fbpx
ಮನೋರಂಜನೆ

“ರಾಣಾ” ಚಿತ್ರದಲ್ಲಿ ಪೊಲೀಸ್ ಆಗಿ ಮಿಂಚಲಿರುವ “ರಾಕಿಂಗ್ ಸ್ಟಾರ್”.. ಮುಂದೆ ಓದಿ.

“ರಾಣಾ” ಚಿತ್ರದಲ್ಲಿ ಪೊಲೀಸ್ ಆಗಿ ಮಿಂಚಲಿರುವ “ರಾಕಿಂಗ್ ಸ್ಟಾರ್”.. ಮುಂದೆ ಓದಿ.

 

 

ನೃತ್ಯ ಸಂಯೋಜಕ ಹಾಗೂ ನಿರ್ದೇಶಕ ಹರ್ಷ ಅವರು ಅಂಜನೀಪುತರ ಚಿತ್ರದ ನಂತರ ತಮ್ಮ ಮುಂದಿನ ಚಿತ್ರವನ್ನ ರಾಕಿಂಗ್ ಸ್ಟಾರ್ ಜೊತೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ರಾಣಾ’ ಎಂದು ಟೈಟಲ್ ಇಡಲಾಗಿದೆ ಎಂಬ ಸಂಗತಿ ಈಗಾಗಲೇ ಎಲ್ಲರಿಗೂ ಗೊತ್ತು.. ರಾಣಾ ಚಿತ್ರದಿಂದ ಎಕ್ಸ್’ಕ್ಲೂಸಿವ್ ಸುದ್ದಿಯೊಂದು ಹೊರಬಂದಿದ್ದು ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದೆ.

 

 

ಸದ್ಯ ಬಹುನಿರೀಕ್ಷಿತ ‘ಕೆಜಿಎಫ್’ ಚಿತ್ರದಲ್ಲಿ ಬ್ಯುಸಿ ಯಾಗಿರುವ ಯಶ್ ಕೆಜಿಎಫ್ ಚಿತ್ರದ ನಂತರ ಹರ್ಷ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರಾಣಾ’ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ…ಈ ಮೂಲಕ ತಮ್ಮ ವೃತ್ತಿ ಬದುಕಿನಲ್ಲಿ ಇದೆ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ.

 

 

ಚಿತ್ರಕ್ಕೆ ಪೂರ್ವ ಸಿದ್ದತಾ ಕಾರ್ಯಗಳು ಈಗಾಗಲೇ ಆರಂಭಗೊಂಡಿದ್ದು ಕೆಜಿಎಫ್ ಶೂಟಿಂಗ್ ಮುಗಿದ ಮೇಲೆ ಸೆಟ್ಟೇರಲಿದೆ ಎಂದು ತಿಳಿದುಬಂದಿದೆ. ರಾಣಾ ಚಿತ್ರಕ್ಕೆ ರಮೇಶ್ ಕಶ್ಯಪ್ ಎನ್ನುವವರು ಬಂಡವಾಳ ಹಾಕಲಿದ್ದು ಬಿಗ್ ಬಜೆಟ್ ನಲ್ಲಿ ರಾಣಾ ಚಿತ್ರ ತಯಾರಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. “ರಾಣಾ ಎಂಬ ಟೈಟಲ್ ನಲ್ಲಿ ಎಷ್ಟು ಫೋರ್ಸ್ ಇದೆಯೋ ಸಿನಿಮಾದಲ್ಲೂ ಕೂಡ ಅಷ್ಟೇ ಫೋರ್ಸ್ ಇರಲಿದೆ.ಯಶ್ ಅವರು ತುಂಬಾ ವಿಭಿನ್ನವಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಹಾಯ್ ಟೆಂಪೋ ಸಿನಿಮಾ” ಎಂದು ನಿರ್ದೇಶಕ ಹರ್ಷ ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top