fbpx
ಆರೋಗ್ಯ

ಈ ಚಿಹ್ನೆಗಳು ಕಾಣಿಸ್ಕೊಂಡ್ರೆ ಲಿವರ್ (ಯಕೃತ್ ) ಪ್ರಾಬ್ಲಮ್ ಅಲ್ದೆ ಮತ್ತಿನ್ನೇನು ಅಲ್ಲ ಇದನ್ನ ಮೊದ್ಲು ಸರಿ ಮಾಡ್ಕೊಳ್ಳಿ ಇಲ್ಲ ಜೀವಕ್ಕೆ ಅಪಾಯ !

ಈ ಸಮಸ್ಯೆಗಳು ಇದ್ದರೆ ಯಕೃತ್ತು(ಲಿವರ್) ಪ್ರಾಬ್ಲಮ್ ಇರಬಹುದು !

 

ಯಕೃತ್ತು(ಲಿವರ್ ) ದೇಹದ ದೊಡ್ಡ ಗ್ರಂಥಿಗಳಿರುವ ಅಂಗವಾಗಿದೆ ಮತ್ತು ನೂರಾರು ಕಾರ್ಯಗಳನ್ನು ಮಾಡುತ್ತದೆ.

ಪ್ರಮುಖ ಮೂರು ಕಾರ್ಯಗಳೆಂದರೆ ದೇಹವನ್ನು ಅಪಾಯಕಾರಿ ಅಂಶಗಳಿಂದ ರಕ್ಷಿಸುತ್ತದೆ , ದೇಹದ ಶಕ್ತಿಯ ಅಗತ್ಯತೆಗಳನ್ನು ಪೂರೈಸಲು ಗ್ಲುಕೋಸ್ ಸಂಗ್ರಹಿಸುತ್ತದೆ, ಜೀರ್ಣಕ್ರಿಯೆಗೆ ನೆರವಾಗಲು ಪಿತ್ತರಸ(Bile ) ಉತ್ಪಾದಿಸುತ್ತಿದೆ.

ವಿಷಪೂರಿತ ಆಹಾರ ಮತ್ತು ಆಲ್ಕೋಹಾಲ್, ಕಾಫಿ ಮತ್ತು ಸಂಸ್ಕರಿಸಿದ ಧಾನ್ಯಗಳು ಪಾನೀಯಗಳನ್ನು ಸೇವಿಸದಿದ್ದರೆ ನಿಮ್ಮ ಯಕೃತ್ತು ಆರೋಗ್ಯವನ್ನು ಚೆನ್ನಾಗಿಡಬಹುದು.

 

ವಾಕರಿಕೆ ಮತ್ತು ವಾಂತಿ :

 

ತಲೆತಿರುಗುವಿಕೆ, ಮೈಗ್ರೇನ್, ವಿಷಾಹಾರ, ಗರ್ಭವಸ್ಥೆ , ಆತಂಕ ಮತ್ತು ಖಿನ್ನತೆ ಇಂತಹ ಯಾವುದೇ ಸಮಸ್ಯೆಗಳಿರದೆ ಪ್ರತ್ಯೇಕವಾಗಿ ಅಥವಾ ಒಟ್ಟಾಗಿ
ವಾಕರಿಕೆ ಮತ್ತು ವಾಂತಿ ಆದರೆ ಇದು ಮೂತ್ರಪಿಂಡದ ಅಥವಾ ಯಕೃತ್ತು ಸಮಸ್ಯೆ ಇರಬಹುದು.

ದೇಹದ ವಿಷಪೂರಿತ ಅಂಶಗಳನ್ನು ತೊಡೆದು ಹಾಕುವಲ್ಲಿ ಹಾಗು ಚಯಾಪಚಯ ಮತ್ತು ಜೀರ್ಣಕ್ರಿಯೆ ಸರಿಯಾಗಿ ಲಿವರ್ ನಿರ್ವಹಿಸದೇ ಹೋದಾಗ ವಾಕರಿಕೆ ಮತ್ತು ವಾಂತಿ ಸಾಮಾನ್ಯವಾಗಿರುತ್ತದೆ.

 

ದೇಹದ ದುರ್ಬಲ ಸ್ಥಿತಿ ಹಾಗೂ ಆಯಾಸ :

ದೈನಂದಿನ ಕಾರ್ಯಗಳನ್ನು ಮಾಡಬೇಕಾದರೆ ಆಹಾರ ಪಚನೆ ಮಾಡುವ ಕೆಲಸ ಲಿವರ್ ನದ್ದು ಇದು ಸರಿಯಾಗಿ ಆಗದೆ ಇದ್ದರೆ ಆಯಾಸ ಮತ್ತು ಸುಸ್ತು ಕಟ್ಟಿಟ್ಟಬುತ್ತಿ.

