fbpx
ಸಮಾಚಾರ

ಎಲ್ಲಾ ವಾಹನಗಳಿಗೂ ಶೀಘ್ರದಲ್ಲೇ ಒಂದೇ ಮಾದರಿಯ ಹೊಸ ನಂಬರ್ ಪ್ಲೇಟ್ ಜಾರಿ..?

ಎಲ್ಲಾ ವಾಹನಗಳಿಗೂ ಶೀಘ್ರದಲ್ಲೇ ಒಂದೇ ಮಾದರಿಯ ಹೊಸ ನಂಬರ್ ಪ್ಲೇಟ್ ಜಾರಿ..?

 

 

ಕೇಂದ್ರ ಸರ್ಕಾರ 2001ರಲ್ಲಿ ಜಾರಿಗೊಳಿಸಿದ್ದ ಸೆಂಟ್ರಲ್ ಮೋಟರ್ ವೆಹಿಕಲ್ ಶಾಸನದ ಪ್ರಕಾರ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಅಳವಡಿಸಬೇಕು ಎಂದು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು ಈ ನಿಯಮವನ್ನು ರಾಜ್ಯದಲ್ಲಿ ಶೀಘ್ರ ಜಾರಿಗೊಳಿಸಲು ಮುಂದಾಗಿದೆ. ಮುಂದೆ ಓದಿ..

 

 

ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿರುವ ರಾಜ್ಯ ಸಾರಿಗೆ ಸಚಿವ ಎಚ್.ಎಂ. ರೇವಣ್ಣನವರು ವಾಹನಗಳ ಮೇಲೆ ಸೂಕ್ತ ಗಮನ ಇಡುವುದಕ್ಕಾಗಿ ಒಂದೇ ಮಾದರಿಯ ಹೊಸ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಅಗತ್ಯವಿರುವ ಸೂಕ್ತ ಕ್ರಮಗಳನ್ನೂ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳುದುಬಂದಿದೆ..

 

 

ಶೀಘ್ರದಲ್ಲಿ ಅಂದರೆ ಒಂದು ವಾರದೊಳಗೆ ಎಲ್ಲ ರೀತಿಯ ವಾಹನಗಳಿಗೆ ಒಂದೇ ಮಾದರಿಯ ಹೊಸ ನಂಬರ್ ಪ್ಲೇಟ್ ಅಳವಡಿಸುವ ವಿಷವಾಗಿ ಆದೇಶ ಬರುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ..ಬಿಳಿ ಬಣ್ಣದ ಪ್ಲೇಟ್ ಮೇಲೆ ಕ್ರಮಬದ್ಧ ಆಕಾರದಲ್ಲಿ ಕಪ್ಪು ಬಣ್ಣದಿಂದ ಅಕ್ಷರಗಳನ್ನು ಮುದ್ರಿಸಬೇಕು. ವಿವಿಧ ಆಕಾರದ ಪ್ಲೇಟ್ ಬಳಸಬಾರದು,, ಹಾಗು ನಂಬರ್ ಪ್ಲೇಟ್‌ನಲ್ಲಿ ಯಾವುದೇ ದೇವರ, ಮಕ್ಕಳ, ಧಾರ್ಮಿಕ ಚಿಹ್ನೆ, ಭಾವಚಿತ್ರಗಳನ್ನು ಮುದ್ರಿಸಬಾರದು ಎಂಬ ನಿಯಮವನ್ನು ಜಾರಿಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top