fbpx
ದೇವರು

ದೀಪಾವಳಿಯ ದಿನ ಲಕ್ಷ್ಮಿ ಪೂಜೆ ಈ ತರ ಮಾಡಿದ್ರೆ ಮನೆ ಕಷ್ಟಗಳು ದೂರವಾಗಿ ಧನಲಾಭ ಆಗುತ್ತೆ ಅಂತ ಶಾಸ್ತ್ರದಲ್ಲಿ ಹೇಳಿದ್ದಾರೆ

ದೀಪಾವಳಿಯ ದಿನ ಲಕ್ಷ್ಮಿ ಪೂಜೆಯನ್ನು ಹೇಗೆ ಮಾಡಬೇಕು ?

 

 

ಇದೇ ಗುರುವಾರ ಅಕ್ಟೋಬರ್  ಹತ್ತೊಂಬತ್ತನೇ ತಾರೀಖಿನಂದು  ಅಮಾವಾಸ್ಯೆ ಅಂದರೆ ದೀಪಾವಳಿ ಹಬ್ಬ ಲಕ್ಷ್ಮೀ ಪೂಜೆಯು ಮಾಡುವ ದಿನ ಬಂದಿದೆ.ಆದ್ದರಿಂದ ಆ ಲಕ್ಷ್ಮೀ ದೇವಿಯನ್ನು ವಿಧಿವತ್ತಾಗಿ ಪೂಜಿಸಿ ಭಕ್ತಿ ಶ್ರದ್ಧೆಯಿಂದ ಪೂಜೆ ಮಾಡಿ ಲಕ್ಷ್ಮೀ ಕೃಪಾಕಟಾಕ್ಷಕ್ಕೆ ಪಾತ್ರರಾಗಿ .

ಬೆಳಕಿನ ಹಬ್ಬವೇ ದೀಪಾವಳಿ ಕೆಲವರಿಗೆ  ಅದು ದೀಪಗಳ ಹಬ್ಬವಾದರೆ ಮತ್ತೆ ಕೆಲವರಿಗೆ ಹೊಸ ವರ್ಷದ ಆರಂಭವಾಗಲಿದೆ. ವಿವಿಧ ಸಮುದಾಯದವರು ವಿಭಿನ್ನ ರೀತಿಯಲ್ಲಿ ಧಾರ್ಮಿಕ ವಿಧಿಗಳಲ್ಲಿ ಆಚರಿಸಿ ನಂಬಿಕೆಯಿಂದ ಕೂಡಿರುವ ಆಚರಣೆಗಳನ್ನು ಮಾಡುವ ಮೂಲಕ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ .

 

 

ದೀಪಾವಳಿಯ ದಿನದಂದು ದನ ಮತ್ತು ಸಿರಿ, ಸಂಪತ್ತಿನ ಅದೃಷ್ಟದ ದೇವತೆಯಾದ ಲಕ್ಷ್ಮೀ’ ಗಣೇಶ, ಕುಬೇರ, ಸರಸ್ವತಿ ದೇವತೆಗಳೊಂದಿಗೆ ಗಳಿಗೆ ಪೂಜಿಸಲಾಗುತ್ತದೆ. ಆದ್ದರಿಂದಲೇ  ದೀಪಾವಳಿಯಲ್ಲಿ ನಡೆಸುವ ಪೂಜೆಯನ್ನು ದೀಪಾವಳಿ ಪೂಜೆಯಂದು, ಲಕ್ಷ್ಮಿ ಪೂಜೆಯೆoದು ಮಹಾಲಕ್ಷ್ಮಿ ಪೂಜೆ ಎಂದು ಮತ್ತು ಲಕ್ಷ್ಮೀ ಗಣಪತಿ ಪೂಜೆ ಎಂದು ಕರೆಯಲಾಗುತ್ತದೆ.

 

 

ಆ ದಿನ ಸೂರ್ಯೋದಯಕ್ಕೂ ಮುಂಚೆ ಎದ್ದು ಮನೆಯನ್ನು ಸ್ವಚ್ಛ ಮಾಡಿ’ ತಲೆ ಸ್ನಾನವನ್ನು ಮಾಡಿ ಕೆಲವರು ದೀಪಾವಳಿ ಹಬ್ಬದ ದಿನ ಕಲಶ ಇಡುವ ಪದ್ಧತಿಯೂ ಸಹ ಇರುತ್ತದೆ.

 

 

ಕಲಶ ಇಡುವ ಜಾಗವನ್ನು ಮೊದಲಿಗೆ ಸ್ವಚ್ಛಗೊಳಿಸಿ ಬಳಿಕ ಮನೆಯ ಸುತ್ತಮುತ್ತ ಗಂಗಾಜಲವನ್ನು ಅಥವಾ ಗೋಮೂತ್ರವನ್ನು ಪ್ರೋಕ್ಷಿಸಿ ಮನೆಗೆ ಯಾವುದೇ ದುಷ್ಟಶಕ್ತಿಯೂ ಬರದಂತೆ ತಡೆಯುವ ಎಲ್ಲ ಕ್ರಮ ಕೈಗೊಳ್ಳ ಬೇಕು.

