fbpx
ಭವಿಷ್ಯ

ಶಕುನ ಶಾಸ್ತ್ರ ಮತ್ತು ಓಮನ್ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಘಟನೆಗಳು ಹಣ ಕಾಸಿನ ಲಾಭ ತಂದು ಕೊಡುತ್ತಂತೆ !

ಶಕುನ ಶಾಸ್ತ್ರ ಮತ್ತು ಓಮನ್ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀವು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿರುವ ಮಹಿಳೆ ಅಥವಾ ಕೆಂಪು ಮತ್ತು ಕಂದು ಬಣ್ಣ ಮಿಶ್ರಿತವಿರುವ ಹಸುವನ್ನು ನೋಡಿದರೆ ನೀವು ಬೇಗನೆ ಶ್ರೀಮಂತರಾಗುತ್ತೀರಿ.

 

 

1. ಶಕುನ ಶಾಸ್ತ್ರದ ಪ್ರಕಾರ ನಿಮ್ಮ ಕೈಗಳು ಸತತವಾಗಿ ಕಡಿಯುತ್ತಿದ್ದರೆ ಅಥವಾ ಉರಿ ಬರುತ್ತಿದ್ದರೆ ನಿಮಗೆ ಯಾರಿಂದಲಾದರೂ ಹಣವು ಬರುವ ಸೂಚನೆ ಇದಾಗಿದೆ.ನೀವು ಅದೃಷ್ಟವನ್ನು ಹೊಂದಿ ನಿಮ್ಮ ಬಳಿ ವೇಗವಾಗಿ  ಹಣ ಬರುವುದು ಎಂಬ ಸೂಚನೆ ಇದಾಗಿದೆ.

 

2. ನೀವು ಯಾರಿಗಾದರೂ ಹಣ ಕೊಡುವ ಸಮಯದಲ್ಲಿ ಅಥವಾ ಯಾರಿಂದಲಾದರೂ ಹಣವನ್ನು ತೆಗೆದುಕೊಳ್ಳುವ ಸಮಯದಲ್ಲಿ ನಿಮ್ಮ ಕೈಯಿಂದ ಅಕಸ್ಮಾತಾಗಿ ಹಣ ಜಾರಿ ಕೆಳಗೆ ಬಿದ್ದರೆ ನಿಮಗೆ ಅಧಿಕವಾಗಿ ಯಾವುದೋ ಒಂದು ಮೂಲದಿಂದ ಲಾಭ ಆಗುವುದು.

 

3. ನೀವು ವ್ಯವಹಾರದ ನಿಮಿತ್ತ ಹಣಕಾಸಿಗೆ ಸಂಬಂಧಪಟ್ಟ ಕೆಲಸದ ಮೇರೆಗೆ ಹೊರಗೆ ಹೋಗುವಾಗ ದಾರಿಯಲ್ಲಿ ಹಳದಿ ಬಣ್ಣದ ಬಟ್ಟೆಯನ್ನು ತೊಟ್ಟಿರುವ ಮಹಿಳೆಯು ನಿಮ್ಮ ಮುಂದೆ ಹಾದು ಹೋದರೆ ಅದು ನಿಮಗೆ ಹಣಕಾಸಿನ ಹರಿವು ಹೆಚ್ಚಾಗುವ ಸೂಚನೆ ಎಂದರ್ಥ.

 

 

4.ಕೈಗೆ ಬ್ರೇಸ್ಲೆಟ್ ಹಾಕಿರುವ ಅದರ ಜತೆಗೆ ಹಳದಿ ಬಣ್ಣದ ಬಟ್ಟೆಗಳನ್ನು ತೊಟ್ಟಿರುವ ಯಾರನ್ನಾದರೂ ಗುರುವಾರದ ದಿನ ಕಂಡರೆ ಆಗ ಅದು ಹಣ ಬರುವ ಸೂಚನೆಯನ್ನು ನೀಡುತ್ತಿದೆ ಎಂದರ್ಥ.

 

 

5.ನೀವು ಎಲ್ಲಿಗಾದರೂ ಹೋಗುವಾಗ ಮುಂಗುಸಿಯು ನಿಮ್ಮ ದಾರಿಗೆ ಅಡ್ಡವಾಗಿ ಬಂದರೆ ಅದು ಹಣದ ಹರಿವು ಹೆಚ್ಚಾಗುವುದು  ಎಂಬ ಸೂಚನೆ ಇದಾಗಿದೆ.

 

6. ನೀವು ಶುಕ್ರವಾರದ ದಿನ ದಾರಿಯಲ್ಲಿ ಹೋಗುವಾಗ ಕಂದು ಬಣ್ಣದ ಹಸು ನಿಮ್ಮ ದಾರಿಗೆ ಅಡ್ಡ ಬಂದರೆ ಆಗ ನಿಮಗೆ ಅತಿ ಶೀಘ್ರವಾಗಿ ಯಾವುದೋ ಒಂದು ಮೂಲದಿಂದ ಹಣದ ಆಗಮನ ವಾಗುವುದು.

 

 

7. ನಿಮ್ಮ ಕನಸಿನಲ್ಲಿ ಸಾಗರದ ಮುತ್ತನ್ನು ಕಂಡರೆ ಅಥವಾ ಮುತ್ತಿನಿಂದ ಮಾಡಿರುವ ಕಿರೀಟವನ್ನು ಕಂಡರೆ ಆಗ ಅದು ಹಣಕಾಸಿನ ಹರಿವನ್ನು ಹೆಚ್ಚಿಗೆ ಮಾಡುವ ಸೂಚನೆಯಾಗಿದೆ.

 

 

8. ನಿಮ್ಮ ಕನಸಿನಲ್ಲಿ ನಿಮಗೆ ಬಿಳಿಯ ಹಾವು ಬಂದು ನಿಮ್ಮ ಬಲಗೈಗೆ ಕಚ್ಚಿದರೆ ಅದು ಹಣಕಾಸಿನ ಹರಿವನ್ನು ಏರಿಕೆ ಮಾಡುವ ಶುಭ ಸೂಚನೆಯಾಗಿದೆ.

 

 

9.ನಿಮ್ಮ ಕನಸಿನಲ್ಲಿ ಯಾರಾದರೂ ಬಂದು ಯಾರಿಗಾದರೂ ಚೆಕ್ ಕೊಡುತ್ತಿರುವ ಹಾಗೆ ಅಥವಾ ಚೆಕ್ ಗೆ ಸಹಿ ಹಾಕುತ್ತಿರುವ ಹಾಗೆ ಕನಸು ಕಂಡರೆ ನೀವು ನಿಜವಾಗಿಯೂ ಶೀಘ್ರವಾಗಿ ಶ್ರೀಮಂತರಾಗುತ್ತೀರಿ ಎಂದರ್ಥ.

 

10.ಸಂಪೂರ್ಣವಾಗಿ ಹಣ್ಣಾಗಿರುವ ಕಿತ್ತಳೆ ಹಣ್ಣು ಅಥವಾ ಪೂರ್ತಿಯಾಗಿ ಬೆಳೆದು ಜಮೀನಿನಲ್ಲಿ ನಿಂತಿರುವ  ಗೋಧಿಯ ಬೆಳೆಯನ್ನು ಕಂಡರೆ ನಿಮ್ಮ ಹಣದ ಹರಿವು ಹೆಚ್ಚಾಗಿ ಅನೇಕ ರೀತಿಯಲ್ಲಿ ಲಾಭವಾಗುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top