fbpx
ದೇವರು

ಈ ದಿನದ ದೀಪಾವಳಿಯ ಅಮಾವಾಸ್ಯೆ ದಿನ ಮನೆಯ ಕಷ್ಟ ಸಾಲ ಎಲ್ಲ ನಿವಾರಣೆಯಾಗಿ ನೆಮ್ಮದಿಯ ಜೀವನ ನಡೆಸ್ಬೇಕು ಅಂದ್ರೆ ಈ ಐದು ಕೆಲಸಗಳನ್ನು ತಪ್ಪದೇ ಮಾಡಿ

ಇಂದು ದೀಪಾವಳಿಯ ಅಮಾವಾಸ್ಯೆಯಾಗಿದ್ದು.  ನಿಮ್ಮ ದುರಾದೃಷ್ಟವನ್ನು

ತಡೆಯಲು ಈ ಐದು ಕೆಲಸಗಳನ್ನು ತಪ್ಪದೇ ಮಾಡಿ.

ಇಂದು ದೀಪಾವಳಿ ಅಮಾವಾಸ್ಯೆ ಚಂದ್ರನು ಸಂಪೂರ್ಣವಾಗಿ ಕಪ್ಪಾಗಿರುವ ದಿನ. ಈ ದಿನವನ್ನು ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ವರ್ಷ ದೀಪಾವಳಿಯ ಅಮಾವಾಸ್ಯೆ ಹತ್ತೊಂಬತ್ತನೇ ತಾರೀಖು ಗುರುವಾರ ಬಂದಿದ್ದು ಈ ಕೆಲಸಗಳನ್ನು ತಪ್ಪದೇ ಮಾಡಿ.ಅಮಾವಾಸ್ಯೆ ಎಂದರೆ ಅದರ ಅರ್ಥ ಆಮ ಎಂದರೆ ಆತ್ಮ  ವಾಸ ಎಂದರೆ ವಾಸ ಮಾಡುವುದು ಎಂದರ್ಥ. ಅಂದರೆ ಆತ್ಮಗಳು ವಾಸ ಮಾಡುವ ದಿನ ಎಂದರ್ಥ .

 

 

ಇದನ್ನು ಹಿಂದೂ ಧರ್ಮದವರು ಕತ್ತಲಿನ ದಿನ ಎಂದು ಸಹ ಕರೆಯುತ್ತಾರೆ. ಈ ದಿನ ಬಹಳ ಆಮಂಗಳಕರವಾದ ದಿನವೆಂದು ಸಹ ಪರಿಗಣಿಸಲಾಗಿದೆ.

ಅನೇಕ ಹಿಂದೂ ಧರ್ಮದ ಜನರು ಅಮಾವಾಸ್ಯೆಯ ದಿನದಂದು ಉಪವಾಸ ವ್ರತವನ್ನು ಸಹ ಆಚರಿಸುತ್ತಾರೆ. ಕೆಲವು ಭಕ್ತರು ಕೇವಲ ಅಮವಾಸ್ಯೆಯ ದಿನ ಒಂದು ಬಾರಿ ಊಟವನ್ನು ಸಹ ಮಾಡುತ್ತಾರೆ. ಈ ಅಮಾವಾಸ್ಯೆಯನ್ನು ಭಾರತದ ನಾನಾ ಭಾಗಗಳಲ್ಲಿ ಮುಖ್ಯವಾಗಿ  ಆಚರಿಸಲಾಗುತ್ತದೆ .

1.ಅಮಾವಾಸ್ಯೆಯು  ಆಮಂಗಳಕರವೇ ?

ಅನೇಕ ನಂಬಿಕೆಗಳ ಪ್ರಕಾರ ಅಮಾವಾಸ್ಯೆ ಮಂಗಳಕರವಲ್ಲ ಎಂದು ಸಹ ಹೇಳುತ್ತಾರೆ. ಈ ದಿನವೇ ಆತ್ಮಗಳು ಬಹಳ ಶಕ್ತಿಯಿಂದ  ಕೂಡಿರುತ್ತವೆ . ತಂತ್ರ ಮಂತ್ರಗಳನ್ನು ಅಮಾವಾಸ್ಯೆಯ ದಿನದಲ್ಲಿ ಮಾಡುತ್ತಾರೆ ಎಂದು  ನಂಬಲಾಗುತ್ತದೆ. ಆತ್ಮಗಳು ಎಲ್ಲೆಂದರಲ್ಲಿ ಓಡಾಡಿಕೊಂಡು ತಿರುಗಾಡುತ್ತಿರುತ್ತವೆ.ಪ್ರೇತಾತ್ಮಗಳು ದುಷ್ಟಶಕ್ತಿಗಳು ನಕಾರಾತ್ಮಕ ಶಕ್ತಿಗಳು ಇಂದು ವಿಶೇಷವಾಗಿ ಅಧಿಕ ಶಕ್ತಿಯನ್ನು ಹೊಂದಿ ಎಲ್ಲೆಂದರಲ್ಲಿ ತಿರುಗಾಡುತ್ತಾ ಇರುತ್ತವೆ.

