fbpx
ಸಮಾಚಾರ

ಮೋದಿ ಕುರಿತು ಅವಾಚ್ಯ ಶಬ್ದ ಬಳಕೆ: ಟ್ವಿಟರ್ ನಲ್ಲಿ ಕ್ಷಮೆಯಾಚಿಸಿದ ಸಚಿವ ರೋಷನ್ ಬೇಗ್..

ಮೋದಿ ಕುರಿತು ಅವಾಚ್ಯ ಶಬ್ದ ಬಳಕೆ: ಟ್ವಿಟರ್ ನಲ್ಲಿ ಕ್ಷಮೆಯಾಚಿಸಿದ ಸಚಿವ ರೋಷನ್ ಬೇಗ್..

 

 

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಗರಾಭಿವೃದ್ಧಿ, ಮಾಹಿತಿ ಮತ್ತು ಹಜ್​ ಸಚಿವ ರೋಷನ್ ಬೇಗ್ ಅವಾಚ್ಯ ಶಬ್ದಗಳನ್ನು ಬಲಿಸಿರುವ ಬಗ್ಗೆ ಟ್ವಿಟರ್ ನಲ್ಲಿ ಕ್ಷಮೆ ಕೇಳಿದ್ದಾರೆ. ಈ ಕುರಿತು ನಾಲ್ಕು ಟ್ವೀಟ್ ಮಾಡಿರುವ ಸಚಿವ ರೋಷನ್ ಬೇಗ್ ಪ್ರಧಾನಿಯನ್ನು ನಿಂದಿಸುವುದು ನನ್ನ ಉದ್ದೇಶವಲ್ಲ ಎಂದು ಹೇಳಿದ್ದಾರೆ..

 

 

500, 1000 ರೂ ನೋಟು ನಿಷೇಧದ ಬಗ್ಗೆ ಮಾತನಾಡುತ್ತಿದ್ದ ರೋಷನ್ ಬೇಗ್, ಪ್ರಧಾನಿ ಮೋದಿ ನೋಟು ನಿಷೇಧ ಮಾಡಿದ್ದಕ್ಕೆ ಅಧಿಕಾರಕ್ಕೆ ತಂದವರೇ ಈ ಸೂ.. ಮಗ ಹೆಂಗ್ ಮಾಡಿಬಿಟ್ಟ’ ಎಂದು ಬೈಯ್ಯುತ್ತಿದ್ದಾರೆಂದು ರೋಷನ್ ಬೇಗ್ ತಮಿಳಿನಲ್ಲಿ ಹೇಳಿದ್ದರು. ಈ ಬಗ್ಗೆ ಟ್ವಿಟರ್ ನಲ್ಲಿ “ನಮ್ಮ ದೇಶದ ಪ್ರಧಾನಿ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಬಿಜೆಪಿ ಪಕ್ಷಕ್ಕೆ ಮಾತ್ರ ಪ್ರಧಾನಮಂತ್ರಿಯಲ್ಲ, ಅವರು ನಮ್ಮ ದೇಶದ ಪ್ರಧಾನಮಂತ್ರಿಯಾಗಿದ್ದಾರೆ.. ತಮಿಳು ಭಾಷೆಯಲ್ಲಿ ನಾನು ಅಷ್ಟೇನು ಪ್ರಬಲ ಅಲ್ಲ, ನಾನು ಹೆಚ್ಚಿನ ಜನರು ವಿಶೇಷವಾಗಿ ವ್ಯಾಪಾರಿಗಳು GST ಮತ್ತು demonitization ನಂತರ ಹೇಳುವಮಾತುಗಳನ್ನು ಉಲ್ಲೇಖಿಸಿದೆ”.

 

 

“ನಾನು ಎಂದೂ ಅಂಥ ಪದಗಳನ್ನು ಬಳಸಿಲ್ಲ,ಬಳಸುವುದೂ ಇಲ್ಲ,, ಅದರಲ್ಲೂ ನಮ್ಮ ಪ್ರಧಾನಿಯ ಮೇಲೆ ಅವನ್ನು ಪ್ರಯೋಗಿಸಿಲ್ಲ. ಬಿಜೆಪಿ ಪಕ್ಷಕ್ಕೆ ನನ್ನ ವಿರುದ್ಧ ಮಾತನಾಡುವುದಕ್ಕೆ ಯಾವ ವಿಷಯವೂ ಇಲ್ಲ, ಹಾಗಾಗಿ ನನ್ನನ್ನು ಟಾರ್ಗೆಟ್ ಮಾಡಿ ಈ ವಿವಾದ ಸೃಷ್ಟಿಸುತ್ತಿದೆ,, ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಅವರಲ್ಲಿ ನಾನು ಕ್ಷಮೆಯನ್ನು ಕೇಳುತ್ತಿದ್ದೇನೆ” ಎಂದು ಸಚಿವ ರೋಷನ್ ಬೇಗ್ ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top