fbpx
ಸಮಾಚಾರ

18 ವರ್ಷದೊಳಗಿನ ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆ ಅತ್ಯಾಚಾರಕ್ಕೆ ಸಮ: ಸುಪ್ರೀಂ ಕೋರ್ಟ್..

18 ವರ್ಷದೊಳಗಿನ ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆ ಅತ್ಯಾಚಾರಕ್ಕೆ ಸಮ: ಸುಪ್ರೀಂ ಕೋರ್ಟ್..

 

 

18 ವರ್ಷದೊಳಗಿನ ಪತ್ನಿಯ ಲೈಂಗಿಕ ಕ್ರಿಯೆಯನ್ನು ‘ಅತ್ಯಾಚಾರ‘ ಎಂದು ಪರಿಗಣಿಸಲಾಗುವುದು ಎಂದು ಸುಪ್ರೀಂಕೋರ್ಟ್ ಬುಧವಾರ ಐತಿಹಾಸಿಕ ತೀರ್ಪು ನೀಡಿದೆ. 15 ರಿಂದ 18 ವರ್ಷದೊಳಗಿನ ತಮ್ಮ ಹೆಂಡತಿಯ ಜೊತೆ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರವೇ ಆಗುತ್ತದೆ ಮತ್ತು ಅದು ಶಿಕ್ಷಾರ್ಹ ಅಪರಾಧ ಎಂದು ಸುಪ್ರೀಂಕೋರ್ಟ್ ಹೇಳಿದೆ..

 

 

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ “18 ವರ್ಷದೊಳಗಿನ ತಮ್ಮ ಅಪ್ರಾಪ್ತ ಹೆಂಡತಿಯ ಜೊತೆ ಲೈಂಗಿಕ ಕ್ರಿಯೆ ನಡೆಸುವುದು ಶಿಕ್ಷಾರ್ಹ ಅಪರಾಧ,,ಇಂತಹ ಸಂಧರ್ಭಗಳಲ್ಲಿ ಅತ್ಯಾಚಾರ ನಡೆದು ಒಂದು ವರ್ಷದೊಳಗಾಗಿ ದೂರು ದಾಖಲಿಸಬೇಕು” ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

 

 

ಇದೇ ವೇಳೆ ಸಮ್ಮತಿಯ ಲೈಂಗಿಕ ಕ್ರಿಯೆಗಾಗಿ ವಯೋಮಿತಿ ಇಳಿಕೆ ಅಥವಾ ಸಡಲಿಕೆ ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಮದನ್ ಲೋಕೂರ್‌ ಮತ್ತು ದೀಪಕ್‌ ಗುಪ್ತಾ ಅವರ ಪೀಠಸ್ಪಷ್ಟಪಡಿಸಿದ್ದಾರೆ..ದೇಶದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹ ಮತ್ತು ಅತ್ಯಾಚಾರ ತಡೆಯುವ ನಿಟ್ಟಿನಲ್ಲಿ ಈ ತೀರ್ಪು ನೀಡಲಾಗಿದೆ” ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಬಣ್ಣಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top