fbpx
ಸಮಾಚಾರ

ಗೋ ರಕ್ಷಣೆಗೆ ಮುಂದಾದ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ !!

ಗೋ ರಕ್ಷಣೆಗೆ ಮುಂದಾದ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ !!

 

 

ಶುಕ್ರವಾರ ರಾತ್ರಿ ಬೆಂಗಳೂರಿನ ತಲಘಟ್ಟಪುರ ಬಳಿಯ ಟಿಪ್ಪು ಸರ್ಕಲ್ ಖಸಾಯಿಖಾನೆ ಬಳಿ ಮಹಿಳಾ ಟೆಕ್ಕಿ ಮೇಲೆ ನೂರಕ್ಕೂ ಹೆಚ್ಚು ಖಸಾಯಿಖಾನೆ ಹೊಂದಿರುವವರಿಂದ ಮಾರಣಾಂತಿಕ ಹಲ್ಲೆ ನಡೆಸಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

 

 

ಸ್ಥಳದಲ್ಲಿ ಇಸ್ಲಾಮಿಕ್ ಜಿಹಾದಿಗಳು ಅಕ್ರಮವಾಗಿ ನಡೆಯುತ್ತಿದ್ದ ಗೋಹತ್ಯೆಯ ಬಗ್ಗೆ ಟೆಕ್ಕಿ ಪೋಲೀಸರಿಗೆ ದೂರು ನೀಡಿದ್ದರು. ಇದಕ್ಕಾಗಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎನ್ನಲಾಗುತ್ತಿದೆ.

ಹಲ್ಲೆಗೊಳಗಾದ ಮಹಿಳೆಯನ್ನು ಪ್ರತಿಷ್ಠಿತ ಸಾಪ್ಟ್ ವೇರ್ ಕಂಪನಿಯಲ್ಲಿ ಸೀನಿಯರ್ ಅಧಿಕಾರಿಯಾಗಿರುವ ನಂದಿನಿ ಎಂದು ಗುರುತಿಸಲಾಗಿದೆ. ಗೋಹತ್ಯೆ ನಡೆಯುತ್ತಿರುವ ಸ್ಥಳ ತೋರಿಸಲು ಮಹಿಳೆ ಇಬ್ಬರು ಪೊಲೀಸ್ ಪೇದೆಗಳೊಂದಿಗೆ ತೆರಳಿದ್ದು, ಈ ಸಂದರ್ಭದಲ್ಲಿ ಅಲ್ಲಿದ್ದ 100 ಕ್ಕೂ ಹೆಚ್ಚು ಜನರು ಮಹಿಳೆಯ ಮೇಲೆ ಮುಗಿಬಿದ್ದು ಹಲ್ಲೆಗೆ ಮುಂದಾಗಿದ್ದಾರೆ.

 

 

ಇದನ್ನು ನೋಡಿದ ಪೋಲೀಸ್ ಪೇದೆಗಳು ಮಹಿಳೆಯನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದು, ನಂತರ ಮಹಿಳೆಯ ಮೇಲೆ 100ಜನ ಮನ ಬಂದಂತೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲ್ಲೆ ನಡೆಸಿದ ಕೆಲವರು ಪಾಕಿಸ್ತಾನದ ಪರ ಘೋಷಣೆಯನ್ನೂ ಕೂಗಿದ್ದಾರೆ ಎಂದು ಮಹಿಳೆ ದೂರಿದ್ದು. ತಲಘಟ್ಟಪುರ ಪೋಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 

 

ಇಂದು ಹಿಂದೂ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡೋವಾಗ ಹೆದರಿಕೆಯಿಂದ ಓಡಾಡೋ ಪರಿಸ್ಥಿತಿ ನಿರ್ಮಾಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top