fbpx
ದೇವರು

ಚೊಟ್ಟಾಣಿಕರ ದೇವಿ ದೇವಸ್ಥಾನದಲ್ಲಿ ಖಾಯಿಲೆ, ಭೂತ ಪ್ರೇತ, ನಕಾರಾತ್ಮಕ ಮತ್ತು ದುಷ್ಟ ಶಕ್ತಿಗಳಿಂದ ಬಳಲುತ್ತಿರೋರಿಗೆ ಒಂದು ಗೊಂಬೆ ಬಳಸಿ ಪರಿಹಾರ ಮಾಡ್ತಾರೆ ಅಂತ ತಿಳ್ಕೊಂಡ್ಮೇಲೆ ಆಶ್ಚರ್ಯ ಆಗುತ್ತೆ !

ಚೊಟ್ಟಾಣಿಕರ ದೇವಿ ದೇವಸ್ಥಾನ .

ಈ ದೇವಿಯನ್ನು ಬೆಳಗಿನ ಸಮಯದಲ್ಲಿ ಸರಸ್ವತಿ ದೇವಿಯೆoದು ಮಧ್ಯಾಹ್ನದ ಸಮಯದಲ್ಲಿ ಮಹಾಲಕ್ಷ್ಮಿ ದೇವಿಯೆoದು ಮತ್ತು ಸಂಜೆಯ ಸಮಯದಲ್ಲಿ ದುರ್ಗಾ ದೇವಿಯೆಂದು ಮುೂರು ರೂಪದಲ್ಲಿ  ಪೂಜಿಸಲಾಗುತ್ತದೆ.

 

 

ಚೊಟ್ಟಾಣಿಕರ ದೇವತೆಯೆoದೆ ಪೂಜಿಸುವ ಚೊಟ್ಟಾಣಿಕರ  ಶ್ರೀ ರಾಜರಾಜೇಶ್ವರಿ  ದೇವಸ್ಥಾನವು ಕೇರಳ ರಾಜ್ಯದ, ಎರ್ನಾಕುಲಂ ಜಿಲ್ಲೆಯ,  ಚೊಟ್ಟಾಣಿಕರ ಎಂಬ ಒಂದು ಸ್ಥಳದಲ್ಲಿ ನೆಲೆಗೊಂಡಿದೆ.

ಈ ದೇವಿಯನ್ನು ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ ಅದು ರಾಜರಾಜೇಶ್ವರಿ ದೇವಿ, ಮಹಾಲಕ್ಷ್ಮೀ ದೇವಿ, ಭದ್ರಕಾಳಿ ದೇವಿ, ಸರಸ್ವತಿ ದೇವಿ, ದುರ್ಗಾದೇವಿ, ಭಗವತಿ ದೇವಿ ಮತ್ತು ಅಮ್ಮ ರಾಜರಾಜೇಶ್ವರಿ ದೇವಿ ಮತ್ತು ಸರಸ್ವತಿ ದೇವಿಗೆ ಬೆಳಗ್ಗೆ ಪೂಜಿಸಲಾಗುತ್ತದೆ ಲಕ್ಷ್ಮೀದೇವಿಗೆ ಮಧ್ಯಾಹ್ನ ಪೂಜಿಸಲಾಗುತ್ತದೆ ದುರ್ಗಾದೇವಿಗೆ ಸಂಜೆಯ ಸಮಯದಲ್ಲಿ ಪೂಜಿಸಲಾಗುತ್ತದೆ.

