fbpx
ಸಮಾಚಾರ

ಪ್ರಧಾನಿ ಮೋದಿಯನ್ನು ಸೂ*ಮಗ ಎಂದು ಅವಾಚ್ಯವಾಗಿ ನಿಂದಿಸಿದ ಸಚಿವ ರೋಷನ್ ಬೇಗ್.

ಪ್ರಧಾನಿ ಮೋದಿಯನ್ನು ಸೂ*ಮಗ ಎಂದು ಅವಾಚ್ಯವಾಗಿ ನಿಂದಿಸಿದ ಸಚಿವ ರೋಷನ್ ಬೇಗ್..

 

 

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಗರಾಭಿವೃದ್ಧಿ, ಮಾಹಿತಿ ಮತ್ತು ಹಜ್​ ಸಚಿವ ರೋಷನ್ ಬೇಗ್ ರೋಷಾವೇಶದ ಮಾತುಗಳನ್ನಾಡಿದ್ದಾರೆ. ಮೋದಿಯನ್ನು ಬೊ*ಮಗ,,ಸೂ*ಮಗ ಎಂದು ಅವಾಚ್ಯವಾಗಿ ನಿಂದಿಸಿರುವುದು ಈಗತೀವ್ರ ಟೀಕೆಗೆ ಗುರಿಯಾಗಿದೆ. ರೋಷನ್ ಅವರ ಈ ನಡೆಗೆ ಮೋದಿ ಅಭಿಮಾನಿಗಳು ತೀವ್ರವಾಗಿ ತಮ್ಮ ಖಂಡನೆಯನ್ನು ವ್ಯಕ್ತಪಡಿಸುತ್ತಿದ್ದಾರೆ…

 

 

ಪುಲಿಕೇಶಿನಗರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಅಧಿಕಾರಕ್ಕೆ ಬಂದಾಗ ಎಲ್ಲರೂ ‘ನಮ್ಮ ಮೋದಿ ನಮ್ಮ ಮೋದಿ’ ಅಂತ ಹೊಗಳುತ್ತಿದ್ದರು.ಆದರೆ ಈಗ ಅಧಿಕಾರಕ್ಕೆ ಕೂಡಿಸಿದ ಜನರೇ ಮೋದಿಯನ್ನು ಬಯ್ಯುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. 500, 1000 ರೂ ನೋಟು ನಿಷೇಧದ ಬಗ್ಗೆ ಮಾತನಾಡುತ್ತಿದ್ದ ರೋಷನ್ ಬೇಗ್, ಪ್ರಧಾನಿ ಮೋದಿ ನೋಟು ನಿಷೇಧ ಮಾಡಿದ್ದಕ್ಕೆ ಅಧಿಕಾರಕ್ಕೆ ತಂದವರೇ ಈ ಸೂ.. ಮಗ ಹೆಂಗ್ ಮಾಡಿಬಿಟ್ಟ’ ಎಂದು ಬೈಯ್ಯುತ್ತಿದ್ದಾರೆಂದು ರೋಷನ್ ಬೇಗ್ ತಮಿಳಿನಲ್ಲಿ ಹೇಳಿದ್ದಾರೆ.

 

 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ ಅವರು, ಸಚಿವ ರೋಷನ್ ಬೇಗ್ ಪ್ರಧಾನಿಯವರ ಬಗ್ಗೆ ಅಶ್ಲೀಲ ಕೆಟ್ಟ ಪದವನ್ನು ಉಪಯೋಗಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ತಕ್ಷಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಪ್ರಧಾನಿ ಬಗ್ಗೆ ಅವಾಚ್ಯ ಶಬ್ದ ಬಳಕೆ ಮಾಡಿದ್ದಕ್ಕೆ ಬೇಗ್ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಹೇಳಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top