fbpx
ದೇವರು

ದೀಪಾವಳಿಯ ದಿನ ಬರುವವರೆಗೂ ಧನ ಪ್ರಾಪ್ತಿಗಾಗಿ ಮತ್ತು ಅದೃಷ್ಟ ವೃದ್ಧಿಯಾಗುವುದಕ್ಕಾಗಿ ಈ ಆರು ಕೆಲಸಗಳನ್ನು ಮಾಡಿ.

ದೀಪಾವಳಿಯ ದಿನ ಬರುವವರೆಗೂ ಧನ ಪ್ರಾಪ್ತಿಗಾಗಿ ಮತ್ತು ಅದೃಷ್ಟ ವೃದ್ಧಿಯಾಗುವುದಕ್ಕಾಗಿ ಈ ಆರು ಕೆಲಸಗಳನ್ನು ಮಾಡಿ.

 

 

ಹತ್ತೊಂಬತ್ತನೇ ಅಕ್ಟೋಬರ್ ದೀಪಾವಳಿ ಹಬ್ಬ ಅಮಾವಾಸ್ಯೆಯ ದಿನ   ಶ್ರೀ ಮಹಾಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ಧನ ಪ್ರಾಪ್ತಿಯಾಗುವುದರ ಜೊತೆಗೆ ಧನಕ್ಕೆ ಸಂಬಂಧಿಸಿದ ಎಲ್ಲ ಸಂಕಟಗಳು ಕಷ್ಟಗಳು  ದೂರವಾಗುತ್ತವೆ. ಈ ದಿನ  ಲಕ್ಷ್ಮೀ ದೇವಿಯ ಪೂಜೆ ಮಾಡಿದರೆ ಲಕ್ಷ್ಮೀದೇವಿಯು  ಪ್ರಸನ್ನಳಾಗುತ್ತಾಳೆ.  ಅವಳ ಕೃಪಾಕಟಾಕ್ಷಕ್ಕೆ ನಾವು ಪಾತ್ರರಾಗುತ್ತೇವೆ. ನಮ್ಮ ಹಿರಿಯರು ಪಾಲಿಸಿದ ಹಳೆಯ ಸಂಪ್ರದಾಯಗಳನ್ನು ನಾವು ಸಹ ಪಾಲಿಸಬೇಕು ಅವು ಅತೀ ಮುಖ್ಯವಾಗಿವೆ.

 

ದೀಪಾವಳಿ ಹಬ್ಬ ಬರುವವರೆಗೂ ಪ್ರತಿದಿನ ಈ ಆರು ಕೆಲಸಗಳನ್ನು ಮುಖ್ಯವಾಗಿ ಮಾಡಬೇಕು. ಹೀಗೆ ಮಾಡಿದರೆ ನಿಮ್ಮ ಸಕಲ ದೋಷಗಳು ಕಷ್ಟಗಳು ಎಲ್ಲವೂ  ದೂರವಾಗುವುವು.

1.ಪ್ರತಿ ದಿನ ಸಂಜೆ ದೀಪ ಬೆಳಗಿಸಿ.

 

ಪ್ರತಿದಿನ ಸಂಜೆ ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ  ದೀಪವನ್ನು ಬೆಳಗಿಸಿ ಹೀಗೆ ದೀಪಾವಳಿ ಹಬ್ಬ ಬರುವವರೆಗೂ ದೀಪವನ್ನು ಬೆಳಗಿಸಬೇಕು ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯೂ  ಪ್ರಸನ್ನಳಾಗುತ್ತಾಳೆ.

2.ಪ್ರತಿ ದಿನ ನಿಮ್ಮ ಮನೆಗೆ ಗೋಮೂತ್ರವನ್ನು ಸಿಂಪಡಿಸಿರಿ.

 

 

ಪ್ರತಿ ದಿನ ನಿಮ್ಮ ಮನೆಗೆ ಗೋಮೂತ್ರವನ್ನು ಎಲ್ಲ ಮೂಲೆಗೂ ತಲುಪುವಂತೆ ಸಿಂಪಡಿಸಿ ಹೀಗೆ ಗೋಮೂತ್ರವನ್ನು ಪ್ರತಿದಿನ ಸಿಂಪಡಿಸಲು ಆಗುವುದಿಲ್ಲ ಎಂದರೆ ಹಬ್ಬ ಹರಿದಿನಗಳಲ್ಲಿ ಪೌರ್ಣಮಿ ಮತ್ತು ಅಮಾವಾಸ್ಯೆಯ ದಿನಗಳಲ್ಲಿ  ಅವಶ್ಯವಾಗಿ ಸಿಂಪಡಿಸಿ.ಹೀಗೆ ಗೋಮೂತ್ರವನ್ನು ಪ್ರತಿದಿನ ದೀಪಾವಳಿ ಹಬ್ಬ ಬರುವವರೆಗೂ ಸಿಂಪಡಿಸುವುದರಿಂದ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುತ್ತೇವೆ.

