fbpx
ಮನೋರಂಜನೆ

ಬಿಗ್’ಬಾಸ್ ಮನೆಯಿಂದ ಹೊರಹೋಗಲು ಮೊದಲ ವಾರವೇ ಏಳು ಜನ ನಾಮಿನೇಟ್..!

ಬಿಗ್’ಬಾಸ್ ಮನೆಯಿಂದ ಹೊರಹೋಗಲು ಮೊದಲ ವಾರವೇ ಏಳು ಜನ ನಾಮಿನೇಟ್..!

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಪ್ರಾರಂಭವಾಗಿದ್ದು ಆರಂಭದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಸೆಲೆಬ್ರೆಟಿಗಳ ಜೊತೆ ಜನಸಾಮಾನ್ಯರು ಸ್ಪರ್ಧಿಗಳಾಗಿರುವ ಕಾರ್ಯಕ್ರಮದಲ್ಲಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ..ಕಾರ್ಯಕ್ರಮದ ಮೊದಲ ದಿನವೇ ಸ್ಪರ್ಧಿಗಳಿಗೆ ನಾಮಿನೇಷನ್ ಮೂಲಕ ಬಿಗ್ ಬಾಸ್ ಶಾಕ್ ನೀಡಿದ್ದಾರೆ..

 

 

ಬಿಗ್ ಬಾಸ್ ಮನೆಯಿಂದ ಈವಾರ ಹೊರಗಡೆ ಹೋಗಲು ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯ ಬರೋಬ್ಬರಿ 7 ಜನ ಸ್ಪರ್ದಿಗಳು ನಾಮಿನೇಟ್ ಆಗಿದ್ದಾರೆ..ಮನೆಯ ಎಲ್ಲಾ ಸದಸ್ಯರು ವೋಟಿಂಗ್ ಮೂಲಕ 6 ಜನ ಸ್ಪರ್ದಿಗಳನ್ನು ನಾಮಿನೇಟ್ ಮಾಡಿದರೆ.. ಮೊದಲ ವಾರದ ಕ್ಯಾಪ್ಟನ್ ಆಗಿರುವ ಅನುಪಮಾ ಗೌಡ ಅವ್ರು ಒಬ್ಬ ಸ್ಪರ್ಧಿಯನ್ನು ನಾಮಿನೇಟ್ ಮಾಡಿದ್ದಾರೆ.. ಮುಂದೆ ಓದಿ

 

 

ದಿವಾಕರ್ ರವರಿಗೆ 7 ವೋಟ್ ಗಳು ಬಿದ್ದರೆ ಜಗನ್ನಾಥ್ ಅವರಿಗೆ 6 ವೋಟ್ ಗಳು ಬಿದ್ದಿವೆ. ಕಾರ್ತಿಕ್, ಮೇಘ, ಜಯಶ್ರೀನಿವಾಸನ್, ಸುಮಾರವರಿಗೆ ತಲಾ ಮೂರು ಮತಗಳು ಬಿದ್ದಿವೆ.. ಮೊದಲವಾರ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಕ್ಯಾಪ್ಟನ್ ಅನುಪಮಾ ಗೌಡ ರವರು ನಿವೇದಿತಾ ಗೌಡ ಅವರನ್ನು ನೇರ ನಾಮಿನೇಟ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಜನಸಾಮಾನ್ಯರನ್ನು ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಗೆ ಕಳುಹಿಸಿದ ಮೊದಲ ವಾರವೇ ನಾಮಿನೇಷನ್ ಪ್ರಕ್ರಿಯೆಯಲ್ಲಿ, ‘ಬಿಗ್ ಬಾಸ್’ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಏಳು ಸ್ಪರ್ಧಿಗಳ ಪೈಕಿ ನಾಲ್ಕು ಜನ ‘ಸಾಮಾನ್ಯರೇ ಇದ್ದಾರೆ…

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top