 

 

ಕಳಸದಲ್ಲಿ ಮುಕ್ಕಾಲು ಭಾಗ ಸ್ವಚ್ಛ ಮತ್ತು  ಶುದ್ಧ ನೀರನ್ನು ತುಂಬಿ ಒಂದು ಅಡಿಕೆ ,ಒಂದು ನಾಣ್ಯ ಮತ್ತು ಸ್ವಲ್ಪ ಅಕ್ಕಿಯನ್ನು ತುಂಬಿ ಮೇಲಕ್ಕೆ ಐದು ವೀಳ್ಯದೆಲೆಯನ್ನು ವೃತ್ತಾಕಾರದಲ್ಲಿ ತುದಿಭಾಗ ಹೊರಗಿರುವಂತೆ ಇಟ್ಟು ನಡುವೆ ಒಂದು ತೆಂಗಿನ ಕಾಯಿಯನ್ನು ಕೂರಿಸಬೇಕು. ಆ ತೆಂಗಿನ ಕಾಯಿಯನ್ನೇ ಲಕ್ಷ್ಮೀದೇವಿ ಎಂದು ಪೂಜಿಸಬೇಕು.

 

 

ನಂತರ ಒಂದು ತಟ್ಟೆಯಲ್ಲಿ ಕಲಶವನ್ನಿಟ್ಟು ಸ್ಥಾಪಿಸಿ ಅದರ ಮುಂದೆ ವಿಗ್ರಹವನ್ನು ಇಡಬೇಕು.  ಸ್ವಲ್ಪ ಚಿಲ್ಲರೆ ನಾಣ್ಯಗಳನ್ನು ಸಹ  ಅದರ ಮುಂದೆ ಇಡಬೇಕು.

ಗಣೇಶನಿಗೆ ಮೊದಲೇ ಮೊದಲು ಪೂಜೆ ಮಾಡಿದ ನಂತರವೇ ವಿಷ್ಣುವಿನ ಪೂಜೆ ಮಾಡಬೇಕು,  ಲಕ್ಷ್ಮೀ ದೇವಿಯ ಪೂಜೆ ಮಾಡಿದರೆ ಸಂಪೂರ್ಣವಾಗಿ ಫಲ ದೊರೆಯುವುದು.

 

 

ಶಾಸ್ತ್ರಗಳ ಪ್ರಕಾರ ದೇವಿ ಲಕ್ಷ್ಮೀ ಪೂಜೆ ಮಾಡುವ ವೇಳೆ ಕೆಲವೊಂದು ನಿಯಮಗಳು ಬಗ್ಗೆ ಗಮನ ನೀಡಬೇಕಾಗುತ್ತದೆ. ತಿಳಿಯದೆ ನಿಯಮಗಳನ್ನು ಅನುಸರಿಸಿದರೆ ದೇವಿ ಮುನಿಸಿಕೊಳ್ಳುತ್ತಾಳೆ. ಇದರಿಂದ ಆರ್ಥಿಕ ಸಮಸ್ಯೆ ಎದುರಾಗುತ್ತವೆ. ಹಾಗಾಗಿ ಲಕ್ಷ್ಮಿ ಪೂಜೆಯ ವೇಳೆ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡುವುದು ಬಹಳ ಮುಖ್ಯ.

 

 

ಭಗವಂತನಾದ ಶ್ರೀವಿಷ್ಣು ತುಳಸಿ ಪ್ರಿಯೆ ಆದರೆ ಲಕ್ಷ್ಮೀದೇವಿಗೆ ತುಳಸಿ ಮೇಲೆ ದ್ವೇಷವಿದೆ. ಆದ್ದರಿಂದ ಲಕ್ಷ್ಮೀ ಪೂಜೆ ಮಾಡುವ ವೇಳೆಯಲ್ಲಿ ತುಳಸಿಯನ್ನು ಉಪಯೋಗಿಸಬೇಡಿ ಲಕ್ಷ್ಮೀದೇವಿಗೆ ದೀಪಾ ಬೆಳಗುವಾಗ ಬತ್ತಿಯ ಬಣ್ಣ ಕೆಂಪು ಬಣ್ಣದ್ದಾಗಿರಲಿ ಹಾಗೆ ದೀಪವನ್ನು ಬಲಭಾಗದಲ್ಲಿ ಇಡಬೇಕು ಎಡಭಾಗ ಎಡಭಾಗದಲ್ಲಿ ದೀಪವನ್ನು ಇಡಬೇಡಿ.

ಧನಲಕ್ಷ್ಮಿ ಪೂಜೆ ಮಾಡುವ ವೇಳೆ ಅಗರಬತ್ತಿಯನ್ನು ಬಲಭಾಗಕ್ಕೆ ಹಚ್ಚಬೇಡಿ ಅಗರಬತ್ತಿ ಧೂಪ ದ್ರವ್ಯಗಳನ್ನು ಎಡಭಾಗಕ್ಕೆ ಇಡಬೇಕು.

ಬಿಳಿಯ ಹೂವನ್ನು ಲಕ್ಷ್ಮಿ ದೇವಿಗೆ ಅರ್ಪಿಸಬೇಡಿ. ಕೆಂಪು ಗುಲಾಬಿ ಅಥವಾ ಕೆಂಪು ಕಮಲದ ಹೂವನ್ನು ಲಕ್ಷ್ಮೀ ದೇವಿಗೆ  ಆ ದಿನ ಅರ್ಪಿಸಬೇಕು.

 

 

ಲಕ್ಷ್ಮಿ ಪೂಜೆ ಮಾಡುವ ವೇಳೆ ಪ್ರಸಾದವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ಹಾಗೆ ಹೂವು ಪತ್ರೆಯನ್ನು ದೇವಿಯ ಮುಂದೆ ಇರಿಸಿ ಈ ದಿನ ವಸ್ತು ವಾಹನ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು  ಖರೀದಿಸಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top