ಈ ದೇವಿಯು ಮಾನಸಿಕ ಕಾಯಿಲೆಗಳನ್ನು ಬೇಗನೆ ವಾಸಿ ಮಾಡುತ್ತಾರೆ ಎಂದು ಇಲ್ಲಿನ ಜನರು ನಂಬಿದ್ದಾರೆ. ಮತ್ತು ಬೇರೆ ಖಾಯಿಲೆಗಳಾದ ಭೂತ ಪ್ರೇತಗಳಂತಹ ನಕಾರಾತ್ಮಕ ಮತ್ತು ದುಷ್ಟ   ಶಕ್ತಿಗಳಿಗೆ ತುತ್ತಾಗಿರುವವರು ಸಹ ಇಲ್ಲಿ ಗುಣಮುಖರಾಗುತ್ತಾರೆ. ಇಲ್ಲಿಗೆ ಬಂದಂತಹ ಅನೇಕ ರೋಗ ಪೀಡಿತರು ಬಾಧೆಗೊಳಗಾದವರು ಸಾಮಾನ್ಯವಾಗಿ ಇಲ್ಲಿ ನೋಡಲು ಕಾಣಸಿಗುತ್ತಾರೆ ಮತ್ತು ಅವರು ಅಂತಹ ಕಾಯಿಲೆಗಳಿಂದಲೂ ಸಹ ವಾಸಿಯಾಗಿದ್ದಾರೆ.

ಇಲ್ಲಿ ಪುರಾಣ ಕಾಲದ ಒಂದು ಮರವಿದೆ .ಈ ಮರದ  ಹಿರಿಮೆ ಈ ದೇವಸ್ಥಾನಕ್ಕೆ ಇದೆ. ಈ ಮರದ ಕಾಂಡದಲ್ಲಿ ಕಬ್ಬಿಣದ ಉಗುರು ಮತ್ತು  ಗೊಂಬೆಗಳಿವೆ. ಯಾವ ಜನರಿಗೆ ಅಥವಾ ವ್ಯಕ್ತಿಗಳಿಗೆ ದೆವ್ವ, ಭೂತ, ಪ್ರೇತಾತ್ಮಗಳಂತಹ ಕೆಟ್ಟ ಶಕ್ತಿ ಇರುತ್ತವೋ ಅಂತಹ ವ್ಯಕ್ತಿಗಳನ್ನು ಗುರುತಿಸಿ ಇಲ್ಲಿಗೆ ಪೂಜೆಗೆ ಕರೆದುಕೊಂಡು ಬರಲಾಗುತ್ತದೆ. ಪೂಜೆ ಪುನಸ್ಕಾರ ಎಲ್ಲವೂ ಮುಗಿದ ನಂತರ  ಅಂತಹ ಬಾಧೆಗೊಳಗಾದ ಪೀಡಿತರು ವಿಲಕ್ಷಣ, ಅಲೌಕಿಕ, ಉನ್ಮಾದ ಇರುವವರಿಗೆ   ಕೊಟ್ಟಿರುವ  ಅವರ ಸ್ವಲ್ಪ ಕೂದಲನ್ನು ಮತ್ತು  ಗೊಂಬೆಯನ್ನು    ಮರದ ಮೇಲೆ ಮಳೆಯಿಂದ ಆ  ಮರಕ್ಕೆ ಒಡೆಯಲಾಗುತ್ತದೆ ಮತ್ತು ಅವರ ಹಣೆಯನ್ನು ಈ ಮರಕ್ಕೆ ತಾಗಿಸಬೇಕು.ಆಗ ದುಷ್ಟಶಕ್ತಿಗಳು ಈ ಮರದ ದೇವಸ್ಥಾನದಲ್ಲಿರುವ ಮರದ ಬಳಿಯೇ ಉಳಿದುಕೊಳ್ಳುತ್ತವೆ. ಆಗ ರೋಗಿಗಳು ಸಹ ಗುಣಮುಖರಾಗುತ್ತಾರೆ.

 

 

ಇಲ್ಲಿಗೆ ಬರುವ ಭಕ್ತರು ತಿರುಗಿ ಮನೆಗೆ ಹೋಗುವಾಗ ಇಲ್ಲಿಂದ ಬೇವಿನ ಎಲೆಗಳು, ನಿಂಬೆ ಹಣ್ಣು ಮತ್ತು ಮೆಣಸಿನಕಾಯಿಯನ್ನು ಈ ದೇವಸ್ಥಾನದಿಂದ ಮನೆಗೆ ತೆಗೆದುಕೊಂಡು ಹೋಗಿ ಎಲ್ಲಿ ದುಷ್ಟಶಕ್ತಿಗಳ ಕಾಟ ಇರುವುದೋ ಅಲ್ಲಿ ಇಟ್ಟರೆ ಅವುಗಳ ನಿವಾರಣೆಯಾಗುತ್ತದೆಯಂತೆ.