3.ರಂಗೋಲಿಯನ್ನು ಹಾಕಿ .

 

 

ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ಪ್ರತಿ ದಿನ ರಂಗೋಲಿಯನ್ನು ಬಿಡಿಸಿ. ರಂಗೋಲಿಯಿಂದ ಮನೆಯೊಳಗೆ ಧನಾತ್ಮಕ ಶಕ್ತಿಯು  ಪ್ರವೇಶವಾಗುವುದು. ಈ ರೀತಿ ರಂಗೋಲಿಯನ್ನು ಮನೆಯ ಮುಖ್ಯ ದ್ವಾರದ ಬಳಿ ಬಿಡಿಸುವುದರಿಂದ ಅದು ದೇವಿ ಮತ್ತು  ದೇವಾನುದೇವತೆಗಳಿಗೂ  ಸ್ವಾಗತವನ್ನು  ಕೋರುವ ಸಮಾನವಾದ ರೀತಿಯಲ್ಲಿ ಸ್ವಾಗತವನ್ನು ಮಾಡುತ್ತದೆ. ಇದರಿಂದ ಲಕ್ಷ್ಮೀ ದೇವಿಯು ಸಹ ಪ್ರಸನ್ನಳಾಗುತ್ತಾಳೆ.

4.ಮನೆಯ ವಾತಾವರಣವನ್ನು ಸುಗಂಧಮಯವಾಗಿರಿಸಿ.

 

 

ನಿಮ್ಮ ಮನೆಯ ವಾತಾವರಣವನ್ನು ಸುಗಂಧಮಯವಾಗಿ ಇರಿಸಿಕೊಳ್ಳಿ. ದೀಪಾವಳಿಯ ಹಬ್ಬದ  ದಿನದವರೆಗೂ ಮನೆಯೊಳಗೆ ಪ್ರತಿದಿನ ಒಳ್ಳೆಯ ಪರಿಮಳ ಬೀರುವ ಸುಗಂಧ ಯುಕ್ತವಾದ ಅಗರಬತ್ತಿ ಮತ್ತು ಧೂಪಗಳನ್ನು ಹಚ್ಚಬೇಕು. ಇದರಿಂದ ಲಕ್ಷ್ಮೀಯೂ ನಿಮ್ಮ ಮನೆಗೆ  ಬರುವಳು.

5.ಪ್ರತಿ ದಿನ ಸಂಜೆ ಶಿವಲಿಂಗದ ಮುಂದೆ ದೀಪ ಬೆಳಗಿಸಿ.

 

 

ಪ್ರತಿದಿನ ಸಂಜೆ ಶಿವಲಿಂಗದ ಮುಂದೆ ದೀಪವನ್ನು ಬೆಳಗಿಸಬೇಕು. ಶಿವಪುರಾಣದ ಪ್ರಕಾರ ಸಂಜೆಯ ಸಮಯದಲ್ಲಿ  ಶಿವಲಿಂಗದ ಬಳಿ ದೀಪದ ಜ್ವಾಲೆಯನ್ನು ಬೆಳಗಿಸುವುದರಿಂದ ಧನ ಪ್ರಾಪ್ತಿಯಾಗುವುದು. ಇದರಿಂದ ಲಕ್ಷ್ಮೀ ದೇವಿಯೂ ಸಹ ಪ್ರಸನ್ನಳಾಗುತ್ತಾಳೆ.

6.ನಿಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.

 

 

ದೀಪಾವಳಿಯ ಹಬ್ಬದ ದಿನದವರೆಗೂ ಅಂದರೆ ಈ ಕಾರ್ತಿಕ ಮಾಸದಲ್ಲಿ  ಸಂಪೂರ್ಣವಾಗಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಎಲ್ಲಿಯೂ ಕೊಳಕು ಮತ್ತು ಕಸವನ್ನು  ಮನೆಯ ಮೂಲೆ ಮೂಲೆಯಲ್ಲೂ ಇಡಬೇಡಿ. ಹೀಗೆ ಮಾಡಿದರೆ ಲಕ್ಷ್ಮೀ ದೇವಿಗೆ ಇಷ್ಟವಾಗುವುದಿಲ್ಲ. ದೀಪಾವಳಿಗೂ ಮುನ್ನ ನಿಮ್ಮ ಮನೆಯನ್ನು ಸಂಪೂರ್ಣವಾಗಿ ಸಂಪೂರ್ಣವಾದ ರೀತಿಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳಿ.

ಇವೆಲ್ಲಾ  ನಮ್ಮ ಹಿರಿಯರು ಪಾಲಿಸಿಕೊಂಡು ಬಂದ ಸಂಪ್ರದಾಯವಾಗಿವೆ. ಇವು ನಮ್ಮ ಹಿಂದೂ ಧರ್ಮದ ಪರಂಪರೆಯನ್ನು ಎತ್ತಿ ಹಿಡಿಯುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top