fbpx
ಸಮಾಚಾರ

ಜಿಯೋಗೆ ಸೆಡ್ಡುಹೊಡೆಯಲು ಮತ್ತೊಂದು ಟೆಲಿಕಾಂ ಸಂಸ್ಥೆಯೊಂದಿಗೆ ವಿಲೀನ ಮಾಡಿಕೊಂಡ ಏರ್ಟೆಲ್..

ಜಿಯೋಗೆ ಸೆಡ್ಡುಹೊಡೆಯಲು ಮತ್ತೊಂದು ಟೆಲಿಕಾಂ ಸಂಸ್ಥೆಯೊಂದಿಗೆ ವಿಲೀನ ಮಾಡಿಕೊಂಡ ಏರ್ಟೆಲ್..

 

 

ಜಿಯೋ ಸಿಮ್ ಬಂದಾಗಿನಿಂದಲೂ ತತ್ತರಿಸಿ ಹೋಗಿದ್ದ ಉಳಿದ ಟೆಲಿಕಾಂ ಸಂಸ್ಥೆಗಳು ಜಿಯೋಗೆ ಸೆಡ್ಡುಹೊಡೆಯಲು ಒಂದರ ಮೇಲೆಂದು ಆಫರ್ ಗಳನ್ನೂ ನೀಡುತ್ತಾ ಬಂದಿದ್ದವು ಆದರೀಗ ಭಾರತ ಟೆಲಿಕಾಂ ಮಾರುಕಟ್ಟೆಯಲ್ಲಿ ವ್ಯಾಪಿಸುತ್ತಿರುವ ಜಿಯೋ ಪ್ರಭಾವವನ್ನು ಎದುರಿಸಲು ಅತಿದೊಡ್ಡ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ಟೆಲ್ ಕಂಪನಿಯು ಟಾಟಾ ಸಮೂಹದ ಟಾಟಾ ಟೆಲೆಸರ್ವಿಸಸ್ ಮೊಬೈಲ್ ಸೇವಾ ಸಂಸ್ಥೆ ಜೊತೆ ವಿಲೀನವಾಗುತ್ತಿದೆ.

 

 

ತೀವ್ರ ನಷ್ಟದಿಂದಾಗಿ ಟಾಟಾ ಟೆಲಿಸವೀರ್‍ಸಸ್‌ ಅನ್ನು ಮುಚ್ಚಲು ನಿರ್ಧರಿಸಿದ್ದ ಟಾಟಾ ಗ್ರೂಪ್‌, ಟಾಟಾ ಟೆಲಿಸವೀರ್‍ಸಸ್‌ ಕಂಪನಿಯನ್ನು ಭಾರ್ತಿ ಏರ್‌ಟೆಲ್‌ಗೆ ಮರಾಟ ಮಾಡಲು ನಿರ್ಧರಿಸಿದೆ..ಈ ವಿಲೀನದಿಂದ ಟಾಟಾಟೆಲಿಗೆ ಸೇರಿದ 4 ಕೋಟಿ ಮೊಬೈಲ್‌ ಗ್ರಾಹಕರು ಏರ್‌ಟೆಲ್‌ನ ಗ್ರಾಹಕರಾಗಲಿದ್ದು ದೇಶದಾದ್ಯಂತ ಇರುವ ಟಾಟಾ ಟೆಲಿಸವೀರ್‍ಸಸ್‌ ಕಂಪನಿಯ 19 ತೇಲಿ ಕಮ್ಯುನಿಕೇಷನ್ ವಲಯಗಳು ಈಗ ಏರ್‌ಟೆಲ್‌ ವ್ಯಾಪ್ತಿಗೆ ಬರಲಿದೆ..

 

 

“ಟಾಟಾ ಟೆಲಿಸವೀರ್‍ಸಸ್‌ ಕಂಪನಿಯ ಜೊತೆ ವಿಲೀನ ಮಾಡಿಕೊಳ್ಳುವುದರಿಂದ ಮಾರುಕಟ್ಟೆಯಲ್ಲಿನ ನಮ್ಮ ಪಾಲು ಹೆಚ್ಚಲಿದೆ” ಎಂದು ಭಾರ್ತಿ ಏರ್‌ ಟೆಲ್‌ ನ ಅಧ್ಯಕ್ಷ ಸುನೀಲ್‌ ಭಾರ್ತಿರವರು ತಿಳಿಸಿದ್ದಾರೆ. “ಭಾರ್ತಿ ಏರ್‌ಟೆಲ್‌ ಕಂಪನಿಯ ಜೊತೆ ಈ ವಿಲೀನದ ಒಪ್ಪಂದವು ಟಾಟಾ ಸಮೂಹ ಮತ್ತು ಅದರ ಪಾಲುದಾರರ ಪಾಲಿಗೆ ತಕ್ಕಮಟ್ಟಿಗಿನ ಉತ್ತಮ ಪರಿಹಾರವಾಗಿದೆ” ಎಂದು ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ಹೇಳಿದ್ದಾರೆ..

 

 

ಭಾರತ ಟೆಲಿಕಾಂ ಮಾರುಕಟ್ಟೆಯಲ್ಲಿ ವ್ಯಾಪಿಸುತ್ತಿರುವ ಜಿಯೋ ಪ್ರಭಾವವನ್ನು ಎದುರಿಸಲು ಏರ್ಟೆಲ್ ಮತ್ತು ಟಾಟಾ ಟೆಲಿಸರ್ವೀಸ್ ವಿಲೀನವು ಭಾರತ ದೂರ ಸಂಪರ್ಕ ಮಾರುಕಟ್ಟೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಲಿದೆ ಎಂದು ಮಾರುಕಟ್ಟೆ ಪಂಡಿತರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top