fbpx
ಸಮಾಚಾರ

2019ರ ನಂತರ ಸೇನೆಗೆ ಬೇಕಾದ ಮದ್ದು ಗುಂಡುಗಳು ಭಾರತದಲ್ಲೆ ಉತ್ಪಾದಿಸಲಾಗುವುದು – ರಕ್ಷಣಾ ಖಾತೆ ಸಹಾಯಕ ಸಚಿವ ಸುಭಾಶ್ ಭಾಮ್ರೆ

ಸೇನೆಗೆ 2019ರ ಬಳಿಕ ಪೂರೈಕೆಯಾಗಲಿರುವ ಮದ್ದು ಗುಂಡುಗಳು ಭಾರತದಲ್ಲಿ ಉತ್ಪಾದಿಸಿದ್ದಾಗಿರಲಿದೆ ಎಂದು ರಕ್ಷಣಾ ಖಾತೆ ಸಹಾಯಕ ಸಚಿವ ಸುಭಾಶ್ ಭಾಮ್ರೆ ತಿಳಿಸಿದ್ದಾರೆ.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಸ್ವಾವಲಂಬಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಪ್ರಯತ್ನಿಸುತ್ತಿದೆ ಎಂದರು. ನಮ್ಮ ಮುಖ್ಯ ಗುರಿ ಮೇಕ್ ಇನ್ ಇಂಡಿಯಾ. ಈ ಅಭಿಯಾನದ ಮೂಲಕ ರಕ್ಷಣಾ ಸಾಮಗ್ರಿ ಉತ್ಪಾದನೆಯೂ ಕೂಡ ನಮ್ಮ ದೇಶದಲ್ಲೇ ಆಗಿ ಸ್ವಾವಲಂಬನೆ ಇರಲು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಿದ್ದಾರೆ ಎಂದು ಭಾಮ್ರೆ ಅವರು ಹೇಳಿದರು.

ದೇಶೀ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸಲಾಗುವುದು. ವಿದೇಶಗಳಿಂದ ತಂತ್ರಜ್ಞಾನ ಆಮದು ಮಾಡಿಕೊಂಡು ಜಂಟಿಯಾಗಿ ಉತ್ಪಾದಿಸುವ ಮೂಲಕ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಜಬಲ್‌ಪುರಕ್ಕೆ ಒಂದು ದಿನ ಭೇಟಿಗಾಗಿ ಆಗಮಿಸಿದ ಭಾಮ್ರೆ, ಕೇಂದ್ರ ಭದ್ರತಾ ಸಂಸ್ಥೆಗೆ ಆಗಮಿಸಿ ಪರಿಶೀಲನೆ ನಡೆಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top