fbpx
ಕರ್ನಾಟಕ

ಅಪ್ಪನ ಬಗ್ಗೆ ಮನದಾಳದಲ್ಲಿ ತುಂಬಿಕೊಂಡಿದ್ದ ಮಾತನ್ನು ಹೊರ ಹಾಕಿದ ನಿಖಿಲ್ ಕುಮಾರಸ್ವಾಮಿ..

ಅಪ್ಪನ ಬಗ್ಗೆ ಮನದಾಳದಲ್ಲಿ ತುಂಬಿಕೊಂಡಿದ್ದ ಮಾತನ್ನು ಹೊರ ಹಾಕಿದ ನಿಖಿಲ್ ಕುಮಾರಸ್ವಾಮಿ..

ಹೆತ್ತವರ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ.. ನಾವು ಸಣ್ಣವರಿದ್ದಾಗ ಕೈ ತುತ್ತು ಕೊಟ್ಟು ಬೆಳೆಸೊ ಅಮ್ಮ.. ಕೈ ಹಿಡಿದು ನಡೆಸೊ ಅಪ್ಪ.. ಇವರ ಋಣ ತೀರಿಸಲು ಸಾಧ್ಯವೇ??

ಹೌದು ಇತ್ತೀಚೆಗೆ ಅನಾರೋಗ್ಯದ ಕಾರಣ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಆಸ್ಪತ್ರೆಗೆ ದಾಖಲಾಗಿದ್ದ ವಿಷಯ ಎಲ್ಲರಿಗೂ ತಿಳಿದೇ ಇದೆ.. ಈಗ ಮಾನ್ಯ ಕುಮಾರಸ್ವಾಮಿಯವರು ಚೇತರಿಸಿಕೊಳ್ಳುತಿದ್ದಾರೆ..

 

 

ಈ ಕುರಿತು ನಿಖಿಲ್ ರವರು ತಮ್ಮ ಫೇಸ್ ಬುಕ್ ನಲ್ಲಿ ಅಪ್ಪನ ಆರೋಗ್ಯದ ಬಗ್ಗೆ ಪೋಸ್ಟ್ ಒಂದನ್ನು ಅಪ್ಡೇಟ್ ಮಾಡಿದ್ದಾರೆ.. ಕುಮಾರಸ್ವಾಮಿಯವರು ಆರೋಗ್ಯವಾಗಿರುವ ವಿಚಾರವನ್ನು ಇಲ್ಲಿ ತಿಳಿಸಿ ಜನರಿಗೆ ಅವರ ಕುಟುಂಬ ಋಣಿಯಾಗಿರುವುದಾಗಿ ತಿಳಿಸಿದ್ದಾರೆ.. ಹಾಗೆ ಭಾವುಕರಾಗಿ ಪೋಸ್ಟ್ ಹಾಕಿರುವ ನಿಖಿಲ್ ರವರ ಮಾತಲ್ಲಿ ತಂದೆ ತಾಯಿಯ ಬಗ್ಗೆ ಅವರಿಗಿರಿವ ಪ್ರೀತಿ ಕಾಳಜಿ ಎದ್ದು ಕಾಣುತ್ತದೆ.. ತಮ್ಮ ಕುರುಕ್ಷೇತ್ರ ಚಿತ್ರದ ಶೂಟಿಂಗ್ ನಡುವೆಯು ತಮ್ಮ ತಂದೆಯ ಆರೈಕೆಯಲ್ಲಿ ತೊಡಗಿದ್ದಾರೆ..

ತಂದೆ ತಾಯಿಯನ್ನು ನಡೆದಾಡುವ ದೇವರೆಂದು ಹೇಳಿರುವ ಅವರು ಅಪ್ಪ ಅಮ್ಮನಿಗಾಗಿ ಸಮಯವನ್ನು ಮೀಸಲಿಡಿ ಎಂದು ಕೇಳಿ ಕೊಂಡಿದ್ದಾರೆ.. ನಮ್ಮ ಒತ್ತಡ ಪೂರ್ವಕ ಜೀವನದಲ್ಲಿ ಅಪ್ಪ ಅಮ್ಮನೊಂದಿಗೆ ಸಮಯ ಕಳೆಯುವುದನ್ನು ಮರೆಯಬೇಡಿ ಎಂದಿದ್ದಾರೆ.. ಎಷ್ಟೋ‌ ಮಕ್ಕಳಿಗೆ ಅಪ್ಪ ಅಮ್ಮನೇ ಇರುವುದಿಲ್ಲ ಹಾಗಾಗಿ ನಮ್ಮ ಕೈಲಾದಷ್ಟ ಅವರೊಂದಿಗೆ ಸಮಯ ಕಳೆಯಿರಿ.. ಅಪ್ಪ ಅಮ್ಮ ನಮ್ಮನ್ನು ಸ್ವಾವಲಂಭಿಗಳನ್ನಾಗಿ ಮಾಡಿರುತ್ತಾರೆ ನಮ್ಮ ಬದುಕನ್ನು ರೂಪಿಸಿಕೊಟ್ಟಿರುತ್ತಾರೆ..

 

 

ನಮ್ಮಿಂದ ಯಾವುದೇ ಅಪೇಕ್ಷೆ ಅವರಿಗಿರುವುದಿಲ್ಲ.. ಅವರ ಪ್ರೀತಿ ವಾತ್ಸಲ್ಯ ಅಜರಾಮರ.. ಹೆತ್ತವರ ಸೇವೆ ಮಕ್ಕಳ ಕರ್ತವ್ಯ ಎಂದು ಕೊಂಡಿರುವ ಅವರು ತಂದೆ ತಾಯಿಯನ್ನು ಗೌರವಿಸಿ ಅವರೊಂದಿಗೆ ಹೆಚ್ಚು ಸಮಯ ವಿನಿಯೋಗಿಸಿ ಎಂದಿದ್ದಾರೆ..

ಏನೇ ಆದರೂ ದೊಡ್ಡ ದೊಡ್ಡ ರಾಜಕಾರಣಿಗಳ ಮಕ್ಕಳು ಖರ್ಚು ಮಾಡಲು ಹಣ ಓಡಾಡಲು ಒಂದು ಐಶಾರಾಮಿ ಕಾರೊಂದಿದ್ದರೆ ಸಾಕು ಮೋಜು ಮಾಡಲು ಇಳಿಯುತ್ತಾರೆ ಇಂತವರ ನಡುವೆ ನಿಖಿಲ್ ಭಿನ್ನವೇ ಸರಿ.. ಒಬ್ಬ ಜವಬ್ದಾರಿಯುತ ಮಗನಾಗಿ ತಮ್ಮ ಒತ್ತಡದ ಕೆಲಸದ ನಡುವೆ ಅಪ್ಪನ ಕಾಳಜಿ ಮಾಡುತ್ತಿರುವ ಇವರು ಹೆತ್ತವರ ಬಗ್ಗೆ ಇಟ್ಟುಕೊಂಡಿರುವ ಅಭಿಮಾನ ನಿಜಕ್ಕೂ ಗ್ರೇಟ್..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top