fbpx
ಮನೋರಂಜನೆ

ಬಹುನಿರೀಕ್ಷಿತ ಕೆ.ಜಿ.ಎಫ್ ಚಿತ್ರ ಎರಡು ಪಾರ್ಟ್ ಗಳಲ್ಲಿ ಬರಲಿದೆ..!

ಬಹುನಿರೀಕ್ಷಿತ ಕೆ.ಜಿ.ಎಫ್ ಚಿತ್ರ ಎರಡು ಪಾರ್ಟ್ ಗಳಲ್ಲಿ ಬರಲಿದೆ..!

 

 

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆ.ಜಿ.ಎಫ್ ಚಿತ್ರದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ..ರಾಜಾಮೌಳಿಯ ಬಾಹುಬಲಿ ರಾಮ್ ಗೋಪಾಲ್ ವರ್ಮಾನ ರಕ್ತಚರಿತ್ರ ಚಿತ್ರಗಳಂತೆ ಕನ್ನಡದ ಕೆ.ಜಿ.ಎಫ್ ಚಿತ್ರವೂ ಕೂಡ ಎರಡು ಪಾರ್ಟ್ ಗಳಲ್ಲಿ ಬರುತ್ತದೆಯಂತೆ.. ಮುಂದೆ ಓದಿ

 

 

ಚಿತ್ರದ ಚಿತ್ರೀಕರಣವು ಕಳೆದ ಕೆಲವು ತಿಂಗಳುಗಳಿಂದ ಸರಾಗವಾಗಿ ಮುಂದುವರೆದಿದೆ. ಚಿತ್ರತಂಡದ ಆಪ್ತ ವಲಯದಿಂದ ಬಂಡ ಮಾಹಿತಿಯ ಪ್ರಕಾರ ಕೆ.ಜಿ.ಎಫ್ ಚಿತ್ರವು ಎರಡು ಭಾಗಗಳಲ್ಲಿ ಬರಲಿದೆಯಂತೆ.. ಒಂದೇ ಭಾಗದಲ್ಲಿ ಚಿತ್ರ ಮಾಡಿದರೆ ಚಿತ್ರದ ಅವಧಿ ಜಾಸ್ತಿಯಾಗುವ ಕಾರಣ ಎರಡು ಭಾಗಗಳಲ್ಲಿ ಚಿತ್ರ ಮೂಡಿಬರುತ್ತಿದೆ.. ಒಂದು ಉತ್ತಮ ಕತೆಯನ್ನು ಸಿನಿಮಾ ಮಾಡಲು ದೊಡ್ಡ ಬಜೆಟ್ ನಲ್ಲಿ ಸಿನಿಮಾ ಮಾಡುತ್ತಿರುವಾಗ ಒಂದೇ ಚಿತ್ರದಲ್ಲಿ ಸಂಪೂರ್ಣವಾಗಿ ನ್ಯಾಯ ಒದಗಿಸಲು ಸಾಧ್ಯವಿಲ್ಲ ಹಾಗಾಗಿ ಎರಡು ಭಾಗಗಳಲ್ಲಿ ಚಿತ್ರ ಮೂಡಿಬರಲಿದೆ ಎಂದು ಚಿತ್ರ ತಂಡ ತಿಳಿಸಿದೆ.

 

 

ಉಗ್ರಂ ಚಿತ್ರದ ಖ್ಯಾತಿಯ ಪ್ರಶಾಂತ್ ನೀಲ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ಶ್ರೀನಿಧಿ ಶೆಟ್ಟಿ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್ ವಿಜಯ್ ಕಿರಂಗದೂರ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಅವರ ಸಂಗೀತವಿದೆ ಮತ್ತು ಭುವನ್ ಗೌಡ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ 1970ರ ದಶಕದ ಕಥೆಯಿದೆಯಂತೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top