fbpx
ದೇವರು

ಭಾರತದ ಮೊದಲ ದೇವಿ ದೇವಸ್ಥಾನ ಇಲ್ಲಿಗೆ ಹೋದ್ರೆ ಸಂತಾನ ಸಮಸ್ಯೆ , ಹಣ ಕಾಸಿನ ಸಮಸ್ಯೆ ದೂರ ಆಗುತ್ತೆ ಅನ್ನೋ ನಂಬಿಕೆ ಇದೆ

ಭಾರತದಲ್ಲಿರುವ ಅತೀ ಪುರಾತನವಾದ ಹಿಂದೂ ಧರ್ಮದ ಪ್ರಥಮ ದೇವಿ ದೇವಾಲಯ.

ನವರಾತ್ರಿ ದಿನಗಳ ಈ ಸಮಯದಲ್ಲಿ ನಮ್ಮ ಭಾರತದಲ್ಲಿರುವ ಹಿಂದೂ ಧರ್ಮದ ಪುರಾತನ , ಪ್ರಥಮ, ಪ್ರಸಿದ್ಧ ದೇವಿ ದೇವಾಲಯವು ಯಾವುದೆಂದು ತಿಳಿದುಕೊಳ್ಳೋಣ ಬನ್ನಿ.
ದೇವಾಲಯಗಳನ್ನು ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಒಂದೊಂದು ದೇವಾಲಯವು ಸಹ ತನ್ನದೇ ಆದ ವಿಶೇಷತೆಗಳನ್ನು ಒಳಗೊಂಡಿವೆ.ಇವೆಲ್ಲವನ್ನು ನೋಡಿದರೆ ದೇವಾಲಯವು ಹೇಗೆ ಉಗಮವಾಯಿತು ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿಯೂ ಕಾಡುತ್ತದೆ.ಯಾರು ದೇವಾಲಯಗಳನ್ನು ನಿರ್ಮಾಣ ಮಾಡಬೇಕೆಂದು ಹೇಳಿದರು.ದೇವತೆಗಳ ಮೂರ್ತಿಯನ್ನು ಆರಾಧಿಸಬೇಕು ಎಂದು ಯಾರು ಹೇಳಿದರು ? ಎಂಬ ಪುರಾತನ ಶಾಸನಗಳ ಮೂಲಕ ಯಾವ ರಾಜರು ಯಾವ ಯಾವ ದೇವಾಲಯಗಳನ್ನು ಸ್ಥಾಪನೆ ಮಾಡಿದರು ಎಂಬುದನ್ನು ನಾವು ಜನರಿಂದ ಕೇಳುತ್ತೇವೆ ಮತ್ತು ನೋಡುತ್ತೇವೆ ಸಹ.

 

ಸಾಮಾನ್ಯವಾಗಿ ಶಿವನನ್ನು ಲಿಂಗ ಸ್ವರೂಪಿಯಾಗಿ ಪೂಜೆಗಳನ್ನು ಮಾಡುತ್ತಿದ್ದರು.ನಂತರ ಇತರೆ ದೇವತೆಗಳ ಮೂರ್ತಿಗಳು ಸಹ ಉಗಮ ಗೊಂಡವು.ಮೊಟ್ಟ ಮೊದಲು ದೇವಿಗೆ ದೇವಾಲಯವು ಎಲ್ಲಿ ನಿರ್ಮಾಣ ಮಾಡಿದರು.ಆ ದೇವಾಲಯ ಯಾವುದು ? ಎಂಬುದನ್ನು ತಿಳಿಯೋಣ…

ಭಾರತದಲ್ಲಿ ಮೊಟ್ಟ ಮೊದಲ ದೇವಿ ದೇವಾಲಯ ಇರುವುದು ಬಿಹಾರ ರಾಜ್ಯದ ಕೈಮಾರ ಜಿಲ್ಲೆಯ ಕೌರಾದ ಮುಂಡೇಶ್ವರಿ ಬೆಟ್ಟದ ಮೇಲೆ.ಆ ಬೆಟ್ಟದ ಮೇಲೆ ಇರುವ ಪ್ರಸಿದ್ದವಾದ ದೇವಾಲಯದ ಹೆಸರು ಮುಂಡೇಶ್ವರಿ ದೇವಿ ದೇವಾಲಯವಿದೆ. ಇದೊಂದು ಪ್ರಸಿದ್ಧ ಹಿಂದೂ ದೇವಾಲಯ.
ಈ ದೇವಾಲಯದ ಗರ್ಭಗುಡಿಯಲ್ಲಿ ಮಹಾ ಶಿವನು ತನ್ನ ಪತ್ನಿಯಾದ ಶಕ್ತಿಯೊಂದಿಗೆ ನೆಲೆಸಿದ್ದಾನೆ.ಇದು ಭಾರತದಲ್ಲಿರೋ ಅತ್ಯಂತ ಪುರಾತನವಾದ ಮೊದಲ ಹಿಂದೂ ಧರ್ಮದ ದೇವಿ ದೇವಾಲಯವೆಂದು ಖ್ಯಾತಿಯನ್ನು ಗಳಿಸಿದೆ.

 


ಈ ಪುರಾತನವಾದ ದೇವಿ ದೇವಾಲಯವನ್ನು ಬಿಹಾರದ ಧಾರ್ಮಿಕ ಸಂಘ ಮಂಡಳಿಯು 1915 ನೇ ಇಸವಿಯಲ್ಲಿ ತನ್ನ ಅಧೀನದಲ್ಲಿ ಇಟ್ಟುಕೊಂಡು ದೇವಸ್ಥಾನವನ್ನು ಸಂರಕ್ಷಣೆ ಮಾಡಿದೆ.ಮುಂಡೇಶ್ವರಿ ದೇವಿ ದೇವಾಲಯವು ಮುಂಡೇಶ್ವರಿ ಬೆಟ್ಟದ ಮೇಲೆ ಇದೆ.ಇದು ಸುಮಾರು 608 ಅಡಿ ಅಂದರೆ 185 ಮೀಟರ್ ಎತ್ತರದಲ್ಲಿದೆ.
ಈ ಮುಂಡೇಶ್ವರಿ ಬೆಟ್ಟದ ಮೇಲೆ ಅನೇಕ ಪುರಾತತ್ವ ಶಾಸನಗಳನ್ನು ಕಾಣಬಹುದಾಗಿದೆ. ಈ ದೇವಾಲಯವು ಸುಮಾರು 107 ನೇ ಇಸವಿಯಲ್ಲಿ ನಿರ್ಮಾಣ ಮಾಡಿರಬಹುದೆಂದು ಲೆಕ್ಕಾಚಾರ ಹಾಕಲಾಗಿದೆ.ಈ ದೇವಾಲಯವನ್ನು ನಗರಾ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಭಾರತದ ಮೊದಲ ದೇವಿ ದೇವಸ್ಥಾನ ಇಲ್ಲಿಗೆ ಹೋದ್ರೆ ಸಂತಾನ ಸಮಸ್ಯೆ , ಹಣ ಕಾಸಿನ ಸಮಸ್ಯೆ ದೂರ ಆಗುತ್ತೆ ಅನ್ನೋ ನಂಬಿಕೆ ಇದೆ
👇👇👇ಕೆಳಗಿನ ವಿಡಿಯೋ ನೋಡಿ 👇👇👇

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top