ಹಸಿವಾಗದಿರುವುದು:

 

ಯಕೃತ್ತು ಜೀರ್ಣಕ್ರಿಯೆಗೆ ನೆರವಾಗಲು ಪಿತ್ತರಸ(Bile ) ಉತ್ಪಾದಿಸುತ್ತಿದೆ, ಇದು ಕೊಬ್ಬನ್ನು ಕರಿಗಿಸಲು ನೆರವಾಗುತ್ತದೆ ಒಂದು ವೇಳೆ ಆಹಾರ ಸರಿಯಾಗಿ ಜೀರ್ಣವಾಗದೆ ಇದ್ದರೆ ಹಸಿವಾಗುವುದಿಲ್ಲ ಹಾಗು ದೇಹದ ತೂಕದಲ್ಲಿ ಬಾರಿ ಇಳಿಮುಖ ಉಂಟಾಗುತ್ತದೆ.

 

ಜೀರ್ಣಕಾರಿ ಸಮಸ್ಯೆಗಳು:

 

ಯಕೃತ್ತು ತನ್ನ ಕೆಲಸ ಸರಿಯಾಗಿ ನಿರ್ವಹಿಸದಿದ್ದರೆ ಅತಿಸಾರ ಮತ್ತು ಅಜೀರ್ಣ ಹಾಗೆ ಜೀರ್ಣಾಂಗ ತೊಂದರೆಗಳನ್ನು ಸಹ ಕಾರಣವಾಗಬಹುದು.

ಪಿತ್ತರಸ ಉತ್ಪಾದನೆಯ ವೈಪರೀತ್ಯಗಳು ಪಿತ್ತಗಲ್ಲು, ಹೊಟ್ಟೆ ಉಬ್ಬುವುದು, ಮಲಬದ್ಧತೆ, ಕರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು.

ಮೂತ್ರ ಬಣ್ಣ ಬದಲಾವಣೆಗಳು:

 

ಮೂತ್ರದ ಬಣ್ಣದಲ್ಲಿ ಬದಲಾವಣೆಗೆ ಪ್ರಮುಖ ಕಾರಣ ಬೈಲಿರುಬಿನ್ ಒಂದು ವೇಳೆ ಕಿಡ್ನಿಯು ಬೈಲಿರುಬಿನ್ ಅಂಶವನ್ನು ಹೊರಹಾಕದೆ ಇದ್ದರೆ ಕಡು ಬಣ್ಣದ ಮೂತ್ರಕ್ಕೆ ಕಾರಣವಾಗುತ್ತದೆ.

ವಿಟಮಿನ್ ಬಿ ಮಾತ್ರೆಗಳು , ಅಂಟಿಬಿಯೋಟಿಕ್ಸ್ , ಮೂತ್ರದ ಸೋಂಕು , ಮೂತ್ರಪಿಂಡದ ಸಮಸ್ಯೆಗಳು ,ನಿರ್ಜಲೀಕರಣ(ಡಿಹೈಡ್ರಾಷನ್) ಇವುಗಳು ಸಹ ಕಡು ಬಣ್ಣದ ಮೂತ್ರಕ್ಕೆ ಕಾರಣವಾಗುತ್ತದೆ ಆದರೆ ದಿನಾಗಲೂ ಈ ಸಮಸ್ಯೆ ಮರುಕಳಿಸಿದರೆ ಡಾಕ್ಟರ್ ಬಳಿ ತೋರಿಸಿಕೊಳ್ಳುವುದು ಉತ್ತಮ.

 

ಚರ್ಮ ಹಳದಿ ಗಟ್ಟುವುದು :

 

ಪಿತ್ತಜನಕಾಂಗದ ಹಾನಿಯ ಆರಂಭಿಕ ಚಿಹ್ನೆಗಳು ಕಾಮಾಲೆ, ಚರ್ಮ, ಕಣ್ಣುಗಳು, ನಾಲಿಗೆ ಹಳದಿ ಬಣ್ಣಕ್ಕೆ ತಿರುಗುವುದು.

ಬಿಲಿರುಬಿನ್ ಹಳದಿ ವರ್ಣದ್ರವ್ಯ ಯಕೃತ್ತಿನಲ್ಲಿ ಸತ್ತ ಕೆಂಪು ರಕ್ತಕಣಗಳನ್ನು ಮುರಿಯುತ್ತದೆ.ಬಿಲಿರುಬಿನ್ ನಮ್ಮ ರಕ್ತ ಹಾಗು ಚರ್ಮದಲ್ಲಿ ಸೇರಿಕೊಂಡರೆ
ಚರ್ಮ ಹಾಗು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top