fbpx
ಮನೋರಂಜನೆ

ವೈರಲ್ ಆದ ಮಾಳವಿಕ ಮುತ್ತಿನ ವಿಡಿಯೋ ಬಗ್ಗೆ ಬಿಗ್’ಬಾಸ್ ಸುದೀಪ್ ಮತ್ತು ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಉತ್ತರ..

ವೈರಲ್ ಆದ ಮಾಳವಿಕ ಮುತ್ತಿನ ವಿಡಿಯೋ ಬಗ್ಗೆ ಬಿಗ್’ಬಾಸ್ ಸುದೀಪ್ ಮತ್ತು ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಉತ್ತರ..

 

 

ಕನ್ನಡ ಕಿರುತೆರೆಯ ಜನಪ್ರಿಯ ಮತ್ತು ಅತಿದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಆರಂಭಕ್ಕೆ ಸಿದ್ಧತೆಗಳು ನಡೆದಿವೆ. ಅಕ್ಟೋಬರ್ 15 ರಿಂದ ಶೋ ಆರಂಭವಾಗಲಿದ್ದು, 100 ದಿನಗಳ ಕಾಲ ನಡೆಯಲಿದೆ. ‘ಬಿಗ್ ಬಾಸ್’ ಮನೆಯೊಳಗೆ ಎಂದಿನಂತೆ ಸೆಲೆಬ್ರಿಟಿಗಳು ಎಂಟ್ರಿ ಪಡೆಯಲಿದ್ದಾರೆ. ವಿಶೇಷವಾಗಿ ಈ ಬಾರಿ ಜನ ಸಾಮಾನ್ಯರಿಗೂ ಅವಕಾಶ ನೀಡಲಾಗಿದೆ.

 

 

ಬಿಗ್ ಬಾಸ್’ ಹಿಂದಿನ 4 ಸೀಸನ್ ಯಶಸ್ವಿಯಾಗಿದ್ದು, 5 ನೇ ಸೀಸನ್ ಕುರಿತಾಗಿ ನಿರೀಕ್ಷೆ ಹೆಚ್ಚಾಗಿದೆ. ಹಿಂದಿನ ನಾಲ್ಕು ಸೀಸನ್ ಗಳಲ್ಲೂ ನಿರೂಪಕರಾಗಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಭಾರಿಯೂ ಎಂದಿನಂತೆ ಕಾರ್ಯಕ್ರಮದ ನಿರೂಪಣೆಯನ್ನ ಮಾಡಲಿದ್ದಾರೆ.. ಕಾರ್ಯಕ್ರಮವು ಇದೆ ಬಾನುವಾರದಿಂದ ಆರಂಭಗೊಳ್ಳಲಿದ್ದು ಆ ನಿಟ್ಟಿನಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಲು ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು..ಆ ಪತ್ರಿಕಾಗೋಷ್ಠಿಯಲ್ಲಿ ಮಾಳವಿಕ ಮುತ್ತಿನ ವಿಡಿಯೋ ಬಗ್ಗೆ ಬಿಗ್’ಬಾಸ್ ಸುದೀಪ್ ಮತ್ತು ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಉತ್ತರ ನೀಡಿದ್ದಾರೆ.

 

 

ಕಳೆದ ಎರಡು ಮೂರು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಸಂಚಲನ ಸೃಷ್ಟಿಸಿದ್ದ ಕಳೆದ ಆವೃತ್ತಿಯ ಸ್ಪರ್ಧಿ ಮಾಳವೀಕ ಹಾಗೂ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಅವರಿಬ್ಬರ ನಡುವೀಣೆ ದೃಶ್ಯದ ಬಗ್ಗೆ ಮಾತನಾಡಿದ್ದಾರೆ. ಕಳೆದ ಆವೃತ್ತಿಯಲ್ಲಿ ಶೀತಲ್, ಶಾಲಿನಿ ಹಾಗೂ ಪ್ರಥಮ್ ಹಾಗೂ ಮಾಳವೀಕರವರನ್ನು ಸೀಕ್ರೇಟ್ ರೂಮ್ ಗೆ ಕಳುಹಿಸಲಾಗಿತ್ತು ಎಲ್ಲರನ್ನೂ ದೊಡ್ಡ ಮನೆಯಿಂದ ಸೀಕ್ರೆಟ್ ರೂಮ್ ಗೆ ಕಳುಹಿಸುವಾಗ ನಾನು ಮಾತ್ರ ಅವರನ್ನು ಸೀಕ್ರೆಟ್ ರೂಮ್ ಗೆ ಕರೆದುಕೊಂಡು ಹೋಗಿ ಬಿಡುತ್ತೇನೆ. ನನ್ನ ಬಳಿ ಮೈಕ್ ಇಲ್ಲದೆ ಇರೋ ಕಾರಣ ಬಹುಶಃ ಅದೇ ನಿಮಗೆ ಗುಸುಗುಸು ಎಂದು ಕೇಳಿಸಿರುತ್ತದೆ..

 

 

100 ದಿನಗಳ ಕಾಲ ಹೊರ ಜಗತ್ತಿನಿಂದ ದೂರವಿರುವ ಕಾರಣದಿಂದ ಸ್ಪರ್ಧಿಗಳಿಗೂ ಕೊಂಚ ಆತಂಕವಿರುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಅವರಿಗೆ ಧೈರ್ಯ ಹಾಗೂ ಉತ್ಸಾಹ ತುಂಬಿ ಕಳುಹಿಸುವ ಅವರ ಜೊತೆ ಮಾತನಾಡುತ್ತ ಅವರನ್ನು ಸೀಕ್ರೆಟ್ ರೂಮ್ ಗೆ ಕಳುಹಿಸಿಕೊಡಲಾಗುತ್ತದೆ..ಎಂದು ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ.

 

 

“ಕಳೆದ ವರ್ಷದ ವೀಡಿಯೊವನ್ನು ಅಪ್ಲೋಡ್ ಮಾಡಿ ಎಕ್ಸ್ಟ್ರಾ ಪ್ರಚಾರಮಾಡಿಕೊಟ್ಟ ವ್ಯಕ್ತಿಗೆ ಧನ್ಯವಾದಗಳು. ಈ ವಿಡಿಯೋದಲ್ಲಿ ಏನೂ ಇಲ್ಲ ಎಲ್ಲಾ ಅವರ ದೃಷ್ಟಿಕೋನಗಳಿಗೆ ಬಿಟ್ಟಿದ್ದು,, ನನಗೆ ಬಂದೋರೆಲ್ಲಾ ಮುತ್ತು ಕೊಡ್ತಾರೆ ಅದ್ನೇಲ್ಲಾ ಟಪ್ ತಿಳ್ಕೊಂಡ್ರೆ ಆಗುತ್ತಾ..ಇದೆಲ್ಲಾ ಊಹಾಪೋಹ ಅಷ್ಟೇ ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top