fbpx
ಧರ್ಮ

ಮದುವೆಯಾಗೋ ಸಂದರ್ಭದಲ್ಲಿ ಇಡೋ ಏಳು ಹೆಜ್ಜೆಗಳಿಗೆ ಇಷ್ಟೊಂದು ಮಹತ್ವ ಇದೆ ಅಂತ ಈಗ್ಲೇ ಗೊತ್ತಾಗಿದ್ದು , ಏನು ಅಂತೀರಾ ನೀವು ಓದಿ ತಿಳ್ಕೊಳ್ಳಿ

ಸಪ್ತಪದಿ ಎಂದರೇನು ?  ನಾವು ಸಪ್ತಪದಿಯನ್ನು ಏಕೆ ಮದುವೆಯ ಸಂದರ್ಭದಲ್ಲಿ ಇಡಬೇಕು ?  ಏಳು ಹೆಜ್ಜೆಗಳ ಮಹತ್ವ ಏನು ?

ಸಪ್ತಪದಿ ಇದು ಸಪ್ತಪದಿ ಇದು ಏಳು ಹೆಜ್ಜೆಗಳ ಅನುಬಂಧ ಎಂದು ಡಾ. ರಾಜಕುಮಾರ ಅವರು ಹಾಡಿರುವ ಹಾಡನ್ನು ನೀವೆಲ್ಲರೂ ಕೇಳಿದ್ದೀರಿ. ವಧು ಹಾಗೂ ವರ ಮದುವೆಯಾಗುವ ಸಂದರ್ಭದಲ್ಲಿ ಮದುವೆಯ ನಂತರ ಸಪ್ತಪದಿಯನ್ನು ತುಳಿಯುತ್ತಾರೆ .

 

 

ಹಿಂದೂ ಧರ್ಮದಲ್ಲಿ ಸಪ್ತಪದಿಗೆ ವಿಶೇಷವಾದ ಮಹತ್ವವಿದೆ.ಹಿಂದೂ ಧರ್ಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಪ್ರತಿಯೊಂದು ಜೋಡಿಯೂ ಸಹ ಸಪ್ತಪದಿಯನ್ನು ತುಳಿಯಲೇಬೇಕು. ಮದುವೆಯ ವೇಳೆ ವಧು ಹಾಗೂ ವರ ಅಗ್ನಿಯನ್ನು ಸಾಕ್ಷಿಯಾಗಿಸಿಕೊಂಡು ಸಪ್ತಪದಿಯನ್ನು ತುಳಿಯುತ್ತಾರೆ. ಆದರೆ ಇದರ ಮಹತ್ವ ಹಾಗೂ ಸರಿಯಾದ ಅರ್ಥ ಹೆಚ್ಚಿನವರಿಗೆ ತಿಳಿದಿರುವುದಿಲ್ಲ.

ಅಗ್ನಿ ದೇವರನ್ನು ಸಾಕ್ಷಿಯಾಗಿಸಿಕೊಂಡು ತೆಗೆದುಕೊಳ್ಳುವ ಪ್ರತಿಯೊಂದು ಸುತ್ತಿಗೂ ಸಹ ಅದರದ್ದೇ ಆದ ವಿಶೇಷ ಮಹತ್ವ  ಮತ್ತು  ಹಾಗೂ   ವಿಶೇಷ ಅರ್ಥವಿದೆ .

ಸಂಬಂಧಗಳ ಮಹತ್ವ ಕಡಿಮೆಯಾಗುತ್ತಿರುವ ಇಂದಿನ ಆಧುನಿಕ ಯುಗದ ದಿನಗಳಲ್ಲಿ ಸಪ್ತಪದಿಯ ಮಹತ್ವ ತಿಳಿದುಕೊಳ್ಳುವುದು ಅತಿ ಮುಖ್ಯವಾಗಿದೆ.

ಮೊದಲನೇ ಸುತ್ತು.

 

 

ದಾಂಪತ್ಯ ಜೀವನದಲ್ಲಿ ಎದುರಿಸುವಂತಹ ಯಾವುದೇ ಸಮಸ್ಯೆಗಳನ್ನು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ನಿಭಾಯಿಸುತ್ತೇವೆ ಎಂದು ಶಪಥ   ಮಾಡಿಕೊಳ್ಳುತ್ತಾರೆ. ಅವರನ್ನು ವಧುವಿನಿಂದ ಊಟದ ಬೇಡಿಕೆಯನ್ನು ಇಟ್ಟರೆ ವಧು ತನ್ನ ಹಾಗೂ ತಮ್ಮ ಕುಟುಂಬದವರನ್ನು ನೋಡಿಕೊಳ್ಳುವ ಜವಾಬ್ದಾರಿ ಪಡೆದುಕೊಳ್ಳಬೇಕೆಂಬ ಆಶ್ವಾಸನೆಯನ್ನು ಪಡೆಯುತ್ತಾಳೆ .

ಎರಡನೇ ಸುತ್ತು.