 

ಇಲ್ಲಿಗೆ ಬರುವ ಭಕ್ತಾದಿಗಳಿಗೆ ಇಲ್ಲಿ ಒಂದು ಸಲಹೆ ನೀಡಲಾಗಿದ್ದು ಇಲ್ಲಿ ಬರುವ ಯಾರೂ ಸಹ ಆ ಮರವನ್ನು ಅಪ್ಪಿತಪ್ಪಿಯೂ ಮುಟ್ಟಬಾರದು ಮುಟ್ಟಿದರೆ ಪ್ರೇತಾತ್ಮದಂತಹ ಶಕ್ತಿಗಳು ಅವರನ್ನು ಹೊಕ್ಕುತ್ತವೆ. ಇದು ಅತ್ಯಂತ ಪ್ರಸಿದ್ಧಿಯಾದ ದೇವಿ ದೇವಸ್ಥಾನವಾಗಿದ್ದು ಮಾತೆ ಶಕ್ತಿ ದೇವಿ ಅಥವಾ ರಾಜ ರಾಜೇಶ್ವರಿ ದೇವಿ ಇವರನ್ನು ಭಗವತಿ ದೇವಿ ಎಂದು ಸಹ ಕರೆಯಲಾಗುತ್ತದೆ. ಇಲ್ಲಿ ಮಹಾಲಕ್ಷ್ಮೀ ದೇವಿಯ ಸಹ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ.ಮಹಾಲಕ್ಷ್ಮೀ ದೇವಿಯ ವಿಷ್ಣು ಸಮೇತವಾಗಿ ನೆಲೆಸಿದ್ದಾಳೆ ಅಷ್ಟೇ ಅಲ್ಲದೆ  ಮೂರು ವಿವಿಧ ರೀತಿಯಲ್ಲಿ ಈ ದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ.

 

 

ಸರಸ್ವತಿ ದೇವಿ ಜ್ಞಾನದ ದೇವತೆಯಾಗಿ,

ದುರ್ಗಾದೇವಿ ಶಕ್ತಿಯ ದೇವತೆಯಾಗಿ ,

ಮಹಾಲಕ್ಷ್ಮೀ ದೇವಿ ಹಣದ ಐಶ್ವರ್ಯದ ದೇವತೆಯಾಗಿ,

ಇದರ ಜೊತೆಗೆ ಈ ದೇವಸ್ಥಾನದಲ್ಲಿ ಶಿವ, ಗಣೇಶ, ಅಯ್ಯಪ್ಪ  ಸ್ವಾಮಿಯನ್ನು ಸಹ ಪೂಜಿಸಲಾಗುತ್ತದೆ.

ಕೀಜಕಾವು ದೇವಿಯು  ಭದ್ರಕಾಳಿ ,ಮಹಾ ಕಾಳಿ ದೇವಿಯ ಅವತಾರವೆಂದು ಇಲ್ಲಿ ನಂಬಲಾಗಿದ್ದು ಇವು ದುರ್ಗಿಯ ಭಯಂಕರ ರೂಪವಾಗಿದೆ. ಭದ್ರಕಾಳಿ  ದೇವಿಯು ಭಯಂಕರ ರೂಪದಲ್ಲಿದ್ದು ಶಿವನ ಮೂರನೇ ಕಣ್ಣಿನಿಂದ ಹುಟ್ಟಿದಳೆಂದು ಹೇಳಲಾಗುತ್ತದೆ.ಧರುಕಾ ಎಂಬ ಹೆಸರಿನ  ರಾಕ್ಷಸರನ್ನು ಸಂಹಾರ ಮಾಡುವುದಕ್ಕಾಗಿಯೇ ಅವತಾರ ಪಡೆದವಳು ಈ ಭದ್ರಕಾಳಿ ದೇವಿ .

