fbpx
ಮನೋರಂಜನೆ

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಈ ಜನಸಾಮಾನ್ಯ ಸ್ಪರ್ಧಿ ತಿನ್ನೋಕೆ ಊಟವಿಲ್ಲದೆ ಒಮ್ಮೆ ಭಿಕ್ಷೆ ಬೇಡಿದ್ದರಂತೆ..!

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಈ ಜನಸಾಮಾನ್ಯ ಸ್ಪರ್ಧಿ ತಿನ್ನೋಕೆ ಊಟವಿಲ್ಲದೆ ಒಮ್ಮೆ ಭಿಕ್ಷೆ ಬೇಡಿದ್ದರಂತೆ..!

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಪ್ರಾರಂಭವಾಗಿದ್ದು 100 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ‘ಬಿಗ್ ಬಾಸ್’ ಮನೆಯೊಳಗೆ ಎಂದಿನಂತೆ ಸೆಲೆಬ್ರಿಟಿಗಳು ಎಂಟ್ರಿ ಪಡೆದ್ದಾರೆ. ವಿಶೇಷವಾಗಿ ಈ ಬಾರಿ ಜನ ಸಾಮಾನ್ಯರಿಗೂ ಅವಕಾಶ ನೀಡಲಾಗಿದೆ..ಈ ಬಾರಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ..

 

 

ವಿಶೇಷ ಏನಪ್ಪಾ ಅಂದರೆ ಜನ ಸಾಮಾನ್ಯ ಖೋಟಾದಲ್ಲಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿರುವ ಅಭ್ಯರ್ಥಿಯೊಬ್ಬರು ಒಂದು ಕಾಲದಲ್ಲಿ ಭಿಕ್ಷೆ ಬೇಡಿದ್ದರಂತೆ. ಹಾಗಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ..ನರಸೀಪುರ ಮೂಲದ ದಿವಾಕರ್ ಎಂಬ ಸೇಲ್ಸ್ ಮ್ಯಾನ್ ಕಳೆದ ಒಂಭತ್ತು ವರ್ಷಗಳಿಂದ ಸೇಲ್ಸ್ ಮ್ಯಾನ್ ಕೆಲಸವನ್ನು ಮಾಡ್ತಿದ್ದಾರೆ. “ಹೊಟ್ಟೆಗೆ ಊಟವಿಲ್ಲದೆ ತುಂಬಾ ಹಸುವಾಗುತ್ತಿದ್ದಾಗ ಭಿಕ್ಷೆಬೇಡಿದ್ದೆ..ಹಾಗಾಗಿ ಬಡವರಿಗೆ ಭಿಕ್ಷುಕರಿಗೆ ಸಹಾಯ ಮಾಡುವುದು ಎನ್ನುವುದು ನನ್ನ ಆಸೆ ” ಎಂದು ದಿವಾಕರ್ ಹೇಳಿದ್ದಾರೆ..

 

 

 

 

ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದವರು:

ಜಯ ಶ್ರೀನಿವಾಸನ್‌ (ಸಂಖ್ಯಾ ಜ್ಯೋತಿಷಿ):
ಮೇಘಾ,(ಜನಸಾಮಾನ್ಯೆ)
ದಯಾಳ್ ಪದ್ಮನಾಭ (ನಿರ್ದೇಶಕ)
ಸಿಹಿ ಕಹಿ ಚಂದ್ರು (ಹಿರಿಯ ನಟ),
ಶ್ರುತಿ ಪ್ರಕಾಶ್,(ನಿರೂಪಕಿ, ನಟಿ)
ಅನುಪಮಾ ಗೌಡ (ನಟಿ),
ರಿಯಾಜ್‌ ಭಾಷಾ,(ಜನಸಾಮಾನ್ಯ, ನಿರೂಪಕ ಮತ್ತು ಆರ್.ಜೆ)
ನಿವೇದಿತಾ ಗೌಡ,(ಜನಸಾಮಾನ್ಯ)
ಸಮೀರ್ ಆಚಾರ್ಯ (ಜ್ಯೋತಿಷಿ, ಜನಸಾಮಾನ್ಯ),
ಕಾರ್ತಿಕ್ ಜಯರಾಮ್‌ (ನಟ),
ಆಶಿತಾ ಚಂದ್ರಪ್ಪ, (ಜನ ಸಾಮಾನ್ಯ)
ದೀವಾಕರ್ (ಸೆಲ್ಸ್‌ಮನ್‌, ಜನಸಾಮಾನ್ಯ ),
ತೇಜಸ್ವಿನಿ ಪ್ರಕಾಶ್‌ (ನಟಿ),
ಚಂದನ್‌ ಶೆಟ್ಟಿ (ಹಾಡುಗಾರ),
ಸುಮಾ (ಮ್ಯಾಜಿಸಿಯನ್‌),
ಜಗನ್‌ (ನಟ)…
ಸೀಸನ್ 4ಕ್ಕಿಂತಲೂ ಈ ಬಾರಿಯ ಬಿಗ್ ಬಾಸ್ ಮನೆ ಸಖತ್ ಕಲರ್ ಫುಲ್ ಆಗಿದ್ದು,, ಈ ಭಾರಿ ಬಿಗ್ ಬಾಸ್ ಕಾರ್ಯಕ್ರಮವು ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರತಿದಿನ ರಾತ್ರಿ 8ಗಂಟೆಗೆ ಪ್ರಸಾರವಾಗಲಿದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top