ಚಿತ್ರಗಳು ಒಂದೇ ದಿನ ತೆರೆಕಾಣುತ್ತವೆ. ಆದರೆ ಇದೇ ತಿಂಗಳು 27 ಕ್ಕೆ ಸುದೀಪ್ ಅಭಿಮಾನಿಗಳಿಗೆ ಡಬ್ಬಲ್ ಗಿಫ್ಟ್ ಸಿಗಲಿವೆ. ಆ ಗಿಫ್ಟ್ ಏನು ಅಂತೀರಾ..ಮುಂದೆ ಓದಿ.

 

 

27 ನೇ ತಾರೀಕಿಗೆ ಸುದೀಪ್ ರವರಿಗೆ ಸಂಭಂದಿಸಿರುವ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಗೊಳ್ಳುತ್ತಿವೆ. ರಾಜು ಕನ್ನಡ ಮೀಡಿಯಂ ಮತ್ತು ಟೈಗರ್ ಗಲ್ಲಿ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ. ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ಸುದೀಪ್ ಅವರು ಅತಿಥಿ ಪಾತ್ರವನ್ನು ಮಾಡಿದ್ದಾರೆ ‘ಟೈಗರ್ ಗಲ್ಲಿ’ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತು ಪ್ರೊಮೋಷನ್ ವಿಡಿಯೋದಲ್ಲಿ ನಟಿಸಿದ್ದಾರೆ. ಹಾಗಾಗಿ ಸುದೀಪ್ ಅಭಿಮಾನಿಗಳಿಗೆ ಅಂದು ಡಬ್ಬಲ್ ಧಮಾಕ ವಾಗಲಿದೆ.

 

 

ನರೇಶ್ ಕುಮಾರ್ ನಿರ್ದೇಶನ ಮಾಡಿ KA.ಸುರೇಶ್ ನಿರ್ಮಾಣವಿರುವ ‘ರಾಜು ಕನ್ನಡ ಮೀಡಿಯಂ’ ಚಿತ್ರಕ್ಕೆ ‘ಫರ್ಸ್ಟ್ ರ್ಯಾನ್ಕ್ ರಾಜು’ ಖ್ಯಾತಿಯ ಗುರುನಂದನ್ ನಾಯಕ. ಆದರೆ ಕಿಚ್ಚ ಸುದೀಪ್ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದಾರೆ ಎನ್ನುವ ಕಾರಣದಿಂದ ವಿತರಕರ ವಲಯದಲ್ಲಿ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ತಿಂಗಳಾಂತ್ಯಕ್ಕೆ ತೆರೆಕಾಣುತ್ತಿದೆ.

 

 

ಇನ್ನು ಟೈಗರ್ ಗಲ್ಲಿ ಚಿತ್ರವನ್ನು ರವಿ ಶೀವತ್ಸ ನಿರ್ದೇಶನ ಮಾಡಿದ್ದು ನಟ ಸತೀಶ್ ನೀನಾಸಂ ನಾಯಕರಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಪ್ರಥಮಬಾರಿಗೆ ಮಾಸ್ ಗೆಟಪ್ ನಲ್ಲಿ ಸತೀಶ್ ಕಾಣಿಸಿಕೊಂಡಿದ್ದು ಈ ಚಿತ್ರಕ್ಕೆ ಕಿಚ್ಚ ಸುದೀಪ್ ನೇತೃತ್ವದಲ್ಲಿ ಪ್ರಮೋಷನ್ ನಡೆದಿದೆ.. ಹಾಗಾಗಿ ಸುದೀಪ್ ಅಭಿಮಾನಿಗಳು ಕೂಡ ಈ ಚಿತ್ರವನ್ನು ಕಾತುರರಾಗಿದ್ದಾರೆ. ಒಟ್ಟಿನಲ್ಲಿ ಎರಡು ಒಳ್ಳೆಯ ಕನ್ನಡ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿದ್ದು ಈ ಎರಡೂ ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ನೋಡಿ ಎರಡೂ ಚಿತ್ರಗಳನ್ನು ಗೆಲ್ಲಿಸಿ.

ಟೈಗರ್ ಗಲ್ಲಿ ಚಿತ್ರದ ಪ್ರಮೋಷನ್ ವಿಡಿಯೋವನ್ನು ಇಲ್ಲಿ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top