fbpx
ಆರೋಗ್ಯ

ಏನೇ ಮಾಡಿದ್ರು ಸರಿಯಾಗಿ ಬೆಳವಣಿಗೆ ಆಗ್ದೇ ಉದ್ದ ಬೆಳೀತಿಲ್ಲ ಅನ್ನೋರು ಈ ಆಹಾರ ಕ್ರಮ ಅನುಸರಿಸಿ ಉದ್ದ ಆಗಿ

ಬೆಳವಣಿಗೆ ಸಮಸ್ಯೆ ತುಂಬಾ ಜನ ಸಾಮಾನ್ಯವಾಗಿ ನೋಡುವಂತ ಸಮಸ್ಯೆ, ಈ ಬೆಳವಣಿಗೆ ಸಮಸ್ಯೆ ಗೆ ಮೂಲ ಕಾರಣ ೧.ವಂಶ ಪಾರಂಪರ್ಯ ೨.ಹಾರ್ಮೋನ್ಸ್ ಸಮಸ್ಯೆ
ನಾವು ಸಾಮಾನ್ಯವಾಗಿ ಕೇಳಿರುತ್ತಿರಿ ೧೮ ವರ್ಷ ಆದಮೇಲೆ ಬೆಳವಣಿಗೆ ಹಾಗುವುದಿಲ್ಲ ಎಂದು.

 

 

ಬನ್ನಿ ನಾವು ನಿಮಗೆ ಯಾವ ಯಾವ ಪದಾರ್ಥ ಮತ್ತು ಮನೆಮದ್ದು ನಿಮ್ಮ ಬೆಳವಣಿಗೆ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತೆ ಅಂತ ಹೇಳ್ತಿರಿ:

೧.ಹಾಲು ಮತ್ತು ಅಶ್ವಗಂಧ:

 

 

ಒಂದು ಲೋಟ ಹಾಲನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಅಶ್ವಗಂಧ ಮತ್ತು ಸ್ವಲ್ಪ ಸಕ್ಕರೆ ಹಾಕಿ ಕೊಂಡು ದಿನವೂ ಒಂದು ಬಾರಿ ಕುಡಿಯುವುದರಿಂದ ನೀವು ನಿಮ್ಮ ಬೆಳವಣಿಗೆ ಸಮಸ್ಯೆಯಿಂದ ಬಹಳ ಬೇಗ ಹೊರಬರಬಹುದು.

೨.ಎಳ್ಳು ಮತ್ತು ಅಶ್ವಗಂಧ:

 

 

ಸ್ವಲ್ಪ ಎಳ್ಳನ್ನು ತೆಗೆದುಕೊಂಡು ಅದನ್ನು ಪುಡಿ ಮಾಡಿಕೊಂಡು ಅದಕ್ಕೆ ಒಂದು ಚಮಚ ಅಶ್ವಗಂಧ ಮತ್ತು ಒಂದು ಚಮಚ ಜೇನಿನ ತುಪ್ಪವನ್ನು ಸೇರಿಸಿ ದಿನ ಒಂದು ಬಾರಿ ಸೇವಿಸಿವುದರಿಂದ ನಿಮ್ಮ ಸಮಸ್ಯೆ ಪರಿಹಾರ ಹಾಗುತ್ತದೆ.

೩.ಪಾಲಕ್ ಸೊಪ್ಪು :

ಪಾಲಕ್ ಸೊಪ್ಪು ನಲ್ಲಿರುವ ಪ್ರೋಟೀನ್ ನಿಮ್ಮ ಬೆಳವಣಿಗೆ ಹೆಚ್ಚಿಸಲು ಸುಲಭ ಪರಿಹಾರ ನೀಡುತ್ತದೆ.
ಪಾಲಕ್ ಸೊಪ್ಪನ್ನು ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ ಸ್ವಲ್ಪ ನೀರು ಮತ್ತು ಮೆಣಸಿನ ಪುಡಿ ಹಾಕಿಕೊಂಡು ದಿನ ಒಂದು ಹೊತ್ತು ಮಾಡುವುದರಿಂದ ನಿಮ್ಮ ಬೆಳವಣಿಗೆಯನ್ನು ನೀವೇ ಗಮನಿಸಬಹುದು.

೪.ಬಾದಾಮಿ ,ಎಳ್ಳು,ಕುಂಬಳಕಾಯಿ ಬೀಜ ಮತ್ತು ಅಶ್ವಗಂಧ ಪುಡಿ:

 

 

ಬಾದಾಮಿ ,ಎಳ್ಳು,ಕುಂಬಳಕಾಯಿ ಬೀಜ ವನ್ನು ಪುಡಿ ಮಾಡಿಕೊಂಡು ಅದನ್ನು ಅಶ್ವಗಂಧ ಪುಡಿಯ ಜೊತೆ ಮಿಶ್ರಣ ಮಾಡಿಕೊಂಡು ದಿನ ಒಂದು ಲೋಟ ಹಾಲಿನ ಜೊತೆ ಹಾಕಿಕೊಂಡು ತಿನ್ನುವುದರಿಂದ ನಿಮ್ಮ ಬೆಳವಣಿಗೆ ಸಮಸ್ಯೆ ಅತಿ ಬೇಗ ಮಾಯವಾಗುತ್ತದೆ .

೫.ಈರುಳ್ಳಿ ಮತ್ತು ಮೆಣಸಿನಪುಡಿ :

 

 

ಈರುಳ್ಳಿಯನ್ನು ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ ಸ್ವಲ್ಪ ನೀರು ಮತ್ತು ಮೆಣಸಿನಪುಡಿಯನ್ನು ಸೇರಿಸಿ ದಿನ ಊಟವಾದ ನಂತರ ಒಂದು ಸಲ ಕುಡಿಯುವುದರಿಂದ ನಿಮ್ಮ ಸಮಸ್ಯೆ ಮುಕ್ತಿ ಅತಿ ಬೇಗ ಸಿಗುತ್ತದೆ.

೬.ಬಾಳೆಹಣ್ಣು:

 

 

ದಿನ ರಾತ್ರಿ ಮಲಗುವ ಮುನ್ನ ಒಂದು .ಬಾಳೆಹಣ್ಣು ತಿನ್ನುವುದರಿಂದ ಅದರಲ್ಲಿರುವ ಸತ್ವ ನಿಮ್ಮ ಬೆಳವಣಿಗೆಯನ್ನು ಹೆಚ್ಚಿಸಿ ನೀವು ಅರೋಗ್ಯ ವಾಗಿರುವಂತೆ ಮಾಡುತ್ತದೆ .

೭.ಬೆಣ್ಣೆ ಹಣ್ಣು :

 

 

ಬೆಣ್ಣೆ ಹಣ್ಣಿನ ರಸವನ್ನು ದಿನ ಒಂದು ಲೋಟ ಕುಡಿಯುವುದರಿಂದ ನಿಮ್ಮ ಆರೋಗ್ಯದ ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಹಾಗುವುದಾರ ಜೊತೆ ಬೆಳವಣಿಗೆ ಅತಿ ಬೇಗ ಹೆಚ್ಜಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top