 

 

ಇಲ್ಲಿ ಗುರುತಿ ಪೂಜೆಯನ್ನು ಸಂಜೆಯ ಸಮಯದಲ್ಲಿ ಮಾಡಲಾಗುತ್ತದೆ. ಮಾತೇ ಮಹಾಕಾಳಿಯನ್ನು ಆಹ್ವಾನಿಸಲು ಇದಕ್ಕೂ ಮುಂಚೆ ಗುರುತಿ ಪೂಜೆಯನ್ನು ಶುಕ್ರವಾರ ಮಾತ್ರ ಮಾಡಲಾಗುತ್ತಿತ್ತು ಆದರೆ ಈಗ ಪ್ರತಿದಿನ ಮಾಡಲಾಗುತ್ತದೆ.

ಮಾಕಂ ತೇಜಲ್ ಹಬ್ಬವೂ ತುಂಬಾ ಮಂಗಳಕರವೆಂದು ಹಬ್ಬವೆಂದು ಇಲ್ಲಿ ವಿಶೇಷವಾಗಿ ಮಂಗಳವಾರ ಮತ್ತು ಶುಕ್ರವಾರದ ದಿನಗಳಂದು ಈ ದೇವಸ್ಥಾನದಲ್ಲಿ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ ಮತ್ತು ಜನ ಸಂದಣಿ ಕೂಡ ಅತಿ ದಟ್ಟವಾಗಿ ಇರುತ್ತದೆ .

ಈ ಮಾತೆಯನ್ನು ಅಮ್ಮಾ ಎಂದು ಕರೆಯಲಾಗುತ್ತದೆ. ಅಂದರೆ ತಾಯಿ ಎಂದರ್ಥ. ಅಂದರೆ ಆ ದೇವಿಗೆ ಅಂತಹ ಸ್ಥಾನಮಾನ ಇಲ್ಲಿ ಸಿಕ್ಕಿದೆ. ಎಲ್ಲರನ್ನೂ ಸೃಷ್ಟಿಸಿದ ಆ ಜಗನ್ಮಾತೆ ತಾಯಿ ಎಂದರ್ಥ.

ಚೊಟ್ಟಾಣಿಕರ  ದೇವಿಗೆ  ಮತ್ತು  ಕೊಲ್ಲೂರಿನ ಮೂಕಾಂಬಿಕೆ ದೇವಿಗೆ  ಬಹಳ  ಹತ್ತಿರದ   ಸಂಬಂಧವಿದೆ.

ವಿಶೇಷತೆ.

ಹೆಣ್ಣು ಮಕ್ಕಳನ್ನು ಪಡೆಯಬೇಕು ನಮಗೆ ಗಂಡು ಮಕ್ಕಳು ಬೇಡ ಎನ್ನುವ ಭಕ್ತರು ಇಲ್ಲಿ ಬಂದು ಈ ದೇವಿಗೆ ಭಕ್ತಿಯಿಂದ ಪೂಜೆ ಪ್ರಾರ್ಥನೆ ಸಲ್ಲಿಸಿದರೆ ಈ ದೇವಿಯ ಹೆಣ್ಣು ಮಗುವನ್ನೇ ಕರುಣಿಸುತ್ತಾಳೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.

ಈ ದೇವಸ್ಥಾನಕ್ಕೆ ಹೋಗುವ ಭಕ್ತರು ಎರ್ನಾಕುಲಂನ  ಕೊಚ್ಚಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನೆಡುoಬಸರಿಯಿಂದ ಸುಮಾರು ಇಪ್ಪತ್ತೆರಡು ಕಿಲೋಮೀಟರ್ ದೂರವಿದೆ ಮತ್ತು ರೈಲ್ವೆ ಸಂಚಾರದ ಮೂಲಕ ಎರ್ನಾಕುಲಂ ಮತ್ತು ಕೊಚ್ಚಿಯಿಂದ ಹದಿನೇಳು ಕಿಲೋಮೀಟರ್ ದೂರವಿದೆ.ಹಾಗೆ ಸಾರಿಗೆ ವ್ಯವಸ್ಥೆಯೂ ಕೂಡ ಅಧಿಕವಾಗಿದೆ ಸರ್ಕಾರಿ ಬಸ್ಸುಗಳ ಸೌಲಭ್ಯವೂ ಸಹ ಇದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top