 

 

2.ಮಾಟ ಮಂತ್ರಗಳನ್ನು ಮಾಡುವವರು ಅಮಾವಾಸ್ಯೆ ದಿನವೇ ಮಾಡುತ್ತಾರೆ.ಅದರಲ್ಲೂ ದೀಪಾವಳಿ ಅಮಾವಾಸ್ಯೆಯನ್ನು ಅತ್ಯಂತ ಆಮಂಗಳಕರವೆಂದು ಪರಿಗಣಿಸಲಾಗಿದೆ. ಆದ್ದರಿಂದಲೇ ದೀಪಾವಳಿಯ ಅಮಾವಾಸ್ಯೆ ಕತ್ತಲಾಗುವ ಸಂಜೆಯ ಸಮಯದಲ್ಲಿ ಎಲ್ಲ ಕಡೆಯಲ್ಲೂ ದೀಪಗಳನ್ನು ಹಚ್ಚಿ ಬೆಳಕನ್ನು ಮೂಡಿಸಲಾಗುತ್ತದೆ ಮತ್ತು ದೇವರನ್ನು ಸಹ ಪೂಜಿಸಲಾಗುತ್ತದೆ.ಮನೆ ತುಂಬಾ ದೀಪಗಳನ್ನು ಬೆಳಗಿಸಿ ದುಷ್ಟಶಕ್ತಿಗಳು ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಬಾರದಂತೆ ಮನೆಯ ಸುತ್ತಲೂ ಸಹ ದೀಪವನ್ನು ಬೆಳಗಿಸಲಾಗುತ್ತದೆ .ಕೆಲವು ಭಾಗಗಳಲ್ಲಿ ಈ ದಿನವೇ ಕಾಳಿ  ದೇವಿಯನ್ನು ಸಹ ಪೂಜಿಸಲಾಗುತ್ತದೆ . ಯಾಕೆಂದರೆ ಕಾಳಿ ದೇವಿಗೆ ದುಷ್ಟ ಶಕ್ತಿಗಳನ್ನು ನಾಶ ಮಾಡುವ ಶಕ್ತಿ ಇದೆ ಎಂದು ಪೂಜಿಸುತ್ತಾರೆ.

 

 

3.ದೀಪದ ಪೂಜೆಯನ್ನು ದೇವರಿಗೆಂದು ಅರ್ಪಿಸಲಾಗುತ್ತದೆ. ಇಷ್ಟ ದೇವತೆ ಮತ್ತು ಪಂಚ ಮಹಾಭೂತಗಳಾದ ( ಐದು ಪ್ರಮುಖವಾದ ಅಂಶಗಳಾದ ನೀರು, ಗಾಳಿ ,ಬೆಂಕಿ, ಆಕಾಶ ಮತ್ತು ಭೂಮಿ ತತ್ವಗಳಿಗೆ) ಕೆಲವು ಭಾಗಗಳಲ್ಲಿ ದೇವಿ ಲಕ್ಷ್ಮೀಗೂ ಸಹ ಪೂಜೆಯನ್ನು ಮಾಡಿ ದೀಪ ಬೆಳಗಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ದೀಪಾವಳಿಯ ಅಮಾವಾಸ್ಯೆಯ ದಿನ ಲಕ್ಷ್ಮೀ ಪೂಜೆಯನ್ನು ವಿಶೇಷವಾಗಿ ಭಕ್ತಿ ಶ್ರದ್ಧೆಯನ್ನು ಮಾಡಲಾಗುತ್ತದೆ. ಲಕ್ಷ್ಮೀ  ದೇವಿಯ ಜೊತೆಗೆ ಗಣೇಶ ದೇವನಿಗೆ, ಕುಬೇರ ದೇವನಿಗೆ ಮತ್ತು ದೇವಿ ಸರಸ್ವತಿಗೆ ಮತ್ತು ದೇವಿ ಪಾರ್ವತಿಗೂ ಸಹ ಪೂಜೆ ಸಲ್ಲಿಸಲಾಗುತ್ತದೆ.

 

 

4. ಈ ದಿನ ಎಲ್ಲಾ ದೀಪಗಳನ್ನು ಸಂಜೆಯ ಸಮಯದಲ್ಲಿ ಪುನಃ ಮನೆಯ ಸುತ್ತ ಬೆಳಗಿಸಬೇಕು. ದೀಪಗಳಿಂದ ಬರುವ ಬೆಳಕು ಮನೆಯ ಸುತ್ತ ಅದರ ದೀಪಗಳ ಬೆಳಕಿನ ಶಕ್ತಿಯೂ ದುಷ್ಟಶಕ್ತಿಗಳನ್ನು ಮತ್ತು ನಕಾರಾತ್ಮಕ ಶಕ್ತಿಗಳನ್ನು ದೂರ ಓಡಿಸುವುದು ಮತ್ತು ಜೀವನಕ್ಕೆ ಹೊಸ ಬೆಳಕನ್ನು, ಚೈತನ್ಯವನ್ನು ತಂದುಕೊಡುವುದು.

 

 

5.ದೀಪವನ್ನು ಬೆಳಗುವುದು ಮತ್ತು ಬೆಳಗಿಸಿ ಪೂಜೆ ಮಾಡುವುದು ಅಷ್ಟ ಐಶ್ವರ್ಯಗಳನ್ನು ಸಿದ್ಧಿಸುತ್ತದೆ ಎಂದು ನಂಬಲಾಗಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top