fbpx
ದೇವರು

ಕಿಚ್ಚ ಸುದೀಪ್ ಪ್ರಕಾರ ಬಿಗ್ ಬಾಸ್ ಸೀಸನ್-3ಯನ್ನು ಹುಚ್ಚ ವೆಂಕಟ್ ಗೆಲ್ಲುತ್ತಿದ್ದರಂತೆ..!

ಕಿಚ್ಚ ಸುದೀಪ್ ಪ್ರಕಾರ ಬಿಗ್ ಬಾಸ್ ಸೀಸನ್-3ಯನ್ನು ಹುಚ್ಚ ವೆಂಕಟ್ ಗೆಲ್ಲುತ್ತಿದ್ದರಂತೆ..!

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಪ್ರಾರಂಭವಾಗಿದ್ದು ಆರಂಭದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಸೆಲೆಬ್ರೆಟಿಗಳ ಜೊತೆ ಜನಸಾಮಾನ್ಯರು ಸ್ಪರ್ಧಿಗಳಾಗಿರುವ ಕಾರ್ಯಕ್ರಮದಲ್ಲಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ…

 

 

ಕಾರ್ಯಕ್ರಮವು ಇದೇ ಭಾನುವಾರದಿಂದ ಆರಂಭಗೊಂಡಿದ್ದು ಆ ನಿಟ್ಟಿನಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಲು ಕಳೆದ ವಾರ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು..ಆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್ “ಪ್ರತಿ ವರ್ಷ ನಮಗೆ ಈ ಸರಿ ಆರು ಗೆಲ್ಬೇಗಿತ್ತು ಇವರು ಗೆಲ್ಲಬಾರದಿತ್ತು ಎಂಬ ಪ್ರಶ್ನೆ ಬರ್ತಾನೆ ಇದೆ, ಆದರೆ ಆ ಪ್ರಶ್ನೆ ಗಳಿಗೆ ನಮಗೇ ಕೂಡ ಉತ್ತರ ಸಿಗ್ತಾಯಿಲ್ಲಾ ಏಕೆಂದರೆ ಗೆಲವು ಸೋಲು ಎಲ್ಲ ಜನರ ವೋಟಿಂಗ್ ಮೇಲೆ ಅವಲಂಬಿತವಾಗಿದೆ.”ಎಂದು ಹೇಳಿದ್ದಾರೆ.

 

 

ಮಾತು ಮುಂದುವರಿಸಿದ ಸುದೀಪ್ “ಒಂದು ಟೈಮ್ ನಲ್ಲಿ ವೋಟ್ ಹೇಗ್ ಬರ್ತಿತ್ತು ಅಂದ್ರೆ ಒಂದು ವೇಳೆ ಹುಚ್ಚ ವೆಂಕಟ್ ಹೊಡೆಯದೆ ಇದ್ದಿದ್ದರೆ ಅವರೇ ಗೆಲ್ಲುತ್ತಿದ್ದರು,, ಆದರೆ ನಮ್ಮ ಕೈನಲ್ಲಿ ಯಾವುದು ಇಲ್ಲ ಗೆಲುವು ಸೋಲು ಎಲ್ಲವು ಜನರ ವೋಟಿಂಗ್ ಮೇಲೆ ಅವಲಂಬಿತವಾಗಿದೆ” ಎಂದು ಹೇಳಿದರು..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top