ಸುಖ ಜೀವನ ಹಾಗೂ ಮಗುವನ್ನು ಪಡೆಯಬೇಕೆಂಬ ವಧುವಿನಿಂದ ವರನು ಮಾತನ್ನು ಪಡೆದುಕೊಳ್ಳುತ್ತಾನೆ ಈ ಮಾತನ್ನು  ಸಂತೋಷದಿಂದ ಒಪ್ಪಿಕೊಳ್ಳುವ ವಧು ವರರಿಂದ ಕೇವಲ ಪ್ರೀತಿಯನ್ನು ಮಾತ್ರ ಬಯಸುತ್ತಾಳೆ.

 

 

ಮೂರನೇ ಸುತ್ತು.

ಜೊತೆಯಾಗಿರಲು ಮತ್ತು ಬೆಳೆಯಲು ಒಳ್ಳೆಯ ಸಂಪತ್ತು ಮತ್ತು ಶಕ್ತಿ ಕೊಡು ಎಂದು ದೇವರಲ್ಲಿ ಪ್ರಾರ್ಥಿಸಲಾಗುತ್ತಿದೆ ಪರಪುರುಷನನ್ನು ತನ್ನ  ಗಂಡನಿಗೆ ದ್ವಿತೀಯನೆಂದು ವಧು ಪ್ರತಿಜ್ಞೆ ಮಾಡುತ್ತಾಳೆ. ಇದು ಕೇವಲ ವಧುವಿಗೆ ಮಾತ್ರ ಯಾಕೆ ? ಎನ್ನುವುದು ನಮಗೆ ಅಚ್ಚರಿ ಮೂಡಿಸುವ ಪ್ರಶ್ನೆಯಾಗಿದೆ.

 

 

ನಾಲ್ಕನೆಯ ಸುತ್ತು.

ತಮ್ಮ ಪ್ರೀತಿ ಹೆಚ್ಚಾಗುತ್ತಾ ಇರಲಿ ಮತ್ತು ಗೌರವವು ಸ್ಥಿರವಾಗಿರಲಿ ಎಂದು ನಾಲ್ಕನೇ ಸುತ್ತಿನಲ್ಲಿ ವಧು ಹಾಗೂ ವರ ಬೇಡಿಕೊಳ್ಳುವರು. ದಂಪತಿಗಳು ತಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಪ್ರತಿಯೊಬ್ಬರೂ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರ ಬಗ್ಗೆ ತಿಳಿದುಕೊಳ್ಳಬೇಕು.

 

 

ಐದನೇ ಸುತ್ತು.

ಸದ್ಗುಣ ಹಾಗೂ ವಿಧೇಯಕವಾಗಿರುವ ಮಕ್ಕಳು ತಮಗೆ ಹುಟ್ಟಲಿ ಎಂದು 5ನೇ ಸುತ್ತಿನಲ್ಲಿ ಬೇಡಿಕೊಳ್ಳಲಾಗುತ್ತದೆ. ಮಕ್ಕಳಿಂದ ಜೀವನವು ಯಾವಾಗಲೂ ಸಂತೋಷವಾಗಿರಲಿ. ಏಕಾಂಗಿ ಎನ್ನುವ ಭಾವನೆ ಮೂಡದಿರಲಿ ಎನ್ನುವುದು ಇದರ ಅರ್ಥ.

ಆರನೇ ಸುತ್ತು.

 

 

ಈ ಸುತ್ತಿನಲ್ಲಿ ವಧು ಹಾಗೂ ವರರ ಆರೋಗ್ಯಕರ ಮತ್ತು ಖಾಯಿಲೆ ಮುಕ್ತ ಜೀವನವು ನಮಗೆ ಸಿಗಲಿ ಎಂದು ಬೇಡುತ್ತಾರೆ. ಜೀವನ ಸುಖಮಯವಾಗಿರಲಿ ಪರಸ್ಪರರು ನೋವು  ಮತ್ತು  ನಲಿವುಗಳನ್ನು ಹಂಚಿಕೊಳ್ಳುವುದಾಗಿ ಮಾತು ಕೊಡುತ್ತಾರೆ.

 ಏಳನೆ ಸುತ್ತು ಹಾಗೂ ಅಂತಿಮ ಸುತ್ತು.

ಏಳನೆ ಸುತ್ತು ಅವರಿಬ್ಬರು ಪವಿತ್ರ ಬಂಧನದಲ್ಲಿ ಇರುವುದನ್ನು ತಿಳಿಸುವುದು. ಜೀವನದ ಕೊನೆ ತನಕ ಅವರಿಬ್ಬರೂ ಜೊತೆಯಾಗಿರುವರು ಎಂದು ಈ ಸುತ್ತು ಹೇಳುತ್ತದೆ. ದಂಪತಿ ಪರಸ್ಪರರನ್ನು ಗೌರವಿಸುವುರು ಮತ್ತು ಪೋಷಿಸುವವರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top